ಲೋಕಾಯುಕ್ತ ಇಲಾಖೆ ಹಮ್ಮಿಕೊಂಡ ಜನ ಸಂಪರ್ಕ ಸಭೆ.

WhatsApp Group Join Now

ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ತಾಲೂಕು ಪಂಚಾಯತ ಸಭಾ ಭವನದಲ್ಲಿ ಲೋಕಾಯುಕ್ತ ಇಲಾಖೆ ಹಮ್ಮಿಕೊಂಡ ಜನ ಸಂಪರ್ಕ ಸಭೆಯಲ್ಲಿ ಎಸ್ಪಿ ಹನಮಂತರಾಯ ಅವರು ಜನ ಸಂಪರ್ಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಾರ್ವಜನಿಕರು ತಮ್ಮ ಏನೇ ಸಮಸ್ಯೆಗಳಿದ್ದರು ಜನ ಸಂಪರ್ಕ ಸಭೆಯಲ್ಲಿ ಅಷ್ಟೇ ಅಲ್ಲದೆ ನೇರವಾಗಿ ನಮ್ಮ ಬೆಳಗಾವಿ ಕಛೇರಿಗೆ ಬಂದು ನಮ್ಮಗೆ ದೂರು ನೀಡಬಹುದು. ಅಷ್ಟೇ ಅಲ್ಲದೆ ತಮಗೆ ಆದ ತೊಂದರೆಯನ್ನು ಸಾರ್ವಜನಿಕರು ಕಛೇರಿಯ ದೂರವಾಣಿ ಸಂಖ್ಯೆಗೆ ಕರೆ ಮಾಡುವ ಮೂಲಕ ತಮ್ಮ ಸಮಸ್ಯೆ ಮತ್ತು ದೂರು ನೀಡಬಹುದಾಗಿದೆ.
ಹಾಗೂ ಹದಿನೈದು ದಿನ ಬಿಟ್ಟು ದಿನಾಂಕ ನಿಗಧಿ ಮಾಡಿ, ಮತ್ತೆ ಸಾರ್ವಜನಿಕ ಸಂಪರ್ಕ ಸಭೆ ಏರ್ಪಡಿಸಿ ರಾಮದುರ್ಗ ತಾಲೂಕಿನ ಸಾರ್ವಜನಿಕರ ದೂರು ಸ್ವೀಕರಿಸಲಾಗುವುದು ಎಂದು ಹೇಳಿದರು.

ಇದೇ ಸಂಧರ್ಭದಲ್ಲಿ ಜಾಗೆ ವಿವಾದಕ್ಕೆ ಸಂಬಂಧಿಸಿದ ಎರಡು ಅರ್ಜಿಗಳು ಹಾಗೂ ಚಿಲಮೂರ ಗ್ರಾಮದ ಸರಕಾರಿ ಶಾಲೆಯಲ್ಲಿ ಹಾಲಿನಪುಡಿ ಮಾರಾಟ ಮಾಡಿರುವ ಕುರಿತು ಸಾರ್ವಜನಿಕರು ದೂರು ನೀಡಿದರು. ಸ್ಥಳದಲ್ಲಿಯೇ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಟಿ ಬಳಿಗಾರ ಹಾಗೂ ಅಕ್ಷರ ದಾಸೋಹ ಅಧಿಕಾರಿ ಬಿ.ಎಫ್ ಮುನವಳ್ಳಿ ಅವರನ್ನು ವಿಚಾರಿಸಿ, ಕೈಗೊಂಡ ಕ್ರಮಗಳ ಬಗೆಗೆ ಮಾಹಿತಿ ಪಡೆದುಕೊಂಡು ಸೂಕ್ತ ವಿಚಾರಣೆ ನಡೆಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಸ್‌ಪಿ ಹಣಮಂತರಾಯ್ ಹೇಳಿದರು.
ಈ ಒಂದು ಸಭೆಯಲ್ಲಿ ಲೋಕಾಯುಕ್ತ ಸಿಪಿಐ ಅಜೀತ್ ಕಲಾದಗಿ, ಡಿವೈಎಸ್‌ಪಿ ಬಿ.ಎಸ್. ಪಾಟೀಲ, ಭರತರಡ್ಡಿ, ತಹಶೀಲ್ದಾರ ಪ್ರಕಾಶ ಹೊಳೆಯಪ್ಪಗೋಳ, ಸಿಪಿಐ ಐ.ಆರ್. ಪಟ್ಟಣಶೆಟ್ಟಿ, ತಾಲೂಕು ಪಂಚಾಯತ ಎಡಿ, ಎ.ಎಸ್. ಕುಂಬಾರ, ನಿರಂಜನ ಪಾಟೀಲ ಸೇರಿದಂತೆ ತಾಲೂಕಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ವರದಿ ಪ್ರಶಾಂತ್ ಅಂಗಡಿ

About The Author