
ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಪ್ರವಾಸಿ ಮಂದಿರದಲ್ಲಿ 2024- 25 ನೇ ಸಾಲಿನ
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ನೂತನ ಪದಾಧಿಕಾರಿಗಳನ್ನು ರಾಜ್ಯಾಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ ಹಾಗೂ ರಾಜ್ಯ ರಾಜಕಾರಣಿ ಸದಸ್ಯರಾದ ಡಾ.ಲಕ್ಷ್ಮಣ್ ಕಾಮಣ್ಣವರ್,ಹಾಗೂ ಜಿಲ್ಲಾ ಪದಾಧಿಕಾರಿಗಳಾದ ಮಂಜುನಾಥ ರಾಠೋಡ್, ಈರಣ್ಣ ಕಲ್ಯಾಣಿ, ಇವರ ನೇತೃತ್ವದಲ್ಲಿ ಆಯ್ಕೆ ಮಾಡಲಾಯಿತು

ಈ ಸಂದರ್ಭದಲ್ಲಿ ಅಧ್ಯಕ್ಷರು ರಮೇಶ್ ರಾಯಬಾಗ, ಉಪಾಧ್ಯಕ್ಷರು ಮಂಜುನಾಥ್ ಕಲಾದಗಿ, ರಾಮಚಂದ್ರ ಕುಕಡಿ, ಎನ್ ಡಿ ಬಂಡಿವಡ್ಡರ, ಕಾರ್ಯಾಧ್ಯಕ್ಷ ಪರವೇಜ್ ಪನಿಬಂಧ, ಪ್ರಧಾನ ಕಾರ್ಯದರ್ಶಿ ವೀರೇಶ್ ಬಳಗೇರ್, ಕಾರ್ಯದರ್ಶಿಗಳು ಅಂಬರೀಶ್ ಬಟಕುರ್ಕಿ, ಆನಂದ್ ಡಿವಟಿಗಿ, ಪ್ರಶಾಂತ್ ಅಂಗಡಿ, ಖಜಾಂಚಿಯಾಗಿ ರಾಘವೇಂದ್ರ ದೊಡ್ಡಮನಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು

ಈ ಸಂದರ್ಭದಲ್ಲಿ ರಾಮದುರ್ಗ ತಾಲ್ಲೂಕು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ವತಿಯಿಂದ ರಾಜ್ಯಾಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ್ ಇವರಿಗೆ ಗೌರವ ಸನ್ಮಾನಿಸಲಾಯಿತು
ಈ ವೇಳೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಸರ್ವ ಪದಾಧಿಕಾರಿಗಳು ಭಾಗವಹಿಸಿದ್ದರು


