ಕಳೇದ 80 ಕ್ಕೂ ಅಧಿಕ ವರ್ಷಗಳಿಂದ ಉಳುಮೆ ಮಾಡಿಕೊಂಡು ಬರುತ್ತಿರುವ ಜಮೀನುಗಳಲ್ಲಿ ಅರಣ್ಯ ಇಲಾಖೆುಂದ ಏಕಾಏಕಿ ಸಸಿ ನೆಡಲು ಜೆಸಿಬಿ ಮೂಲಕ ಗುಂಡಿ ತೋಡಲು ಮುಂದಾದ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ಹಾಗೂ ರೈತರ ಮಧ್ಯೆ ವಾಗ್ವಾದಕ್ಕೆ ಕಾರಣವಾದ ಘಟನೆ ಹಳೇ ತೋರಗಲ್ಲ ತಾಂಡಾದಲ್ಲಿ ನಡೆದಿದೆ.
ರಾಮದುರ್ಗ ತಾಲೂಕಿನ ಹಳೇ ತೋರಗಲ್ಲ ತಾಂಡಾದಲ್ಲಿ ಸುಮಾರು 80 ವರ್ಷಗಳಿಂದ ಸುಮಾರು 60 ಕುಟುಂಬಗಳು ವಾಸವಾಗಿವೆ. ಅದರಲ್ಲಿ ಸುಮಾರು22 ಕುಟುಂಬಗಳು 3 ರಿಂದ ನಾಲ್ಕು ಏಕರೆಯಂತೆ ತಮ್ಮ ಉಪಜೀವನಕ್ಕಾಗಿ ಅರಣ್ಯ ಇಲಾಖೆಯ ಭೂಮಿಯಲ್ಲಿ ಸಾಗುವಳಿ ಮಾಡಿಕೊಂಡು ಬಂದಿದ್ದಾರೆ. 1986 ರಿಂದ ಆಯಾ ಸರಕಾರಕ್ಕೆ ಮನವಿ ಸಲ್ಲಿಸುತ್ತಲೇ ಬಂದಿದ್ದರು ಯಾವುದೇ ಪರಿಹಾರ ಸಿಕ್ಕಿಲ್ಲ.ಆದರೇ ಸಾಗುವಳಿ ಮಾಡಿತ್ತಿರುವ ಭೂಮಿಯಲ್ಲಿ ಅರಣ್ಯ ಇಲಾಖೆುಂದ ಸಸಿ ನೆಡುವ ಕುರಿತು ಗಮನಕ್ಕೆ ಬಂದಾಗ ಬಂಜಾರ ಸಮಾಜದ ಹೋರಾಟಾಗಾರರೊಂದಿಗೆ ಸಾಗುವಳಿ ಮಾಡುತ್ತಿರುವ ರೈತರು ಬೆಳಗಾವಿ ಅರಣ್ಯ…
