ಸೈಬರ್ ವಂಚನೆಗೊಳಗಾದರೆ ತಕ್ಷಣ 1039ಗೆ ಕರೆ ಮಾಡಿ
ಬೆಂಗಳೂರು: ಸೈಬರ್ ವಂಚನೆಗೆ ಯಾರೇ ಒಳಗಾದರೂ ಕೂಡಲೇ 1039 ಗೆ ದೂರು ನೀಡಿದರೆ ಆ ಕರೆ ಎಲ್ಲಿಂದ ಬಂತು, ಯಾರು ಮಾಡಿದ್ದಾರೆ ಎಂಬುದನ್ನು ಪರಿಶೀಲಿಸಿ, ಸೈಬರ್ ವಂಚನೆಯಿಂದ ನಿಮನ್ನು ರಕ್ಷಿಸಬಹುದು ಎಂದು ನಗರ ಪೊಲೀಸ್ ಆಯುಕ್ತ ದಯಾನಂದ ಅವರು ಸಲಹೆ ನೀಡಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿಜಿಟಲ್ ಅರೆಸ್ಟ್, ಹೋಂ ಅರೆಸ್ಟ್ ಎಂದು ಯಾರೇ ಕರೆ ಮಾಡಿದರೆ ತಕ್ಷಣ ಆ ಕರೆಯನ್ನು ಸ್ಥಗಿತಗೊಳಿಸಿ ಸ್ಥಳೀಯ ಪೊಲೀಸರಿಗಾಗಲೀ, ಸೈಬರ್ ಪೊಲೀಸರಿಗಾಗಲೀ ತಿಳಿಸಬೇಕು. ನೀವು ಒಂದು ವೇಳೆ ಅಂತಹ ಕರೆಯನ್ನು…
