ನಾಡ ವಿರೋಧಿ ಉದ್ಯಮಿಗಳ ವಿರುದ್ಧ  ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಪ್ರತಿಭಟನೆ

WhatsApp Group Join Now

ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಕನ್ನಡಿಗರಿಗೆ ಖಾಸಗಿ ವಲಯದ ಸಂಸ್ಥೆಗಳ ಉದ್ಯೋಗ ಮೀಸಲಾತಿ ನೀಡುವ ವಿಧೇಯಕವನ್ನು ವಿರೋಧಿಸುತ್ತಿರುವ ನಾಡ ವಿರೋಧಿ ಉದ್ಯಮಿಗಳ ವಿರುದ್ಧ  ಪಟ್ಟಣದ ಶ್ರೀ ಲಕ್ಷ್ಮಿ ವೆಂಕಟೇಶ್ ದೇವಸ್ಥಾನ ದಿಂದ ತಾಲೂಕಾ ಆಡಳಿತ ಸೌಧದ ವರೆಗೆ. ಪ್ರತಿಭಟನೆ ನಡೆಸಿ ತಹಶೀಲ್ದಾರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ರಾಜ್ಯದ ಖಾಸಗಿ ಕೈಗಾರಿಕೆಗಳು ಹಾಗೂ ಇತರೆ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಆಡಳಿತಾತ್ಮಕ ಹುದ್ದೆಗಳಿಗೆ ಶೇ 50 ಹಾಗೂ ಆಡಳಿತಾತ್ಮಕವಲ್ಲದ ಹುದ್ದೆಗಳಿಗೆ ಶೇ.75 ಮೀಸಲಾತಿ ನಿಗದಿಪಡಿಸುವ ವಿಧೇಯಕಕ್ಕೆ ಕಳೆದ ಸೋಮವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆ ಅನುಮೋದನೆ ನೀಡಿತ್ತು ಈಗ ಕಾರ್ಪೊರೇಟ್ ಲಾಬಿಯ ಒತ್ತಡಕ್ಕೆ ಮಣಿದು ವಿಧೇಯಕವನ್ನು ತಡೆಹಿಡಿಯುವ ನಿರ್ಧಾರ ಮಾಡಿದೆ ಈ ನಿರ್ಧಾರ ಕನ್ನಡಿಗರ ಪಾಲಿಗೆ ಅತ್ಯಂತ ಕರಾಳ ಮತ್ತು ಆತ್ಮಘಾತಕತನದ ನಿರ್ಧಾರವಾಗಿದೆ.

ಕರ್ನಾಟಕದ ನೆಲ ಬೇಕು, ಜಲ ಬೇಕು ಸಂಪನ್ಮೂಲಗಳೆಲ್ಲ ಬೇಕು.

ಸರ್ಕಾರ ನೀಡುವ ವಿನಾಯಿತಿಗಳೆಲ್ಲ ಬೇಕು, ಆದರೆ ಇಲ್ಲಿನ ಜನರು ಬೇಡವೆಂದರೆ ಹೇಗೆ ? ಈ ಜನರಿಗೆ ಕನಿಷ್ಠ ನಿಯತ್ತಾದರೂ ಬೇಡವೇ ಎಂದು ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣ ರಾಮದುರ್ಗ ಘಟಕದ ವತಿಯಿಂದ ಎಚ್ಚರಿಸುತ್ತೇವೆ. ಎಂದು ಮನವಿ ಸಲ್ಲಿಸಿದರು.

ಈ ಸಂಧರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕ ಅಧ್ಯಕ್ಷ ಶ್ರೇಯಸ್ ಎಸ್ ವಾಲಿ,
ಉಪಾಧ್ಯಕ್ಷರ  ಅಪ್ಪಣ್ಣ ಬಾಡಗಾರ, ವಿಘ್ನೇಶ್
ಸಂಚಾಲಕ ಮಂಜುನಾಥ ಹೊಸಕೇರಿ
ಕಾರ್ಯದರ್ಶಿ ಮಂಜುನಾಥ ದೊಡ್ಮನಿ 
ಅಜಿದ ನದಾಫ, ಮಾರುತಿ ಸುಣಗಾರ,
ಮಂಜು ಕೊರವರ್, ಗ್ರಾಮ ಘಟಕ
ಅಟೋ ಘಟಕ ಕರವೇ ಸದಸ್ಯರು ಭಾಗವಹಿಸಿದ್ದರು

About The Author