
WhatsApp Group
Join Now
ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕು ದೊಡಮಂಗಡಿ ಗ್ರಾಮದಲ್ಲಿ ಇದ್ದಂತ ನ್ಯಾಯಾಲಯ ಸಂಕೀರ್ಣದ ಮುಂದೆ ಇರುವ ರಾಮದುರ್ಗ ಹಾಗೂ ಮುಳ್ಳೂರು ಮೇನ್ ರೋಡ್ ರಾಜ್ಯ ಹೆದ್ದಾರಿ 34 ಔರಾದ ಸದಾಶಿವಗಡ ರಸ್ತೆ ಬದಿಗೆ ನ್ಯಾಯಾಲಯಗಳು ಇರುವುದರಿಂದ ನ್ಯಾಯಾಲಯಕ್ಕೆ ಬರುವ ಸಾರ್ವಜನಿಕರು ಮತ್ತು ನ್ಯಾಯವಾದಿಗಳು ರಸ್ತೆ ದಾಟುವ ಸಂದರ್ಭದಲ್ಲಿ ಬಹಳಷ್ಟು ತೊಂದರೆಯಾಗುತ್ತಿದೆ. ವಾಹನಗಳು ಬಹಳ ವೇಗವಾಗಿ ಚಲಿಸುತ್ತಿರುವುದರಿಂದ ಭಯದ ವಾತಾವರಣ ಉಂಟಾಗಿದೆ. ಆದ್ದರಿಂದ ಸ್ಪೀಡ್ ಬ್ರೇಕರ್ ನಿರ್ಮಾಣ ಮಾಡಬೇಕೆಂದು ಸಮಾಜಸೇವಕರಾದ ಪ್ರಶಾಂತ ಅಂಗಡಿ ಅವರು ಲೋಕೋಪಯೋಗಿ ಇಲಾಖೆಗೆ ಮನವಿ ಸಲ್ಲಿಸಿದರು
ನಮ್ಮ ಮನವಿಗೆ ಸಹಾಯಕಕಾರ್ಯನಿರ್ವಾಹಕ
ಅಭಿಯಂತರರು ಲೋಕೋಪಯೋಗಿ ಇಲಾಖೆ ಉಪವಿಭಾಗ ರಾಮದುರ್ಗ ಅಧಿಕಾರಿಗಳು ಸ್ಪಂದನೆ ನೀಡಿ ರವಿವಾರ ಬೆಳಗ್ಗೆ ನ್ಯಾಯಾಲಯ ಸಂಕೀರ್ಣದ ಮುಂದೆ ಸ್ಪೀಡ್ ಬ್ರೇಕರ್ ಹಾಕಿದರು.


