ಗೊಡಚಿಯಲ್ಲಿ ಹಮ್ಮಿಕೊಂಡ ಜಿಲ್ಲಾ ಮಟ್ಟದ ಸ್ಕೌಟ್ಸ್ ಮತ್ತು ಗೈಡ್ಸ್ ತರಬೇತಿ ಕಾರ್ಯಕ್ರಮ

WhatsApp Group Join Now

ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಗೊಡಚಿಯಲ್ಲಿ ಹಮ್ಮಿಕೊಂಡ ಜಿಲ್ಲಾ ಮಟ್ಟದ ಸ್ಕೌಟ್ಸ್ ಮತ್ತು ಗೈಡ್ಸ್ ತರಬೇತಿ ಕಾರ್ಯಕ್ರಮವನ್ನು ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಬೆಳಗಾವಿ ವಿಭಾಗದ ಪದನಿಮಿತ್ಯ ಕಾರ್ಯದರ್ಶಿ ಸಕ್ರೆಪ್ಪಗೌಡ ಬಿರಾದಾರ ಉದ್ಘಾಟಸಿ ಅವರು ಮಾತನಾಡಿದರು.
ಜಿಲ್ಲಾ ಮುಖ್ಯಆಯುಕ್ತ ಗಜಾನನ ಮನ್ನಿಕೇರಿ ಅವರು ಮಾತನಾಡಿ, ರಾಜ್ಯದಲ್ಲಿಯೇ ಬೆಳಗಾವಿ ಜಿಲ್ಲೆ ಸ್ಕೌಟ್ಸ್ ಮತ್ತು ಗೈಡ್ಸ್ ಚಟುವಟಿಕೆಯಲ್ಲಿ ಮೊದಲ ಸ್ಥಾನದಲ್ಲಿರುವುದು ಹೆಮ್ಮೆಯ ವಿಷಯ ಎಂದರು.
ಸವದತ್ತಿಯ ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ ದಂಡಿನ, ರಾಮದುರ್ಗ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಟಿ.ಬಳಿಗಾರ ಮಾತನಾಡಿದರು.
ಈ ಸಂದರ್ಭದಲ್ಲಿ ಎಲ್.ಆರ್. ಕನಕಪ್ಪನವರ, ಕಾರ್ಯದರ್ಶಿ ಎನ್.ಎನ್. ಕಬ್ಬೂರ, ಎನ್.ಜಿ. ಪಾಟೀಲ, ಎನ್.ಬಿ. ಗುಡಸಿ, ಎಸ್.ಬಿ. ವಿಠ್ಠಲ ಶಿಬಿರದ ನಾಯಕರಾದ ಎಸ್.ಎಚ್. ಶಿವಶಂಕರಪ್ಪ, ಎಲ್.ಎಸ್. ಬಹಾದ್ದೂರಿ ಸೇರಿದಂತೆ ಸವದತ್ತಿ, ರಾಮದುರ್ಗ, ಖಾನಾಪೂರ ಮತ್ತು ಬೈಲಹೊಂಗಲ ತಾಲೂಕಿನಿಂದ 200ಕ್ಕೂ ಹೆಚ್ಚು ಶಿಬಿರಾರ್ಥಿಗಳು ಶಿಕ್ಷಕರು ಇದ್ದರು

About The Author