12 August 2026
Advertisement
ರಾಜ್ಯ

ಹೆಲ್ಮೆಟ್ ಹಾಗೂ ಮಾದಕ ವ್ಯಸನ ವಿರೋಧಿ ಜಾಗೃತಿ ಜಾಥಾಕ್ಕೆ ಜಿಲ್ಲಾಧಿಕಾರಿ ನಿತೇಶ ಪಾಟೀಲ ಬೈಕ್‌ರೈಡ್ ಮಾಡುವ ಮೂಲಕ ಚಾಲನೆ ನೀಡಿದರು.

WhatsApp Group Join Now

ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಸಂಗೋಳ್ಳಿ ರಾಯಣ್ಣ ವೃತ್ತದಿಂದ ಪ್ರಾರಂಭಗೊAಡ ಸಂಚಾರಿ ನಿಯಮಗಳ ಪಾಲನೆ, ಮಾದಕ ವ್ಯಸನ ವಿರೋದಿ ಹಾಗೂ ಹೆಲ್ಮೆಟ್ ಜಾಗೃತಿ ಜಾಥಾಕ್ಕೆ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಸೇರಿದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ, ಜಿಲ್ಲಾ ಪಂಚಾಯಿತ ಸಿಎಸ್ ರಾಹುಲ್ ಶಿಂಧೆ ಬೈಕ್ ರೈಡ್ ಮಾಡುವ ಮೂಲಕ ಚಾಲನೆ ನೀಡಿ, ಪ್ರಮುಖ ಬೀದಿಗಳಲ್ಲಿ ಬೈಕ್ ರ‍್ಯಾಲಿಯ ಮೂಲಕ ರಾಮದುರ್ಗ ಪಟ್ಟನವನ್ನು ರೌಂಡ್ ಹಾಕಿದರು.
ಸಂಗೋಳ್ಳಿ ರಾಯಣ್ಣ ವೃತ್ತದಿಂದ ಪ್ರಾರಂಭಗೊAಡ ಬೈಕ್ ರ‍್ಯಾಲಿ ಹುತಾತ್ಮ ಸರ್ಕಲ್ ಮುಖಾಂತರ ಮುಖ್ಯ ರಸ್ತೆಗೆಯಲ್ಲಿ ಸಂಚರಿಸಿ, ಮಿನಿ ವಿಧಾನಸೌಧಕ್ಕೆ ಆಗಮಿಸಿ, ನಂತರ ಅದೆ ಮಾರ್ಗವಾಗಿ ಜನಸ್ಪಂದನ ಕಾರ್ಯಕ್ರಮ ನಡೆಯುವ ಸರಸ್ವತಿ ಕಲ್ಯಾಣ ಮಂಟಪಕ್ಕೆ ಆಗಮಿಸಿ ಬೈಕ್ರ‍್ಯಾಲಿ ಸಮಾವೇಶಗೊಂಡಿತು.

ನಂತರ ಮಾತನಾಡಿದ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು, ಜೀವ ರಕ್ಷಕವಾಗಿ ಪ್ರತಿಯೊಬ್ಬರು ಬೈಕ್ ಚಾಲನೆ ಮಾಡುವಾಗ ಹೆಲ್ಮೆಟ್ ಧರಿಸಬೇಕು. ನಮ್ಮನ್ನು ನಂಬಿ ಮನೆಯಲ್ಲಿರುವ ಜೀವಗಳ ಪಾಲನೆಯ ಹೊನೆ ಪ್ರತಿಯೊಬ್ಬರ ಮೇಲಿದೆ. ಪ್ರತಿಯೊಬ್ಬರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಪೊಲೀಸರಿಗೆ ರೂ,೫೦೦ ದಂಢ ಕಟ್ಟುವ ಬದಲು ಹೆಲ್ಮೆಟ್ ಖರೀದಿಸಬೇಕು ಎಂದು ಕರೆ ನೀಡಿದರು.
ಬೈಕ್ ರ‍್ಯಾಲಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ, ಜಿಲ್ಲಾ ಪಂಚಾಯಿತ ಸಿ.ಎಸ್ ರಾಹುಲ್ ಶಿಂಧೆ, ಮುಖಂಡರಾದ ಪ್ರದೀಪ ಪಟ್ಟಣ, ಧನಲಕ್ಷ್ಮಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಲ್ಲಣ್ಣ ಯಾದವಾಡ, ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ, ತಾಲೂಕು ಪಂಚಾಯಿತ ಕಾರ್ಯನಿರ್ವಾಹಕ ಅಧಿಕಾರಿ ಪ್ರವೀಣಕುಮಾರ ಸಾಲಿ, ಪೊಲೀಸ್ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ, ಮಾಧ್ಯಮ ಬಳಗದವರು, ವಕೀಲರ ಸಂಘದ ಪದಾಧಿಕಾರಿಗಳು, ಮೆಕಾನಿಕ್‌ಗಳು, ವಿವಿಧ ಇಲಾಖೆಯ ಅಧಿಕಾರಿಗಳು ಸಾರ್ವಜನಿಕರು ಪಾಲ್ಗೊಂಡಿದ್ದರು.

About The Author