ಪರಭಾಷೆ ನಾಮಫಲಕ ಕಿತ್ತೊಗೆದು ಕನ್ನಡ ನಾಮಫಲಕ ಅಳವಡಿಸುವಂತೆ ಕರವೇ ಆಕ್ರೋಶ

WhatsApp Group Join Now


ಕಾಗವಾಡ: ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಪರಭಾಷೆ ನಾಮಫಲಕ ಕಿತ್ತೊಗೆದು ಕನ್ನಡ ನಾಮಫಲಕ ಆಳವಡಿಸುವಂತೆ
ಕಾಗವಾಡ ಪಟ್ಟಣದಲ್ಲಿ ಕರವೇ ಅಧ್ಯಕ್ಷ ಸಿದ್ದು ಒಡೆಯರ್ ನೇತೃತ್ವದಲ್ಲಿ ಕಾರ್ಯಕರ್ತರು ಸೇರಿದಂತೆ ಆಕ್ರೋಶ ವ್ಯಕ್ತಪಡಿಸಿದರು.

ಕಾಗವಾಡ ಪಟ್ಟಣದಲ್ಲಿ ಮರಾಠಿ,ಆಂಗ್ಲ ಭಾಷೆಯಲ್ಲಿ ಹಾಕಿದ್ದ ನಾಮಫಲಕಗಳನ್ನು ತೆರವುಗೊಳಿಸುವ ಅಭಿಯಾನ ಹಮ್ಮಿಕೊಂಡಿದ್ದರು. ಇದೆ ವೇಳೆ ನಾರಾಯಣಗೌಡ ಬಣದ ತಾಲ್ಲೂಕಾಧ್ಯಕ್ಷ ಸಿದ್ದು ಒಡೆಯ‌ ಮಾತನಾಡಿ,ರಾಜ್ಯ ಸರ್ಕಾರ
ಅಂಗಡಿ ಮೇಲೆ ಹಾಕಿರುವ ನಾಮಫಲಕಗಳಲ್ಲಿ ಕಡ್ಡಾಯವಾಗಿ 60% ಕನ್ನಡ ಬಳಕೆ ಮಾಡಬೇಕು ಎಂದು ಆದೇಶ ಹೊರಡಿಸಿದ್ದಾರೆ.ಆದರೂ
ಕೆಲ ಅಂಗಡಿ ಮಾಲೀಕರು ಇನ್ನೂ ಮರಾಠಿ ಮತ್ತು ಆಂಗ್ಲ ಭಾಷೆಯಲ್ಲಿ ನಾಮಫಲಕಗಳನ್ನು ತೆರವುಗೊಳಿಸುವ ಕಾರ್ಯವಾಗಿಲ್ಲ ಹೀಗಾಗಿ ನಮ್ಮ ಕರವೇ ವತಿಯಿಂದ ಎಚ್ಚರಿಕೆ ಸಂದೇಶವಾಗಿ ಇವತ್ತು ಅಂತಹ ಬ್ಯಾನರ್ ಗಳನ್ನು ಹರಿದು ಹಾಕಲಾಗಿದೆ
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಮಾತನಾಡಿದ ಭಾರತಿ ದೊಂಡಾತಿ, ಶಾಲಾ-ಕಾಲೇಜು, ಹೊಟೇಲ್, ಬಟ್ಟೆ ಅಂಗಡಿ, ಮಾಲ್‌ಗಳು, ಆಸ್ಪತ್ರೆಗಳು ಸೇರಿದಂತೆ ಇನ್ನಿತರ ಅಂಗಡಿಗಳ ಮೇಲೆ ಶೇ. 60 ರಷ್ಟು ಕನ್ನಡ ಭಾಷೆಯುಳ್ಳ
ನಾಮಫಲಕ ಅಳವಡಿಸಬೇಕು. ಇಲ್ಲದಿದ್ದರೆ ಪರಭಾಷೆ ನಾಮಫಲಕ ಅಳವಡಿಸಿದವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವದು
ಎಂದರು.
ಕರವೇ ಅಧ್ಯಕ್ಷ ಸಿದ್ದು ಒಡೆಯ‌, ಉಪಾಧ್ಯಕ್ಷ ಗಣೇಶ ಕೋಳೆಕರ,ಶಿವಾನಂದ ನವಿನಾಳೆ,ಫಾರುಖ್
ಮೆಟಗೇರಿ..ಪದ್ಮಣ್ಣ ಕೊಳೆಮನಿ,ರಾಹುಲ್
ಕಾಂಬಳೆ,ಬಾಬು ಕುರುಂದವಾಡೆ.ಅಜಯ
ಅಲಾಸ್ಕ‌,ಮಹೇಶ ಕಮತೆ,ಸಚಿನ್
ಪಾಟೀಲ್, ಗುಂಡು ನ್ಯಾಮಗೌಡನಿಯಾಜ್ ಇನಾಮದಾರ,ಕೃಷ್ಣಾ
ದೊಂಡಾರೆ,ಅಸ್ಲಂ ಜಮಾದಾರ ಸೇರಿದಂತೆ ಅನೇಕ ಕರವೇ ಕಾರ್ಯಕರ್ತರು ಭಾಗವಹಿಸಿದ್ದರು

About The Author