ವಿಶ್ವ ಅರಣ್ಯ ರಕ್ಷಕರ ದಿನ ಹಾಗೂ ಪ್ರಕೃತಿ ಭವನ ಉದ್ಘಾಟನೆ ಸಮಾರಂಭ.

WhatsApp Group Join Now

ಬಳ್ಳಾರಿ ಪ್ರಾದೇಶಿಕ ವಿಭಾಗ ವತಿಯಿಂದ ನಗರದ ಬೆಳಗಲ್ ಕ್ರಾಸ್‌ನ ಸಸ್ಯ ಕ್ಷೇತ್ರದಲ್ಲಿ ಬುಧವಾರ ಏರ್ಪಡಿಸಿದ್ದ ವಿಶ್ವ ರೇಂಜರ್ ದಿನ ಹಾಗೂ ಪ್ರಕೃತಿ ಭವನ ಉದ್ಘಾಟನೆ ಸಮಾರಂಭಕ್ಕೆ ಅರಣ್ಯ ಇಲಾಖೆಯ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಕಾರಿ ಡಾ.ಸಂಜಯ್ ಬಿಜ್ಜೂರ್ ಚಾಲನೆ ನೀಡಿ ಅವರು ಮಾತನಾಡಿದರು.
ದೇಶವು ಪ್ರಗತಿ ಪಥದಲ್ಲಿ ಸಾಗಬೇಕಾದರೆ ನೈಸರ್ಗಿಕ ಸಂಪನ್ಮೂಲ ಅವಶ್ಯಕವಾಗಿದೆ. ದೇಶ ಹಾಗೂ ಮಾನವ ಸಂಪನ್ಮೂಲವನ್ನು ಪ್ರಾಣ ಪಣಕಿಟ್ಟು ಯಾರು ಉಳಿಸಿಕೊಳ್ಳುತ್ತಾರೋ ಅವರನ್ನು ಅರಣ್ಯ ರಕ್ಷಕ ಎಂದು ಕರೆಯಲಾಗುತ್ತದೆ. ಯಾವ ದೇಶ ನೈಸರ್ಗಿಕ ಸಂಪನ್ಮೂಲಗಳ ಉಳಿಸಿಕೊಂಡಿವೋ ಅಂತಹ ದೇಶಗಳು ಇಂದು ಸುಭಿಕ್ಷವಾಗಿವೆ. ಈ ನಿಟ್ಟಿನಲ್ಲಿ ನೈಸರ್ಗಿಕ ಸಂಪನ್ಮೂಲಗಳನ್ನು ರಕ್ಷಣೆ ಮಾಡಬೇಕು. ಹಾಗೆಯೇ ಪರಿಸರ ಸಂರಕ್ಷಣೆ ಮಾಡುವವರನ್ನು ಗೌರವಿಸಬೇಕು. ವೈಜ್ಞಾನಿಕವಾಗಿ ಗಿಡ ಮರ ನೆಡಬೇಕು ಎಂದು ತಿಳಿಸಿದರು.
ಉಪ ಅರಣ್ಯ ಸಂರಕ್ಷಣಾಕಾರಿ ಸಂದೀಪ್ ಎಚ್ ಸೂರ್ಯವಂಶಿ ಅವರು ಮಾತನಾಡಿ, ನೈಸರ್ಗಿಕವಾಗಿ ಸಂರಕ್ಷಿತ ಪ್ರದೇಶಗಳನ್ನು ರಕ್ಷಿಸುವ ಜವಾಬ್ದಾರಿ ಹೊಂದಿರುವ ರೇಂಜರ್‌ಗಳನ್ನು ಗೌರವಿಸುವ ನಿಟ್ಟಿನಲ್ಲಿ ಪ್ರತಿ ವರ್ಷ ಜು.31 ರಂದು ವಿಶ್ವ ರೇಂಜರ್ ದಿನವನ್ನಾಗಿ ಆಚರಿಸಲಾಗುತ್ತದೆ. ಈ ದಿನದಂದು ರೇಂಜರ್‌ಗಳ ಪ್ರಮುಖ ಕೆಲಸವನ್ನು ಬೆಂಬಲಿಸಿ ಗೌರವಿಸಲಾಗುತ್ತದೆ. ಕರ್ತವ್ಯದ ವೇಳೆ ಪ್ರಾಣ ಕಳೆದಕೊಂಡ ರೇಂಜರ್‌ಗಳಿಗೆ ಶ್ರದ್ಧಾಂಜಲಿ ಕೂಡ ಸಲ್ಲಿಸಲಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಗಣ್ಯರು ಅರಣ್ಯ ಇಲಾಖೆಯ ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆಗೊಳಿಸಿದರು.
ಅಂಚೆ ಅಧೀಕ್ಷಕ ಪಿ.ಚಿದಾನಂದ ಅವರು ಮಾತನಾಡಿ, ವಿಶೇಷ ಅಂಚೆ ಲಕೋಟೆಯು ಅಂಚೆ ಕಚೇರಿಗಳ ಮೂಲಕ ಅಂಚೆ ಚೀಟಿ ಸಂಗ್ರಹಕಾರರ ಮೂಲಕ ವಿಶ್ವದಾದ್ಯಂತ ರೇಂಜರ್‌ಗಳ ಕುರಿತು ಅರಿವು ಮೂಡಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದರು.
ಈ ವಿಶೇಷ ಲಕೋಟೆಯ ಮೇಲೆ 2024 ರ ವಿಶ್ವ ರೇಂಜರ್ ದಿನದ ಧ್ಯೇಯ “30 ರೊಳಗೆ 30”. ಅಂದರೆ 2030 ರೊಳಗೆ ಶೇ.30 ರಷ್ಟು ಭೂ ಪ್ರದೇಶವನ್ನು ಪರಿಣಾಮಕಾರಿಯಾಗಿ ಸಂರಕ್ಷಿಸಬೇಕು ಮತ್ತು ನಿರ್ವಹಿಸಬೇಕು ಎಂಬ ಉದ್ದೇಶವನ್ನು ಹೊಂದಿರುವುದು ವಿಶೇಷ ಎಂದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ನಗರ ಶಾಸಕ ನಾರಾ ಭರತ್ ರೆಡ್ಡಿ, ಮಹಾನಗರ ಪಾಲಿಕೆ ಮೇಯರ್ ಮುಲ್ಲಂಗಿ ನಂದೀಶ್, ಉಪ ಮೇಯರ್ ಡಿ.ಸುಕುಂ, ಅರಣ್ಯ ಇಲಾಖೆಯ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಕಾರಿ ಸಿತ್ಮಾ ಬಿಜ್ಜೂರ್, ವಿಜಯನಗರ ಜಿಲ್ಲೆಯ ಉಪ ಅರಣ್ಯ ಸಂರಕ್ಷಣಾಕಾರಿ ಅರ್ಸ್ಲಾನ್ ಸೇರಿದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಸಿಬ್ಬಂದಿ, ಶಾಲಾ-ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು

About The Author