12 August 2026
Advertisement
ರಾಜ್ಯ

ಗ್ರಾಮ ಆರೋಗ್ಯ ಅಭಿಯಾನ ಕಾರ್ಯಕ್ರಮಕ್ಕೆ ತಾಲೂಕ ಪಂಚಾಯತ ಇಒ ಪ್ರವೀಣಕುಮಾರ ಸಾಲಿ ಚಾಲನೆ ನೀಡಿದರು.

WhatsApp Group Join Now

ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಹಳೆತೊರಗಲ್ಲ ಗ್ರಾಮ ಪಂಚಾಯತ ವ್ಯಾಪ್ತಿಯ ಮಾಗನೂರ ಗ್ರಾಮದಲ್ಲಿ ಕಾಮಗಾರಿ ಸ್ಥಳದಲ್ಲಿ ಹಮ್ಮಿಕೊಂಡ ಗ್ರಾಮ ಆರೋಗ್ಯ ಅಭಿಯಾನ ಕಾರ್ಯಕ್ರಮಕ್ಕೆ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಪ್ರವೀಣಕುಮಾರ ಸಾಲಿ ಚಾಲನೆ ನೀಡಿ ಅವರು ಮಾತನಾಡಿದರು.
ಉದ್ಯೋಗ ಖಾತ್ರಿ ಕೂಲಿ ಕಾರ್ಮಿಕರಿಗಾಗಿ ಇಲಾಖೆಯಿಂದ ಸಿಗುವ ಅನುಕೂಲ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವದು. ಕೂಲಿ ಕಾರ್ಮಿಕರು ಸರಕಾರದ ಸೌಲಭ್ಯ ಪಡೆದುಕೊಂಡು ಆರ್ಥಿಕವಾಗಿ ಪ್ರಗತಿ ಹೊಂದಬೇಕು ಎಂದು ಹೇಳಿದರು.
ಸಹಾಯಕ ನಿರ್ದೇಶಕ ಸಂಗನಗೌಡ ಹಂದ್ರಾಳ ಮಾತನಾಡಿ, ಉದ್ಯೋಗ ಖಾತರಿ ಯೋಜನೆಯಡಿ ಕೂಲಿಕಾರ್ಮೀಕರು ದಿನ ನಿತ್ಯ ಕೇಲಸದಲ್ಲಿ ತೊಡಗಿ ಕೊಂಡಿರುವುದರಿAದ ಆರೋಗ್ಯ ದಲ್ಲಿ ಎರೆಪೆರು ಆಗುವ ಮುಂಚೆ ಬಿಪಿ, ಶುಗರ, ಸಣ್ಣ ಪುಟ್ಟ ಅಜಾರಿಗಳು ತಕ್ಷಣ ಪರೀಕ್ಷಿಸಿಕೊಳ್ಳಬೇಕು. ಆದರಿಂದ ಕೂಲಿ ಕಾರ್ಮಿಕರ ಇರುವ ಸ್ಥಳದಲ್ಲಿ ಆರೋಗ್ಯ ಶೀಬರ ಹಮ್ಮಿಕೊಳ್ಳಲಾಗುತ್ತಿದ್ದು ಪ್ರತಿಯೊಬ್ಬರು ಶಿಬಿರದ ಸದುಪಯೋಗ ಪಡಿಸಿಕೊಳ್ಳಬೆಕು ಎಂದು ಹೇಳಿದರು.
ಪ್ರಾಥಮಿಕ ಆರೋಗ್ಯ ಕೇಂದ್ರ ಅಧಿಕಾರಿ ಎಲ್ಲ ಕೂಲಿ ಕಾರ್ಮಿಕರಿಗೆ ಆರೋಗ್ಯ ತಪಾಸನೆ ಕೈಗೊಂಡರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷೆ ಈರವ್ವ ಲಮಾಣಿ, ಪ್ರಾಥಮಿಕ ಆರೋಗ್ಯ ಕೇಂದ್ರದ ಯಲ್ಲಪ್ಪ ಬಜಂತ್ರಿ ಹಾಗೂ ಅಶ್ವಿನಿ ಮತ್ತು ಗ್ರಾಪಂ ಸದಸ್ಯರು, ಪಿಡಿಓ ಅಶೋಕ ಹುಣಶೀಕಟ್ಟಿ, ಐಇಸಿ ಸಂಯೋಜಕ ಕಲ್ಮೇಶ ಹಗೇದ, ತಾಂತ್ರಿಕ ಸಹಾಯಕ ಸಂಜು ಹಾದಿಮನಿ, ಬಿಎಪ್‌ಟಿ ಈರಣ್ಣಾ ಸಾವಳಗಿ ಹಾಗೂ ಗ್ರಾಮ ಕಾಯಕ ಮೀತ್ರ ಡಿಇಓ ಸಾಧಿಕ ಹುದ್ದಾರ ಹಾಗೂ ಗ್ರಾಮ ಪಂಚಾಯತಿ ಸಿಬ್ಬಂದಿ ವರ್ಗ, ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಇದ್ದರು.

About The Author