ಮಾದಕ ವ್ಯಸನದ ದುಷ್ಪರಿಣಾಮದ ಕುರಿತು ಕಟಕೋಳ ಎಸ್.ಜಿ.ಟಿ ಕಿರಿಯ ಮಹಾವಿದ್ಯಾಲಯದಲ್ಲಿ ಜಾಗೃತಿ ಕಾರ್ಯಕ್ರಮದಲ್ಲಿ ಪಿಎಸ್‌ಐ ಬಸವರಾಜ ಕೊಣ್ಣುರೆ ಮಾತನಾಡಿದರು.

WhatsApp Group Join Now

ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಕಟಕೋಳ ಎಸ್.ಜಿ.ಟಿ ಕಿರಿಯ ಮಹಾವಿದ್ಯಾಲಯದಲ್ಲಿ ಜರುಗಿದ ಮಾದಕ ವ್ಯಸನದ ದುಷ್ಪರಿಣಾಮದ ಜಾಗೃತಿ ಕಾರ್ಯಕ್ರಮದಲ್ಲಿ ಪಿಎಸ್‌ಐ ಬಸವರಾಜ ಕೊಣ್ಣುರೆ ಪಾಲ್ಗೊಂಡು ಮಾತನಾಡಿದ ಅವರು, ಮದ್ಯಪಾನ ಧೂಮಪಾನ ಡ್ರಗ್ಸ ಇನ್ನೂ ಅನೇಕ ರೀತಿಯ ಮಾದಕ ವಸ್ತುಗಳ ಸೇವನೆಯಿಂದ ಸಾಮಾಜಿಕವಾಗಿ ನೀವು ನಿರ್ಲಕ್ಷಕ್ಕೆ ಒಳಗಾಗುತ್ತಿರಿ. ವಿದ್ಯಾರ್ಥಿ ಜೀವನದಲ್ಲಿ ದುಶ್ಚಟಗಳಿಗೆ ಬಲಿಯಾಗದೆ ನಿಮ್ಮ ತಂದೆ ತಾಯಿಗಳಿಗೆ ಕಲಿಸಿದ ಗುರುಗಳಿಗೆ ದೇಶಕ್ಕೆ ಒಳ್ಳೆಯ ಶ್ರೇಷ್ಠ ವ್ಯಕ್ತಿಯಾಗಬೇಕು. ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿದೆ ಅಭ್ಯಾಸದ ಕಡೆಗೆ ಹೆಚ್ಚಿನ ಗಮನಕೊಡಿ ಎಂದರು.
ಇದೇ ಸಂದರ್ಭದಲ್ಲಿ ಮಧ್ಯ ವ್ಯಸನದಿಂದ ಆಗುವ ದುಷ್ಪರಿಣಾಮದ ಬಗ್ಗೆ ಇತರರಿಗೆ ಅರಿವು ಮೂಡಿಸಲು ಹಾಗೂ ಮಾದಕ ದ್ರವ್ಯದ ದುರಪಯೋಗದ ಹಿಡಿತದಿಂದ ಮುಕ್ತವಾದ ಸಮುದಾಯವನ್ನು ನಿರ್ಮಿಸಲು ಪ್ರತಿಜ್ಞೆ ಮಾಡಿಸಿದರು.

ಈ ಒಂದು ಕಾರ್ಯಕ್ರಮದಲ್ಲಿ ಶ್ರೀಶೈಲ ಜಲಗೇರಿ ನಿರೂಪಿಸಿದರು. ಗೋಣಿ ಬಸಪ್ಪ ವಂದಿಸಿದರು. ಪ್ರಾಚಾರ್ಯ ಎನ್.ಡಿ. ಪಾಟೀಲ, ಉಪನ್ಯಾಸಕ ಡಾ| ಪಿ.ಕೆ. ರಾಠೋಡ, ಆರ್.ಬಿ. ಬಾರಕೇರ, ಬಿ.ಎಸ್. ಕಂಬಳಿ, ಬಿ.ಪಿ. ಹೂಲಿ ಉಪಸ್ಥಿತರಿದ್ದರು.

About The Author