ಓಬಳಾಪೂರ ಗ್ರಾ.ಪಂ ಅಧಿನದ ಜಾಗದಲ್ಲಿ ರಾಷ್ಟ್ರಧ್ವಜದ ಕಂಬದ ಮುಂದೆಯೇ ಅಕ್ರವಾಗಿ ಕಟ್ಟಿದ ಅಂಗಡಿ ಕಟ್ಟಡವನ್ನು ತೆರವುಗೊಳಿಸಿದ ಅಧಿಕಾರಿಗಳು.

WhatsApp Group Join Now

ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಓಬಳಾಪೂರ ಗ್ರಾ.ಪಂ ಕಚೇರಿಯ ಧ್ವಜದ ಕಂಬದ ಮುಂದೆ ಅಕ್ರವಾಗಿ ಕಟ್ಟಲಾಗಿದ್ದ ಅಂಗಡಿ ಕಟ್ಟಡವನ್ನು ತೆರವುಗೊಳಿಸುವಂತೆ ಕಳೆದ ನಾಲ್ಕೈದು ವರ್ಷಗಳಿಂದ ಸಾಹಿತಿ ಹಾಗೂ ಸಾಮಾಜಿಕ ಹೋರಾಟಗಾರ ಶ್ರೀನಿವಾಸಗೌಡ ಪಾಟೀಲ ಅವರು ಉಪವಾಸ ಸತ್ಯಾಗ್ರಹ ಸೇರಿದಂತೆ ಸಾಕಷ್ಟು ಹೋರಾಟವನ್ನು ಮಾಡಿಕೊಂಡು ಬಂದಿದ್ದರು, ಆದರೇ ಅಕ್ರಮ ಕಟ್ಟಡ ವಿಚಾರವಾಗಿ ಕೋರ್ಟ ವ್ಯಾಜ್ಯ ನಡೆದ ಕಾರಣ ವಿಳಂಬವಾಗಿತ್ತು. ಕಟ್ಟಡ ಕಟ್ಟಿರುವದು ಅಕ್ರಮ ಕಟ್ಟಡ ಎಂಬುವದು ಸಾಬಿತಾದ ಹಿನ್ನಲೇಯಲ್ಲಿ ಶನಿವಾರ ಬೆಳಿಗ್ಗೆ ತಾಲೂಕು ಪಂಚಾಯಿತ ಇಒ ಪ್ರವೀಣಕುಮಾರ ಸಾಲಿ ಹಾಗೂ ಸಿಪಿಐ ಐ.ಆರ್. ಪಟ್ಟಣಶೆಟ್ಟಿ, ಮತ್ತು ಪಿಡಿಓ ಸದಾಶಿವ ಹಲಗಿ ಅಧಿಕಾರಿಗಳು ಓಬಳಾಪೂರ ಗ್ರಾಮಕ್ಕೆ ತೆರಳಿ ಅಕ್ರಮವಾಗಿ ಕಟ್ಟಿದ್ದ ಅಂಗಡಿ ಕಟ್ಟಡವನ್ನು ತೆರವುಗೊಳಿಸಿದ್ದರು.
ಗ್ರಾಮ ಪಂಚಾಯಿತ ಕಚೇರಿಯ ಧ್ವಜದ ಕಟ್ಟೆಯ ಮುಂದೆ ಕಟ್ಟಿದ್ದ ಕಟ್ಟಡ ಕುರಿತು ದಾಖಲೆ ಪರಿಶೀಲಿಸಿದಾಗ ಅಕ್ರಮವಾಗಿ ಕಟ್ಟಿರುವ ಕುರಿತು ಪತ್ತೆಯಾಯಿತು. ಕಟ್ಟಡ ಕಟ್ಟಿರುವವರು ಕೋರ್ಟಗೆ ಹೋದ ಕಾರಣ ವ್ಯಾಜ್ಯ ಇತ್ಯರ್ಥವಾಗುವರೆಗೂ ವಿಳಂಬವಾಯಿತು. ಅಲ್ಲಿ ಕಟ್ಟಿರುವ ಕಟ್ಟಡ ಅಕ್ರಮ ಎಂಬುವದು ಕಂಡು ಬಂದ್ ಕಾರಣ ಅದನ್ನು ತೆರವುಗೊಳಿಸಲಾಯಿತು ಎಂದು ತಾಲೂಕು ಪಂಚಾಯಿತ ಇಒ ಪ್ರವೀಣಕುಮಾರ ಸಾಲಿ ಹೇಳಿದರು.
ತೆರುವು ಕಾರ್ಯದ ಸಂದರ್ಭದಲ್ಲಿ ತಾಲೂಕು ಪಂಚಾಯಿತ ಕಾರ್ಯನಿರ್ವಾಹಕ ಅಧಿಕಾರಿ ಪ್ರವೀಣಕುಮಾರ ಸಾಲಿ, ಸಿಪಿಐ ಐ.ಆರ್. ಪಟ್ಟಣಶೆಟ್ಟಿ, ತಾಲೂಕು ಪಂಚಾಯಿತ ಸಹಾಯಕ ನಿರ್ದೇಶಕರಾದ ಸಂಗನಗೌಡ ಹಂದ್ರಾಳ, ಎ.ಎಸ್. ಕುಂಬಾರ ಸೇರಿದಂತೆ ಅನೇಕರು ಇದ್ದರು.

About The Author