ಇತಿಹಾಸ ಸೃಷ್ಟಿಸಿದ ಭಾರತ VS ಅಫ್ಘಾನ್ T20 ಕ್ರಿಕೆಟ್ ಪಂದ್ಯ

WhatsApp Group Join Now

ಬೆಂಗಳೂರು : ಭಾರತ ಹಾಗೂ ಅಫ್ಘಾನಿಸ್ತಾನ ನಡುವೆ ಬುಧವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಮೂರನೇ ಟಿ20 ಪಂದ್ಯ ಇತಿಹಾಸ ಸೃಷ್ಟಿಸಿದೆ. ಒಂದೇ ಪಂದ್ಯದಲ್ಲಿ ಎರಡು ಸೂಪರ್ ಓವರ್ ಮೂಲಕ ಕೊನೆಗೂ ಭಾರತ ಗೆದ್ದುಕೊಂಡಿದೆ.

ಮೊದಲು ಬ್ಯಾಟ್ ಮಾಡಿದ್ದ ಭಾರತ ( 20 ) ಓವರ್ ನಲ್ಲಿ 4 ವಿಕೆಟ್ ಕಳೆದುಕೊಂಡು 216 ರನ್ ಗಳಿಸಿತು. ಭಾರತದ ಪರ ನಾಯಕ ರೋಹಿತ್ ಶರ್ಮಾ ( 69 ) ಬಾಲ್ ಗೆ 121 ರನ್ ಕಲೆ ಹಾಕಿದರು. ಇದರಲ್ಲಿ  ಭರ್ಜರಿ 8 ಸಿಕ್ಸರ್ ಹಾಗೂ 11 ಬೌಂಡರಿ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲಿ 5 ನೇ ಶತಕ ದಾಖಲಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಕಾರಣರಾದರು.

ಇನ್ನೂ ಭಾರತದ ಪರ ರಿಂಕು ಸಿಂಗ್ 69 ರನ್ ಗಳಿಸಿ ಮಿಂಚಿದರೆ ಉಳಿದ ಆಟಗಾರರಿಂದ ಹೇಳಿಕೊಳ್ಳುವಂತ ಪ್ರದರ್ಶನ ಕಂಡುಬರಲಿಲ್ಲ‌. 212 ರನ್ ಗಳ ಗುರಿ ಬೆನ್ನಟ್ಟಿದ ಅಪ್ಘನ್ ತಂಡ 20 ಓವರ್ ನಲ್ಲಿ ಆರು ವಿಕೆಟ್ ನಷ್ಟಕ್ಕೆ 212 ರನ್ ಗಳಿಸಲಷ್ಟೇ ಶಕ್ತವಾಯಿತು. ಪಂದ್ಯ ಸಮಬಲ ಆದ ಕಾರಣ ಸೂಪರ್ ಓವರ್ ‌ಘೋಷಣೆ ಮಾಡಲಾಯಿತು.‌

ಮೊದಲ ಸೂಪರ್ ಓವರ್ ನಲ್ಲಿ ಅಫ್ಘಾನಿಸ್ತಾನ 17 ರನ್ ಕಲೆ ಹಾಕಿತ್ತು. ಗುರಿ ಬೆನ್ನಟ್ಟಿದ್ದ ಭಾರತ 16 ರನ್ ಗಳಿಸಿ ಮತ್ತೊಮ್ಮೆ ಪಂದ್ಯ ಎರಡನೇ ಸೂಪರ್ ಓವರ್ ಹಂತಕ್ಕೆ ತಲುಪಿತು. ಎರಡನೇ ಸೂಪರ್ ಓವರನಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ 11 ರನ್ ಗಳಿಸಿತು. ನಂತರ ಅಫ್ಘಾನಿಸ್ತಾನ ಕೇವಲ ಮೂರು ಎಸೆತದಲ್ಲಿ ಎರಡು ವಿಕೆಟ್ ಕಳೆದುಕೊಂಡು ಕೊನೆಗೂ ಸೋಲು ಅನುಭವಿಸಿದೆ.

ಇವತ್ತಿನ ಭಾರತ ಹಾಗೂ ಅಫ್ಘಾನಿಸ್ತಾನ ಟಿ20 ಪಂದ್ಯ ಹಲವು ವಿಶೇಷ ದಾಖಲೆ ಸೃಷ್ಟಿಸಿದೆ. ಚುಟುಕು ಕ್ರಿಕೆಟ್ ನಲ್ಲಿ ಅತಿ ಹೆಚ್ಚು ಶತಕ ಭಾರಿಸಿದ ಆಟಗಾರರಾಗಿ ರೋಹಿತ್ ಶರ್ಮಾ ದಾಖಲೆ ನಿರ್ಮಿಸಿದ್ದಾರೆ. ಇನ್ನೂ ಇದೇ ಪಂದ್ಯದಲ್ಲಿ ಕನ್ನಡಿಗರ ಹೃದಯ ಗೆದ್ದ ವಿರಾಟ್ ಕೊಹ್ಲಿ ಅದ್ಬುತ ಫೀಲ್ಡಿಂಗ್ ಮೂಲಕ‌ ಭಾರತದ ಗೆಲುವಿಗೆ ಸಹಕಾರಿ ಆಗಿದ್ದಾರೆ.

About The Author