ಬೆಂಗಳೂರು ರಾಜ ಭವನದಲ್ಲಿ ನಡೆದ ಕರ್ನಾಟಕ ಸರ್ಕಾರ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ರಾಜ್ಯ ರಾಷ್ಟ್ರೀಯ ಸೇವಾ ಯೋಜನೆ ಘಟಕ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಸನ್ 2022-23 ನೇ ಸಾಲಿನ ರಾಜ್ಯ ಎನ್.ಎಸ್.ಎಸ್.ಸ್ವಯಂಸೇವಕ ಪ್ರಶಸ್ತಿಯನ್ನು ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಮುನವಳ್ಳಿ ಜಿ.ಎಸ್.ಪಿ. ಸಂಘದ ಅಜ್ಜಪ್ಪ ಗಡಮಿ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಗಂಗಾಧರ ಮಲ್ಲಿಕಾರ್ಜುನ ಕುರಬಗಟ್ಟಿ ಇವರಿಗೆ ಮಾರ್ಚ್ 17ರಂದು ರಾಜ ಭವನದಲ್ಲಿ ರಾಜ್ಯಪಾಲ ತಾವರ್ ಚಂದ್ ಗೆಹಲೋಟ್ ಅವರು ಪ್ರಶಸ್ತಿಯನ್ನು ನೀಡಿ ಗೌರವಿಸಿದರು.
ಈ ವೇಳೆ ಮುನವಳ್ಳಿ ಜಿ. ಎಸ್. ಪಿ. ಸಂಘದ ಚೇರಮನ್ನರು ಎಮ್ ಆರ್ ಗೋಪಶೆಟ್ಟಿ , ಗೌರವ ಕಾರ್ಯದರ್ಶಿಗಳು ವ್ಹಿ. ಎಸ್ ಯಕ್ಕುಂಡಿ, ಕೋಶಾಧ್ಯಕ್ಷರು ರವೀಂದ್ರ ಭೂ ಯಲಿಗಾರ, ನಿರ್ದೇಶಕರು ಮಹೇಶ ಯಲಿಗಾರ, ನಿರ್ದೇಶಕರು ಜೆ ಎ ರೇಣಕೆ, ಆಡಳಿತಾಧಿಕಾರಿಗಳು ಅಮೀತ ಕರೀಕಟ್ಟಿ , ಪ್ರಾಚಾರ್ಯರು ಡಾ. ಎಂ ಎಸ್ ಬಾಗೇವಾಡಿ, ದೈಹಿಕ ಶಿಕ್ಷಣ ನಿರ್ದೇಶಕರು ಪ್ರೊ ಶ್ರೀಶೈಲ ಪಂ ಗೋಪಶೆಟ್ಟಿ, ಜೆಎಸ್ಪಿ ಸಂಘದ ಚೇರಮನ್ನರು,ಕಾರ್ಯಕಾರಿ ಮಂಡಳಿಯ ಸದಸ್ಯರು,ಆಡಳಿತಾಧಿಕಾರಿಗಳು, ಪ್ರಾಚಾರ್ಯರು,ವಿವಿಧ ಒಕ್ಕೂಟಗಳ ಪದಾಧಿಕಾರಿಗಳು,ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿ ವೃಂದ ಅಭಿನಂದನೆ ಸಲ್ಲಿಸಿದರು.