ಸುರೇಬಾನ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆ ಏರ್ಪಡಿಸಿದ್ದ ಉಚಿತ ಹೃದಯ ರೋಗ ತಪಾಸಣಾ ಶಿಬಿರ

WhatsApp Group Join Now

ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಸುರೇಬಾನ ಗ್ರಾಮದಲ್ಲಿ ಘಟಕನೂರ ಹಾಗೂ ಸುರೇಬಾನ ವಲಯಗಳ ಜ್ಞಾನ ವಿಕಾಸ ಹಾಗೂ ಸ್ವ. ಸಹಾಯ ಸಂಘದ ಸದಸ್ಯರಿಗೆ ಹಾಗೂ ಅವರ ಕುಟುಂಬದವರಿಗೆ ಉಚಿತವಾಗಿ ಏರ್ಪಡಿಸಿದ್ದ ಹೃದಯ ರೋಗ ತಪಾಸಣಾ ಶಿಬಿರವನ್ನು ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯ ಜಿಲ್ಲಾ ನಿರ್ದೇಶಕ ಎಚ್.ಆರ್. ಲವಕುಮಾರ ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಆರಂಭದಲ್ಲಿ ಸಂಸ್ಥೆಯು ಕೇಲವೇ ಕೆಲವು ಪ್ರದೇಶಕ್ಕೆ ಸೀಮಿತವಾಗಿತ್ತು. ಇಂದು ರಾಜ್ಯ ಅಲ್ಲದೆ ನೆರೆಯ ರಾಜ್ಯಗಳಿಗೂ ಇದರ ಸೇವೆ ವಿಸ್ತರಿಸಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಈ ಭಾಗದ ಜನರು ಧರ್ಮಸ್ಥಳ ದೇವರ ದರ್ಶನ ಪಡೆದುಕೊಂಡು ಬರುವ ಹಾದಿಯಲ್ಲಿ ಅನೇಕ ಕೊಬ್ಬರಿ ಎಣ್ಣೆಯ ಅಂಗಡಿಗಳಿವೆ. ಅಲ್ಲಿ ಆರೋಗ್ಯಕ್ಕೆ ಹಾನಿಕಾರಕ ದ್ರವವನ್ನು ಮಿಶ್ರಣಮಾಡಿ ತಮಗೆ ಮಾರುತ್ತಾರೆ ಅಂತಹ ಕೊಬ್ಬರಿ ಎಣ್ಣೆಯನ್ನು ಯಾರು ಬಳಸಬೇಡಿ. ಉತ್ತಮ ಗುಣಮಟ್ಟದ ಆಹಾರ ಸಮಾಗ್ರಿ ಬಳಿಸಿ ಬದುಕನ್ನು ಸುಂದರವಾಗಿ ಇಟ್ಟುಕೊಳ್ಳಬೇಕು. ಮನುಷ್ಯನಿಗೆ ಹಣಕ್ಕಿಂತ ಆರೋಗ್ಯ ಮುಖ್ಯ ಎಂದು ಹೇಳಿದರು.
ಸುರೇಬಾನ ಪೊಲೀಸ್ ಠಾಣೆಯ ಪಿಎಸ್‌ಐ ಶಿವಾಜಿ ಪವಾರ ಮಾತನಾಡಿ, ಕೇಂದ್ರ ಸರಕಾರದಿಂದ ಆಯುಷ್ಯಮಾನ್ ಆರೋಗ್ಯ ವಿಮೆ ಜಾರಿಯಲ್ಲಿದ್ದು, ಪ್ರತಿಯೊಬ್ಬರೂ ರೂ. ೫ ಲಕ್ಷಗಳ ವರೆಗೆ ಆರೋಗ್ಯ ವಿಮೆ ಪಡೆಯಬಹುದಾಗಿದೆ. ಯೋಜನೆಗಳ ಲಾಭವನ್ನು ಸಾರ್ವಜನಿಕರು ಪಡೆಯಬೇಕೆಂದು ಹೇಳಿದರು.
ವೇದಿಕೆಯಲ್ಲಿ ಧಾರವಾಡ ನಾರಾಯಣ ಆಸ್ಪತ್ರೆಯ ಡಾ| ಮಹಾಂತೇಶ ಉಳ್ಳಾಗಡ್ಡಿ, ಜಿಲ್ಲಾ ಜನಜಾಗೃತಿ ವೇದಿಕೆಯ ನಿಕಟ ಪೂರ್ವ ಅಧ್ಯಕ್ಷ ಅಶೋಕ ಕುಲಗೋಡ, ಉಪಾಧ್ಯಕ್ಷ ರಮೇಶ್ ಜಲಗೇರಿ, ಸದಸ್ಯ ಜಿ.ಬಿ. ರಂಗನಗೌಡ್ರ, ಸುರೇಬಾನ ಆರೋಗ್ಯ ಕೇಂದ್ರದ ದಯಾನಂದ ಶಿರೂರ, ಗ್ರಾಪಂನ ಅಧ್ಯಕ್ಷೆ ಪುಷ್ಪಾ ಸುಣಗಾರ, ಎಸ್.ಆರ್. ಗುರುಬಸಣ್ಣವರ ವೇದಿಕೆಯಲ್ಲಿದ್ದರು.
ಶಿಬಿರದಲ್ಲಿ ಧಾರವಾಡದ ನಾರಾಯಣ ಆಸ್ಪತ್ರೆಯ ಸಿಬ್ಬಂದಿಗಳಿAದ ಮದುಮೇಹ, ಬಿಪಿ, ಹೃದಯ ರೋಗಕ್ಕೆ ಸಂಬAಧಿಸಿದAತೆ ೨೭೦ ಸದಸ್ಯರು ತಪಾಸಣೆಯಲ್ಲಿ ಭಾಗವಹಿಸಿದರು. ೨೦೦ ಸದಸ್ಯರು ಇಸಿಜಿ, ೭೦ ಸದಸ್ಯರು ಇಕೋ ಸ್ಕ್ಯಾನಿಂಗ್, ಬಿಪಿ ಶುಗರ್ ತಪಾಸಣೆಗೆ ಒಳಪಟ್ಟರು. ಒಟ್ಟು ೧೪ ಜನರನ್ನು ಹೆಚ್ಚಿನ ಚಿಕಿತ್ಸೆಗಾಗಿ ಎಸ್.ಡಿ.ಎಂ. ಆಸ್ಪತ್ರೆಗೆ ತೆರಳಲು ಸೂಚಿಸಿದರು.
ತಾಲೂಕು ಯೋಜನಾಧಿಕಾರಿ ಸಚಿನ್ ಕೆ. ಸ್ವಾಗತಿಸಿದರು. ಜ್ಞಾನ ವಿಕಾಸ ಸಮನ್ವಯಾಧಿಕಾರಿ ಸುನಿತಾ ಬಡಿಗೇರ ನಿರೂಪಿಸಿದರು. ವಲಯ ಮೇಲ್ವಿಚಾರಕ ಮಂಜುನಾಥ ವಂದಿಸಿದರು.

About The Author