ಆತ್ಮಹತ್ಯೆ ಮಾಡಿಕೊಂಡ ನೇಕಾರ ಕುಟುಂಬಗಳಿಗೆ ಪರಿಹಾರ ನೀಡಬೇಕೆಂದು ಒತ್ತಾಯಿಸಿ ನೇಕಾರರು ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು

WhatsApp Group Join Now

ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದಲ್ಲಿ ನೇಕಾರರ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ನೇಕಾರ ಆತ್ಮಹತ್ಯೆ ಪೈಲ್‌ಗಳು ಕೇವಲ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ ಗೆ ಸಿಮೀತವಾಗಿವೆ. ಸರಕಾರ ಮಾತ್ರ ಬಡ ನೇಕಾರರಿಗೆ ಪರಿಹಾರ ನೀಡುತ್ತಿಲ್ಲ. ನೇಕಾರರು ಸಾಲದ ಮೇಲೆ ಸಾಲ ಮಾಡಿ ಜೀವನ ನಡೆಸುವದೇ ದುಸ್ಥರವಾಗಿದೆ. ಸಾಲಭಾದೆಗೆ ದಿಕ್ಕು ತೋಚದಂತಾಗಿ ಆತ್ಮಹತ್ಯೆಗಳು ನಡೆಯುತ್ತಲಿವೆ.
ಜವಳಿ ಮಾರುಕಟ್ಟೆ ಕುಸಿತ ಹಾಗೂ ಕಚ್ಚಾ ನೂಲಿನ ಬೆಲೆ ಏರಿಕೆಯಿಂದ ಬಡ ನೇಕಾರ ಕುಟುಂಬಗಳು ತತ್ತರಿಸಿ ಹೋಗಿದ್ದು, ಅಲ್ಲದೇ ಸಾಲಬಧೆಯಿಂದ ರಾಜ್ಯದಲ್ಲಿ 50 ಕ್ಕೂ ಹೆಚ್ಚು ಜನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೂಡಲೇ ಸರಕಾರ ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡ ಕುಟುಂಬಸ್ಥರಿಗೆ ಪರಿಹಾರಧನ ನೀಡಬೇಕು ಎಂದು ಮನವಿ ಮೂಲಕ ಒತ್ತಾಯಿಸಿದ್ದಾರೆ.
ಮನವಿ ಸಂದರ್ಭದಲ್ಲಿ ರಾಜ್ಯ ನೇಕಾರ ಒಕ್ಕೂಟದ ಜಿಲ್ಲಾ ಕಾರ್ಯದರ್ಶಿ ಶ್ರೀನಿವಾಸ್ ಕುರುಡಗಿ, ರಾಜ್ಯ ದೇವಾಂಗ ಸಂಘದ ಉಪಾಧ್ಯಕ್ಷ ಶಂಕ್ರಣ್ಣ ಮುರುಡಿ ಮಾತನಾಡಿ, ಸರಕಾರ ಆತ್ಮಹತ್ಯೆ ಮಾಡಿಕೊಂಡ ಎಲ್ಲಾ ನೇಕಾರ ಕುಟುಂಬಗಳಿಗೆ ಪರಿಹಾರ ನೀಡಬೇಕು. ಮುಂದೆ ಬದುಕು ಕಟ್ಟಿ ಕೊಳ್ಳುವ ನಿಟ್ಟಿನಲ್ಲಿ ಯೋಜನೆಗಳನ್ನು ತರಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ವಿಠ್ಠಲ ಮುರುಡಿ, ನೀಲಕಂಠ ಘಂಟಿ, ಸಂಕಪ್ಪ ಮುಖೈನವರ, ನಾರಾಯಣ ಹೂಲಿ, ಶಂಕರ ಬೆಣ್ಣೂರ, ಮಾರುತಿ ಗಿಡ್ನಂದಿ, ಏಕನಾಥ ಕೊಣ್ಣೂರ, ಶಿವಾನಂದ ಸೂಳಿಭಾಂವಿ, ಶಿವಾನಂದ ಬಳ್ಳಾರಿ, ಪಿ.ಆರ್.ಸೂಳಿಭಾವಿ, ಕೃಷ್ಣಾ ಸೂಳಿಭಾವಿ, ನಾಮದೇವ ಸೂರಿ ಸೇರಿದಂತೆ ರಾಮದುರ್ಗ ನೇಕಾರ ಒಕ್ಕೂಟಗಳ ವಿವಿಧ ಪದಾಧಿಕಾರಿಗಳು ಹಾಗೂ ನೇಕಾರರು ಉಪಸ್ಥಿತರಿದ್ದರು.

About The Author