ಸವದತ್ತಿ ವಕೀಲರ ಸಂಘದಿಂದ ಪ್ರಧಾನ ಜೆ ಎಂ ಎಫ್ ಸಿ ನ್ಯಾಯಾಲಯಕ್ಕೆ ನೂತನವಾಗಿ ಆಗಮಿಸಿದ ಮಂಜುನಾಥ್ ಶಂಕರ ಸನ್ನಲಿಂಗನವರ ಅವರಿಗೆ ಸ್ವಾಗತಿಸಲಾಯಿತು.

WhatsApp Group Join Now

ಬೆಳಗಾವಿ ಜಿಲ್ಲೆ ಸವದತ್ತಿ ಪಟ್ಟಣದ ಸವದತ್ತಿಯ ಪ್ರಧಾನ ಜೆ ಎಂ ಎಫ್ ಸಿ ನ್ಯಾಯಾಲಯಕ್ಕೆ ನೂತನವಾಗಿ ಆಗಮಿಸಿದ ಸಹಾಯಕ ಸರ್ಕಾರಿ ಅಭಿಯೋಜಕರಾಗಿ ಮಂಜುನಾಥ್ ಶಂಕರ ಸನ್ನಲಿಂಗನವರ ಅವರಿಗೆ ಸೋಮವಾರ ಸವದತ್ತಿ ವಕೀಲರ ಸಂಘದಿಂದ ಆತ್ಮೀಯವಾಗಿ ಸ್ವಾಗತಿಸಲಾಯಿತು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಜಿ ಬಿ ಮುನವಳ್ಳಿ, ಉಪಾಧ್ಯಕ್ಷರು ಎಂ ಎಸ್ ಹುಬ್ಬಳ್ಳಿ, ಪ್ರಧಾನ ಕಾರ್ಯದರ್ಶಿ, ಎಸ ಎಸ ಕಾಳಪ್ಪನವರ, ಜಂಟಿ ಕಾರ್ಯದರ್ಶಿಯಾದ ಆರ್ ವಿ ಹುಂಬಿ, ಮಹಿಳಾ ಪ್ರತಿನಿಧಿ ಸಾವಿತ್ರಿ ಶಿವಾರಗಟ್ಟಿ, ಸಹಳಾ ಸಮಿತಿ ಸದಸ್ಯರಾದ ಎನ್ ಬಿ ಭೋವಿ,ಆರ್ ವಿ ಪೂಜಾರ, ಮತ್ತು ಸಂಘದ ಸರ್ವ ಸದಸ್ಯರು ಉಪಸ್ಥಿತರಿದ್ದರು. ಈ ಕಾರ್ಯಕ್ರಮವನ್ನು ಸಂಘದ ಕಾರ್ಯದರ್ಶಿಗಳಾದ ಶ್ರೀ ಎಸ್ ಎಸ್ ಕಾಳಪ್ಪನವರ ನಿರೂಪಿಸಿ, ವಂದಿಸಿದರು.

About The Author