ಕನ್ನಡ ಸಾಹಿತ್ಯ ಪರಿಷತ್ತ ತಾಲೂಕಾ ಘಟಕದಿಂದ ಹಮ್ಮಿಕೊಂಡಿದ್ದ ಗಾಂಧಿ ಓದು ಕಾರ್ಯಕ್ರಮ ಉದ್ದೇಶಿಸಿ ಕಸಾಪ ಅಧ್ಯಕ್ಷ ಪಾಂಡುರಂಗ ಜಟಗನ್ನವರ ಮಾತನಾಡಿದರು.

WhatsApp Group Join Now

ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಸರಕಾರಿ ಶಾಸಕರ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆ ನಂ 4 ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತ ತಾಲೂಕಾ ಘಟಕದಿಂದ ಹಮ್ಮಿಕೊಂಡಿದ್ದ ಗಾಂಧಿ ಓದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಕಸಾಪ ಅಧ್ಯಕ್ಷ ಪಾಂಡುರಂಗ ಜಟಗನ್ನವರ ವಹಿಸಿ ಮಾತನಾಡಿ ಅವರು, ಗಾಂಧಿಜೀಯವರ ಆದರ್ಶಗಳನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಕರೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಶಾಲೆಯ ಮುಖ್ಯೋಪಾಧ್ಯಾಯ ಎಂ.ಎಚ್. ಚಾಬುಕಸ್ವಾರ ಮಾತನಾಡಿ, ಗಾಂಧೀಜಿ ಇಡೀ ಜಗತ್ತಿಗೆ ಶಾಂತಿ ಮತ್ತು ಸಹೋದರತೆಯನ್ನು ಸಾರಿದರು. ಅವರ ಸ್ಮರಣೆಗಾಗಿ ವಿಶ್ವಸಂಸ್ಥೆ ಅವರ ಜಯಂತಿಯನ್ನು ಅಂತಾರಾಷ್ಟ್ರೀಯ ಅಹಿಂಸಾ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದು ಹೇಳಿದರು.
ಶಿಕ್ಷಣ ಸಂಯೋಜಕ ಶ್ರೀಕಾಂತ ಕರಲಿಂಗಪ್ಪನವರ ಮಾತನಾಡಿ, ಗಾಂಧೀಜಿಯವರು ಪ್ರಾಮಾಣಿಕತೆ ಹಾಗೂ ಸತ್ಯ ನುಡಿಯುವುದನ್ನು ವಿದ್ಯಾರ್ಥಿ ದೆಸೆಯಿಂದಲೇ ರೂಢಿಸಿಕೊಂಡಿದ್ದರು. ವಿದ್ಯಾರ್ಥಿಗಳು ಸಹ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಬೇಕು ಎಂದು ತಿಳಿಸಿದರು.
ಗಾಂಧಿ ಓದು ನಿಮಿತ್ಯ ಗಾಂಧೀಜಿಯ ಜೀವನ, ಸಾಧನೆ ಕುರಿತು ಬೋಳುವಾರು ಮಹಮ್ಮದ್ ಕುಂಞ ಅವರು ಮಕ್ಕಳಿಗಾಗಿ ಬರೆದ ಪಾಪು ಬಾಪು ಕೃತಿಯನ್ನು ೨೬ ವಿದ್ಯಾರ್ಥಿಗಳು ವಾಚನ ಮಾಡಿದರು.
ವೇದಿಕೆಯಲ್ಲಿ ಉಪ ವಲಯ ಅರಣ್ಯಾಧಿಕಾರಿ ವಿನಾಯಕ ಪಾಟೀಲ, ಅರಣ್ಯಾಧಿಕಾರಿ ಪ್ರತಿಭಾ ಕೊಪ್ಪಳ, ಕಸಾಪ ಗೌರವ ಕೋಶಾಧ್ಯಕ್ಷ ಎಸ್.ಎಸ್ ಹುಚ್ಚನ್ನವರ, ಆರ್.ಆಸ್. ಸಂಕನ್ನವರ, ಅರಣ್ಯ ಇಲಾಖೆಯ ಆನಂದ ಮಸಳಿ ಇತರರು ಉಪಸ್ಥಿತರಿದ್ದರು.
ಕಸಾಪ ಗೌರವ ಕಾರ್ಯದರ್ಶಿ ಆರ್.ಕೆ.ಬಿಕ್ಕಣ್ಣವರ ಸ್ವಾಗತಿಸಿದರು. ಶಿಕ್ಷಕ ಎನ್.ಎ. ಶೇಖ ನಿರೂಪಿಸಿದರು. ಕಸಾಪ ಸದಸ್ಯ ಎಸ್.ಸಿ. ಹುರಕಡ್ಲಿ ವಂದಿಸಿದರು.

About The Author