ಖಾನಪೇಠದ ಶ್ರೀ ಧನಲಕ್ಷ್ಮಿ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಷೇರುದಾರರಿಗೆ ರಿಯಾಯಿತಿ ದರದಲ್ಲಿ ಸಕ್ಕರೆ ವಿತರಿಸುವ ಕಾರ್ಯಕ್ರಮಕ್ಕೆ ಕಾರ್ಖಾನೆ ಅಧ್ಯಕ್ಷ ಮಲ್ಲಣ್ಣ ಯಾದವಾಡ ಚಾಲನೆ ನೀಡಿದರು.

WhatsApp Group Join Now

ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಖಾನಪೇಠದ ಧನಲಕ್ಷ್ಮಿ ಸಹಕಾರಿ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಷೇರುದಾರರಿಗೆ ಸಕ್ಕರೆ ವಿತರಿಸುವ ಕಾರ್ಯಕ್ರಮಕ್ಕೆ ಕಾರ್ಖಾನೆ ಅಧ್ಯಕ್ಷ ಮಲ್ಲಣ್ಣ ಯಾದವಾಡ ಚಾಲನೆ ನೀಡಿ ಮಾತನಾಡಿದರು ಕಾರ್ಖಾನೆ ಷೇರುದಾರರಿಗೆ ಸಿಹಿ ನೀಡಬೇಕೆನ್ನುವ ಉದ್ಧೇಶದಿಂದ ಪ್ರತಿ ವರ್ಷ ಪಂಚಮಿ ಹಬ್ಬದ ಸಂದರ್ಭದಲ್ಲಿ ರಿಯಾಯಿತಿ ದರದಲ್ಲಿ ಸಕ್ಕರೆ ವಿತರಣೆ ಮಾಡಲಾಗುತ್ತದೆ ಅನೇಕ ಸಕ್ಕರೆ ಕಾರ್ಖಾನೆಗಳು ನಷ್ಟವನ್ನು ಅನುಭವಿಸುತ್ತಿರುವ ಕಾಲದಲ್ಲಿ ಕಾರ್ಖಾನೆಯನ್ನು ಲೀಸ್ ಪಡೆದ ಪ್ಯಾರಿ ಶುಗರ್ಸ ಆಡಳಿತ ಮಂಡಳಿಗೆ ನಷ್ಟವಾದರೂ ಪ್ರತಿ ವರ್ಷ ಕಾರ್ಖಾನೆ ಷೇರುದಾರರಿಗೆ ಸಿಹಿ ನೀಡುತ್ತಿದೆ ಎಂದು ಹೇಳಿದರು.
ಈ ಭಾಗದಲ್ಲಿ ಬೃಹತ್ ಸಕ್ಕರೆ ಕಾರ್ಖಾನೆ ನಿರ್ಮಿಸಿ, ರೈತರ ಹಿತ ಕಾಯುವ ಕೆಲಸ ಮಾಡಿದ ಅಂದಿನ ಸಂಸ್ಥಾಪಕ ಅಧ್ಯಕ್ಷ ಹಾಗೂ ಮಾಜಿ ಶಾಸಕರಾದ ಬಿ.ಬಿ. ಹಿರೇರಡ್ಡಿ, ನಂತರದ ದಿನಗಳಲ್ಲಿ ಕಾರ್ಖಾನೆ ಮುನ್ನಡೆಸುವಲ್ಲಿ ಯಶಸ್ವಿಯಾದ ಸಹೋದರ ಮಹಾದೇವಪ್ಪ ಯಾದವಾಡ ಅವರು ಎರಡು ಕಣ್ಣುಗಳಿದ್ದಂತೆ ಎಂದು ಬಣ್ಣಿಸಿದರು. ಆಗಸ್ಟ್ 15 ರ ವರೆಗೆ ರವಿವಾರ ಹೊರತು ಪಡಿಸಿ ಪ್ರತಿ ಶೇರ್‌ಗೆ ರೂ.2200 ದರದಲ್ಲಿ 1 ಕ್ವಿಂಟಾಲ್ ರಿಯಾಯಿತಿ ದರದಲ್ಲಿ ಸಕ್ಕರೆಯನ್ನು ವಿತರಿಸಲಾಗುವುದು ಎಂದು ಹೇಳಿದರು.
ಮಾಜಿ ಶಾಸಕ ಹಾಗೂ ನಿರ್ದೇಶಕ ಮಹಾದೇವಪ್ಪ ಯಾದವಾಡ ಅವರು ಮಾತನಾಡಿ, ಶೇರುದಾರರ ಹಿತಕಾಯಲು ಕಳೆದ 12 ವರ್ಷಗಳಿಂದ ಸಕ್ಕರೆ ವಿತರಿಸಲಾಗುತ್ತಿದ್ದು, ಮುಂದೆ ನಮ್ಮ ಜೀವಿತ ಅವಧಿ ವರೆಗೂ ರಿಯಾಯಿತಿ ದರದಲ್ಲಿ ಸಕ್ಕರೆ ವಿತರಿಸುವುದಾಗಿ ಹೇಳಿದರು.
ತೊರಗಲ್ಲ ಹಚ್ಚಿನ ಮಠದ ಶ್ರೀಚನ್ನಮಲ್ಲ ಶಿವಾಚಾರ್ಯ ಸ್ವಾಮೀಜಿ ಅವರು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಈ ಸಂದರ್ಭದಲ್ಲಿ ಧನಲಕ್ಷ್ಮಿ ಸಕ್ಕರೆ ಕಾರ್ಖಾನೆ ಉಪಾಧ್ಯಕ್ಷ ಬಸನಗೌಡ ದ್ಯಾಮನಗೌಡ್ರ, ಬಿ.ಎಂ. ತುಪ್ಪದ, ಐ.ಎಸ್. ಹರಣಟ್ಟಿ, ಎಂ.ಎಂ ಆತಾರ, ಶಂಕರಗೌಡ ಪಾಟೀಲ, ಶ್ರೀನಿವಾಸ ಕರದಿನ, ಟಿ.ಬಿ. ಪಾಟೀಲ, ಶಂಭು ಮಾಳವಾಡ, ಎ.ಸಿ ಸುರಗ, ಸುರೇಶ ಡುಳ್ಳೊಳ್ಳಿ, ಕಾರ್ಖಾನೆ ಅಧಿಕಾರಿಗಳು, ಷೇರುದಾರರು, ಭಾಗವಹಿಸಿದ್ದರು

About The Author