
ರಾಮದುರ್ಗ ಪಟ್ಟಣದ ಪ್ರೆಸ್‌ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಗಸ್ಟ್ 1 ರಿಂದ 15 ರವರೆಗೆ ರಿಯಾತಿ ದರದಲ್ಲಿ ಸಕ್ಕರೆ ವಿತರಣೆ ಮಾಡಲಾಗುವುದು ಅ ವರ್ಗದ ಶೇರುದಾರರಿಗೆ ರೂ.2200 ದರದಲ್ಲಿ ಒಂದು ಕ್ವಿಂಟಲ್, ಡ ವರ್ಗದ ಶೇರುದಾರರಿಗೆ ರೂ. 1100ದರದಲ್ಲಿ 50 ಕೆಜಿ ಸಕ್ಕರೆ ವಿತರಣೆ ಮಾಡಲಾಗುತ್ತಿದೆ. ರವಿವಾರ ಹೊರತು ಪಡಿಸಿ, ಪ್ರತಿದಿನ ಮುಂಜಾನೆ 10 ಗಂಟೆಯಿಂದ ಸಂಜೆ 5 ಗಂಟೆ ವರೆಗೆ ಕಾರ್ಖಾನೆ ಆವಣದಲ್ಲಿ ಸಕ್ಕರೆ ವಿತರಿಸಲಾಗುತ್ತಿದ್ದು, ಶಾಂತಯುತವಾಗಿ ಸಕ್ಕರೆ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಶೇರುದಾರ ಸದಸ್ಯರು ಮರಣ ಹೊಂದಿದ್ದು ಸಾಕಷ್ಟು ವರ್ಷಗಳಾದರು ವಾರಸಾ ಮಾಡಿಕೊಂಡಿಲ್ಲ. ಅಂತವರು ಕೂಡಲೇ ಕಚೇರಿಗೆ ಭೇಟಿ ನೀಡಿ ತಮ್ಮ ವಾರಸಾ ಮಾಡಿಕೊಳ್ಳಬೇಕು. ಸಕ್ಕರೆ ತೆಗೆದುಕೊಂಡು ಹೋಗಲು ಬರುವಾಗ ಶೇರ್ ಪ್ರಮಾಣ ಪತ್ರದ ಮೂಲ ಪ್ರತಿ, ಆಧಾರ ಕಾರ್ಡ ಕಡ್ಡಾಯವಾಗಿ ತರಬೇಕು. ಮುಖ್ಯವಾಗಿ ಶೇರ ಪ್ರಮಾಣ ಪತ್ರದೊಂದಿಗೆ ಆಧಾರ ಜೋಡನೆ ಮಾಡಲಾಗುತ್ತಿದೆ ಎಂದು ಹೇಳಿದರು.
ಶೇರುದಾರರ ಸಹಕಾರದಿಂದ ಹಾಗೂ ಆಡಳಿತ ಮಂಡಳಿಯ ಪರಿಶ್ರಮದ ಫಲವಾಗಿ ಇಂದು ಸಂಸ್ಥೆ ಇಂದು ಸಾಕಷ್ಟು ಬೆಳವಣಿಗೆ ಹೊಂದಿದೆ. ಮುಂಬರುವ ದಿನಗಳಲ್ಲಿ ಕಾರ್ಖಾನೆಯನ್ನು ಮತ್ತಷ್ಟು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಹಲವಾರು ಕ್ರಮಗಳನ್ನು ತೆಗೆದುಕೊಳ್ಳಾಗುತ್ತಿದೆ. ಕಾರಣ ಶೇರುದಾರರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಈ ವೇಳೆ ಧನಲಕ್ಷ್ಮಿ ಸಕ್ಕರೆ ಕಾರ್ಖಾನೆ ಉಪಾಧ್ಯಕ್ಷ ಬಸನಗೌಡ ದ್ಯಾಮನಗೌಡ್ರ, ನಿರ್ದೇಶಕರಾದ ಬಿ.ಎಂ. ತುಪ್ಪದ, ಎಂ.ಎಂ.ಆತಾರ, ಎ.ಸಿ. ಸುರಗ, ಶಂಕರಗೌಡ ಪಾಟೀಲ, ಚಂದ್ರು ರಜಪೂತ, ಶ್ರೀನಿವಾಸ್ ಕರದಿನ ಸೇರಿದಂತೆ ಆಡಳಿತ ಮಂಡಳಿಯ ನಿರ್ದೇಶಕರು ಹಾಗೂ ಇತರು ಉಪಸ್ಥಿತರಿದ್ದರು.


