ವಕೀಲನ ಮಗನ ಬರ್ಬರ ಹತ್ಯೆ

WhatsApp Group Join Now

ಮಂಡ್ಯ: ಶ್ರೀರಂಗಪಟ್ಟಣ ತಾಲೂಕಿನ ಬೆಳಗೊಳ ಹೊಬಳಿಯ ಪಾಲಹಳ್ಳಿ ಗ್ರಾಮದಲ್ಲಿ ಬೆಳಂಬೆಳಿಗ್ಗೆಯೇ(11/02/2024)ರೌಡಿ ಶೀಟರ್ ನ ಬರ್ಬರ ಹತ್ಯೆ ಮಾಡಿದ್ದು ಜನ ಭಯಬೀತರಾಗಿದ್ದಾರೆ.
ಪಾಲಹಳ್ಳಿ ಗ್ರಮದ ವಕೀಲ ನಾಗೇಂದ್ರ ಎಂಬುವರ ಮಗ ಪ್ರಜ್ವಲ್(29) ಅಲಿಯಾಸ್ ಪಾಪು ಕೊಲೆಯಾಗಿದ್ದು, ಪಾಲಹಳ್ಳಿ ಗ್ರಾಮದಲ್ಲಿ ಬೇಕರಿ ಒಂದರ ಮುಂದೆ ಇಂದು ಬೆಳಿಗ್ಗೆ ನಿಂತಿರುವಾಗ ಕೇರಳ ರಾಜ್ಯದ ನೋಂದಣಿ ಇರುವ ಬಿಳಿ ಇನೋವಾ ಕಾರಿನಲ್ಲಿ ಬಂದ ನಾಲ್ಕು ಜನ ಏಕಾ ಏಕಿ ಕಾರಿನಿಂದ ಇಳಿದು ಮಚ್ಚುಗಳಿಂದ ಪಾಪುವಿನ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾರೆ ಇವರಿಂದ ತಪ್ಪಿಸಿಕೊಳ್ಳಲು ಪ್ರತಯ್ನಿಸಿದಾದರು ಸಾದ್ಯವಾಗದೆ ತೀರ್ವ ರಕ್ತಸಾರ್ವದಿಂದ ಸ್ಥಳದಲ್ಲೇ ಸಾವನಪ್ಪಿದ್ದಾನೆ, ಸ್ಥಳಕ್ಕೆ ಮಂಡ್ಯ ಎಸ್ ಪಿ ಯತೀಶ್, ಎ.ಎಸ್ ಪಿ ತಿಮ್ಮಯ್ಯ, ಡಿವೈ ಎಸ್ ಪಿ ಮುರುಳಿ, ಇನ್ಸ್ ಪೆಕ್ಟರ್ ಗಳಾದ ಪ್ರಕಾಶ್, ಎ ಮಲ್ಲೇಶ್ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದರು.

About The Author