ರಾಮದುರ್ಗ ತಾಲೂಕಿನಾದ್ಯಂತ ಸೇರಿದಂತೆ ಗಣೇಶ ಹಬ್ಬವನ್ನು ಬುಧವಾರ ಸಂಭ್ರಮದಿಂದ ಆಚರಿಸಲಾಯಿತು.

ಜನರು ಮನೆಗಳಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡಿ ಪೂಜೆ ಸಲ್ಲಿಸಿದರು. ಹಾಗೆಯೇ ಕೆಲವು ಆಯ್ದ ಸ್ಥಳಗಳಲ್ಲಿ ಯುವಕರು ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿದರು. ನಗರಾದ್ಯಂತ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಿತು.

ಈ ಬಾರಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ ಸ್ಥಳಗಳಲ್ಲಿ ಪೊಲೀಸರು ಹೆಚ್ಚಿನ ನಿಗಾವಹಿಸಿದ್ದಾರೆ.

ಪ್ರತಿಷ್ಠಾಪನೆ : ಪಟ್ಟಣದ ವಾಜಪೇಯಿ ನಗರ, ಗಾಂಧಿನಗರ, ವಡ್ಡರ ಓಣಿ, ಮಡ್ಡಿಓಣಿ, ಜುನೀಪೇಠ, ಈಟಿಓಣಿ, ನವೀಪೇಠ, ರಾಧಾಪೂರಪೇಠ, ಕಾಶಿಪೇಠ,
ನಾರಾಯಣಪೇಠ, ನಿಂಗಾಪೂರಪೇಠ, ಬಾಣಕಾರಪೇಠ, ತೇರಬಜಾರ, ನಾಗಪ್ಪನಕಟ್ಟಿ
ಯಾನಂಪೇಠ, ಜೋಗಿಗಲ್ಲಿ, ಪಡಕೋಟಿ
ಕಿಲ್ಲಾ, ಒಂಟಿಓಣಿ, ಗಡದಕೇರಿ
ಸರಸ್ವತಿನಗರ, ಬೀಳಗಿನಗರ
ಶ್ರೀಪತಿನಗರ, ಮಹಾಂತೇಶನಗರ,
ಭಾಗ್ಯನಗರ, ಅಂಬೇಡ್ಕರನಗರ,
ಕಿಲಬನೂರ, ಹಾಗೂ ರಾಮದುರ್ಗ ತಾಲೂಕಿನ ಸುತ್ತಮುತ್ತ ಹಳ್ಳಿಗಳಲ್ಲಿ ರಸ್ತೆ ಸೇರಿದಂತೆ ಪ್ರಮುಖ ಕಡೆಗಳಲ್ಲಿ ಬೃಹತ್ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಐದು ದಿನ, ಒಂಬತ್ತು ದಿನ, ಹನ್ನೊಂದು ದಿನಗಳ ಕಾಲ ಮೂರ್ತಿ ಪ್ರತಿಷ್ಠಾಪನೆ ಮಾಡುತ್ತಿದ್ದು, ದಿನವೂ ಸಂಜೆ ಜನ ಮೂರ್ತಿ ವೀಕ್ಷ ಣೆಗೆ ಬರುವವರು.