
ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಕಟಕೋಳ ಗ್ರಾಮದಿಂದ ಹಳೆ ತೋರಗಲ್ಲ ಕಡೆಗೆ ಅಕ್ರಮ ಪಡಿತರ ಅಕ್ಕಿ ಸಾಗಾಟ ಮಾಡುವಾಗ ಪೊಲೀಸ್ ಇಲಾಖೆ ಹಾಗೂ ಆಹಾರ ಇಲಾಖೆಯಿಂದ ಅಕ್ರಮ ಪಡಿತರ ಅಕ್ಕಿಯನ್ನು ಜಪ್ತಿ ಮಾಡಲಾಯಿತು
ಬಡ ಜನರ ಹೊಟ್ಟೆ ತುಂಬಲಿ ಎಂದು ಸರ್ಕಾರ ಅನ್ನಭಾಗ್ಯ ಯೋಜನೆಯಡಿ ಪಡಿತರ ಅಂಗಡಿಗಳ ಮೂಲಕ ಅಕ್ಕಿ ನೀಡುತ್ತದೆ. ಆದ್ರೆ, ಕಟಕೋಳದಲ್ಲಿ ಬಡ ಜನರ ಹೊಟ್ಟೆ ತುಂಬಿಸಬೇಕಿದ್ದ ಪಡಿತರ, ಕಾಳ ಸಂತೆಯಲ್ಲಿ ಮಾರಾಟವಾಗುತ್ತಿದೆ. ಅಕ್ರಮವಾಗಿ ಪಡಿತರ ಆಹಾರ ಧಾನ್ಯಗಳನ್ನು ಸಂಗ್ರಹಿಸಿ ಮಾರಾಟ ಮಾಡುವ ದೊಡ್ಡ ಜಾಲ ಎಗ್ಗಿಲ್ಲದೇ ಕಾರ್ಯನಿರ್ವಹಿಸುತ್ತಿದೆ.
ಪಡಿತರದಾರನಿಗೆ ಐದು ಕಿಲೋ ಅಕ್ಕಿ ನೀಡಿದ್ರೆ, ರಾಜ್ಯ ಸರ್ಕಾರ ಐದು ಕಿಲೋ ಅಕ್ಕಿ ಬದಲಾಗಿ ಇದೀಗ ಹಣವನ್ನು ನೀಡುತ್ತಿದೆ. ಆದ್ರೆ, ಬಡ ಜನರ ಹೊಟ್ಟೆ ತುಂಬಿಸಬೇಕಿದ್ದ ಪಡಿತರ ಧಾನ್ಯಗಳು, ಬಡವರ ಹೊಟ್ಟೆ ತುಂಬಿಸದೇ ಕಾಳ ಸಂತೆಯಲ್ಲಿ ಮಾರಾಟವಾಗುತ್ತಿವೆ.
ಹಳೆ ತೋರಗಲ್ಲ ಗ್ರಾಮದಲ್ಲಿ ರಫೀಕ್ ಹುಸೇನಸಾಬ್ ಹುದ್ದಾರ ವಯಸ್ಸು 28 ವರ್ಷ ಸಾಕಿನ ಹಳೆ ತೋರಗಲ್ಲ ತಾಲೂಕು ರಾಮದುರ್ಗ ಇವನು ತನ್ನ ಸ್ವಂತ ಫಾಯ್ದೆ ಗೋಸ್ಕರ ಸರಕಾರದಿಂದ ಸಾರ್ವಜನಿಕರಿಗೆ ಹಂಚಿಕೆ ಮಾಡಿದ ಪಡಿತರ ಆಹಾರ ಸಾಮಗ್ರಿಯಾದ ಅಕ್ಕಿ ಇರುತ್ತದೆ ಅಂತ ಗೊತ್ತಿದ್ದರೂ ಸಹಿತ ಕಾನೂನು ಬಾಹಿರವಾಗಿ ಬಡ ಜನರ ಕಡೆಯಿಂದ ಸುಮಾರು10,380/ ರೂ. ಕಿಮ್ಮತ್ತಿನ 03 ಕ್ವಿಂಟಲ್ ಪಡಿತರ ಅಕ್ಕಿಯನ್ನು ಕಡಿಮೆ ದರದಲ್ಲಿ ಸಂಗ್ರಹಿಸಿಕೊಂಡು ತನ್ನ ಅಪ್ಪೇ ಕಂಪನಿಯ ತ್ರೀ ವಿಲ್ಲರ್ ರಿಕ್ಷಾವಾಹನ ನಂಬರ್ ಕೆಎ 24 5368ನೇ ಇದರಲ್ಲಿ ಲೋಡ್ ಮಾಡಿಕೊಂಡು ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಉದ್ದೇಶದಿಂದ ಯಾವುದೇ ಸಕ್ಷಮ ಪ್ರಾಧಿಕಾರದಿಂದ ಅಥವಾ ಸಂಬಂಧ ಪಟ್ಟ ಇಲಾಖೆಯಿಂದಾಗಲಿ ಅನುಮತಿ ಪಡೆಯದೆ ಬೇಕಾಯ್ದೇಶೀರ ರೀತಿಯಿಂದ ಅಕ್ಕಿಯನ್ನು ಹಳೆ ತೊರಗಲ್ ಕಡೆಗೆ ಸಾಗಾಟ ಮಾಡುತ್ತಿದ್ದಾಗ ಪೋಲಿಸ್ಇಲಾಖೆ ಹಾಗೂ ಆಹಾರ ಇಲಾಖೆಯಿಂದ ಅಕ್ರಮ ಪಡಿತರ ಅಕ್ಕಿಯನ್ನು ವಶಪಡಿಸಿಕೊಂಡು ಪೊಲೀಸ್ ಠಾಣೆಯಲ್ಲಿಈ ಕುರಿತು ಪ್ರಕರಣ ದಾಖಲಾಗಿದೆ.


