
ರಾಮದುರ್ಗ ತಾಲೂಕಿನ ಮನಿಹಾಳ-ಸುರೇಬಾನ ಗ್ರಾಮದಲ್ಲಿ ಹಮ್ಮಿಕೊಂಡ ಕರ್ನಾಟಕ
ಸರ್ಕಾರದ ಪಂಚ್ ಗ್ಯಾರಂಟೆಗಳ ಸಮಾವೇಶ ಕಾರ್ಯಕ್ರಮವನ್ನು ವಿಧಾನಸಭೆ ಮುಖ್ಯ
ಸಚೇತಕ ಹಾಗೂ ಶಾಸಕ ಅಶೋಕ ಪಟ್ಟಣ ಉದ್ಘಾಟಿಸಿ ಮಾತನಾಡಿದ ಅವರು,
ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ನೀಡಿದ ಭರವಸೆಯಂತೆ ನಮ್ಮ ಕಾಂಗ್ರೆಸ್ ಸರಕಾರ
ಐದು ಯೋಜನೆಗಳನ್ನು ಈಗಾಗಲೇ ಸಮರ್ಪಕವಾಗಿ ಅನುಷ್ಠಾನಕ್ಕೆ ತಂದಿದ್ದು, ಈ
ಯೋಜನೆಯಡಿ ಬರದಿರುವ ಫಲಾನುಭವಿಗಳು ಇದ್ದರೆ ನಮ್ಮ ಸಂಬಂಧಿಸಿದ
ಅಧಿಕಾರಿಗಳನ್ನು ಸಂಪರ್ಕಿಸಿ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು ಗೃಹ ಲಕ್ಷ್ಮೀ
ಯೋಜನೆಯಡಿ ತಾಲೂಕಿನಲ್ಲಿ 51,513 ಫಲಾನುಭವಿಗಳಿಗೆ ಪ್ರತಿ ತಿಂಗಳ 10 ರಿಂದ 11
ಕೋಟಿ ರೂ.ಗಳ ಸಹಾಯ ಧನ ಮನೆ ಮನೆಗೆ ತಲುಪುತ್ತಿದೆ. ಅನ್ನಭಾಗ್ಯ
ಯೋಜನೆಯಡಿ ತಾಲೂಕಿನಲ್ಲಿ 62,308 ಫಲಾನುಭವಿಗಳ ಕುಟುಂಬಗಳಿಗೆ 20.72
ಕೋಟಿ ನೀಡಲಾಗಿದೆ.
ಗೃಹ ಜ್ಯೋತಿಯಲ್ಲಿ 61,139 ನೊಂದಾಯಿಸಲಾದ
ಕುಟುಂಬಗಳಿದ್ದು ಅದರಲ್ಲಿ 59,236 ಫಲಾನುಭವಿಗಳು ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ.
67,55,439 ಸಂಚಾರ
ಶಕ್ತಿ ಯೋಜನೆಯಲ್ಲಿ ಇದುವರೆಗೆ
ಮಾಡುತ್ತಿರುವ
ಸಾರ್ವಜನಿಕರು. ಆರು ತಿಂಗಳಲ್ಲಿ 14 ಕೋಟಿಗೂ ಅಧಿಕ ಹಣ ವ್ಯಯವಾಗಿರುವ
ಕುರಿತು ತಿಳಿದು ಇಲಾಖೆಯ ಅಂಕಿ ಸಂಖ್ಯೆಗಳ ಮೂಲಕ ಮಾಹಿತಿ ಲಭ್ಯವಾಗಿದೆ ಎಂದು ಹೇಳಿದರು.
ಈ ಒಂದು ಕಾರ್ಯಕ್ರಮದಲ್ಲಿ ತಹಶೀಲ್ದಾರ ಸುರೇಶ್ ಚವಲಾರ, ತಾಲೂಕು ಪಂಚಾಯಿತ. ಇಒ ಬಸವರಾಜ ಐನಾಪೂರ, ರಾಮದುರ್ಗ ಹೆಸ್ಕಾಂ ಎಇ ಕಿರಣ
ಸಣ್ಣಕ್ಕಿ, ಸಿ.ಡಿ.ಪಿ.ಓ ಶಂಕರ ಕುಂಬಾರ, ಸಾರಿಗೆ ಘಟಕ ವ್ಯವಸ್ಥಾಪಕ ಎಚ್.ಆರ್.ಪಾಟೀಲ, ಸುರೇಬಾನ ಗ್ರಾಪಂ ಅಧ್ಯಕ್ಷೆ ಪುಷ್ಪ ಸುಣಗಾರ, ಮನಿಹಾಳ
ಗ್ರಾ.ಪಂ ಅಧ್ಯಕ್ಷೆ ಹನಮವ್ವ ಪಿಡ್ಡಣ್ಣವರ, ಅಭಿವೃದ್ಧಿ ಅಧಿಕಾರಿಗಳಾದ ಬಿ.ಎಸ್.
ಗುಡದನ್ನವರ, ಈರನಗೌಡ ಪಾಟೀಲ, ನಧಾಫ ಸೇರಿದಂತೆ ಅಣೆಕರು ಉಪಸ್ಥಿತರಿದ್ದರು.
ಸುಹಾಸ್ ಸರದೇಶಪಾಂಡೆ ನಿರೂಪಿಸಿ, ವಂದಿಸಿದರು.