ಏರ್ಟೆಲ್ ಹಾಗೂ ಜಿಯೋ ಟವರಗಳನ್ನು ತೆರೆವುಗೊಳಿಸಬೇಕೆಂದು ಜನಪರ ಟ್ರಸ್ಟ್ ಅಧ್ಯಕ್ಷರಾದ ಸುಭಾಷ್ ಗೊಡ್ಕೆ ಪ್ರತಿಭಟನೆ

WhatsApp Group Join Now


ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಈ ಟಿ ಓಣಿಯ ಐಸಿಐಸಿಐ ಬ್ಯಾಂಕ್ ಹಿಂದೆ ಇರುವ ಏರ್ಟೆಲ್ ಹಾಗೂ ಜಿಯೋ ಟವರ್ ತೆರೆವುಗೊಳಿಸಬೇಕೆಂದು ಶುಕ್ರವಾರ ಜನಪರ ಟ್ರಸ್ಟ್ ಅಧ್ಯಕ್ಷರಾದ ಸುಭಾಷ್ ಗೊಡ್ಕೆ ಹಾಗೂ ಅವರ ಬೆಂಬಲಿಗರಿಂದ ಪ್ರತಿಭಟನೆ ಮಾಡಿ ಜಿಯೋ ಟವರ್ ಹಾಗೂ ಏರ್ಟೆಲ್ ಟವರ್ ಇರುವ ಜಾಗವನ್ನು ಮುತ್ತಿಗೆ ಹಾಕಲಾಯಿತು.


20 ವರ್ಷಗಳಿಂದ ಈ ಟವರಗಳನ್ನು ನಿರ್ಮಾಣ ಮಾಡಿದ್ದಾರೆ ಜಿಯೋ ಹಾಗೂ ಏರ್ಟೆಲ್ ಲೀಜ ಮುಗಿದರು ಇದನ್ನು ತೆರೆವುಗೊಳಿಸದೆ ಟವರ್ ಅಕ್ಕ ಪಕ್ಕ ಇದ್ದಂತಹ ಮನೆಯವರಿಗೆ ಇದರಿಂದ ತೊಂದರೆ ಇದೆ ಎಂದು ಗೊತ್ತಿದ್ದರೂ ಕೂಡ ಇನ್ನು ಹಾಗೆ ಮುಂದುವರಿಸಿಕೊಂಡು ಬಂದಿರುವ ಚಿನ್ನಪ್ಪ ಪಟ್ಟಣ ಎಂಬುವರ ಮಾಲೀಕರು ಇನ್ನು ಇದನ್ನು ತೆಗೆಯುತ್ತಿಲ್ಲ ಈಗ ನಗರವು ಬೆಳೆದಿದೆ ಸರಕಾರದ ನಿಯಮದ ಪ್ರಕಾರ ನಗರದಿಂದ ಐದು ಕಿಲೋಮೀಟರ್ ದೂರ ಇರಬೇಕು ನಿಯಮವಿದೆ ನಾವು ಮೌಕಿಕವಾಗಿ ಹೇಳುತ್ತಾ ಬಂದಿರುತ್ತೇವೆ ಟವರ ತರಂಗಗಳಿಂದ ಮನುಷ್ಯರಿಗೆ ಪಕ್ಷಿಗಳಿಗೆ ಪ್ರಾಣಿಗಳಿಗೆ ಮಕ್ಕಳಿಗೆ ವೃದ್ಧರಿಗೆ ತೊಂದರೆಯಾಗಿದೆ ಆದ್ದರಿಂದ ಇದನ್ನು ತೆರೆವುಗೊಳಿಸಬೇಕೆಂದು ಸಾಕಷ್ಟು ಬಾರಿ ಪುರಸಭೆಗೆ ತಿಳಿಸಿದರು ಏನು ಕ್ರಮ ಕೈಗೊಂಡಿಲ್ಲ ಇದರಿಂದ ಇಲ್ಲಿ ವಾಸಿಸುವಂಥ ಸುತ್ತ ಮುತ್ತಿಲಿನ ಮನೆಗಳಿಗೆ ಶಬ್ದ ಮಾಲಿನ್ಯ ಮಕ್ಕಳು ಏನಾದರೂ ಕೈಯಲ್ಲಿ ಹಿಡಿದುಕೊಂಡ ಹೋದರೆ ಮಂಗಗಳು ಅವರನ್ನು ಕಡೆಯುವುದು ಇದರಿಂದ ಜನರು ಭಯ ಬೀತರಾಗಿ ನಡೆದಾಡುವ ಪರಿಸ್ಥಿತಿ ಉಂಟಾಗಿದೆ.
ರಾತ್ರಿ ವೇಳೆ ಹೆಚ್ಚುತ್ತಿದೆ ಶಬ್ದ ಮಾಲಿನ್ಯ
ರಾಮದುರ್ಗ್ ಪಟ್ಟಣದ ಈ ಟಿ ಓಣಿಯಲ್ಲಿ ಇರುವ ಏರ್ಟೆಲ್ ಹಾಗೂ ಜಿಯೋ ಟವರ್ ಗಳಿಂದ ದಿನದಿಂದ ದಿನಕ್ಕೆ ಶಬ್ದ ಮಾಲಿನ್ಯ ಪ್ರಮಾಣದಲ್ಲಿ ಗಣನೀಯ ಏರಿಕೆಯಾಗುತ್ತಿದ್ದು, ಹಗಲಿಗಿಂತ ರಾತ್ರಿ ವೇಳೆ ಶಬ್ದದ ಪ್ರಮಾಣ ಹೆಚ್ಚಳವಾಗುತ್ತಿರುವುದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ. ಡೀಸೆಲ್ ಜನರೇಟರ್ಗಳ ಬಳಕೆ, ಏರ್ಟೆಲ್ ಹಾಗೂ ಜಿಯೋ ಟವರ್ದಿಂದ ಅಕ್ಕ ಪಕ್ಕ ಇರುವ ಮನೆಯಲ್ಲಿ ವಾಸ ಮಾಡತಕ್ಕಂತಹ ಜನರಿಗೆ ತುಂಬಾ ತೊಂದರೆಯಾಗಿದ್ದು ಮಳೆಗಾಲ ದಿನದಲ್ಲಿ ಟವರ್ ದಿಂದ ಕೆಲವೊಂದು ಅಕ್ಕಪಕ್ಕ ಮನೆಗಳಿಗೆ ಅಪಾಯಕಾರಿ ಆಗಿದೆ ಎಂದು ಸಾರ್ವಜನಿಕರ ಆರೋಪಿಸಿದರು


ಜನಪರ ಟ್ರಸ್ಟ್ ಅಧ್ಯಕ್ಷರಾದ ಸುಭಾಷ್ ಗೊಡ್ಕೆ ಹಾಗೂ ಅವರ ಬೆಂಬಲಿಗರಿಂದ ಪ್ರತಿಭಟನೆ ಮಾಡಿ ಜಿಯೋ ಟವರ್ ಹಾಗೂ ಏರ್ಟೆಲ್ ಟವರನ್ನು ಸಂಪೂರ್ಣ ಬಂದು ಮಾಡಿ ಮುಂಬಾಗದ ಗೇಟುಗಳನ್ನು ಬೀಗ ಹಾಕಿದರು ಈ ಟವರ್ ಗಳನ್ನು ಆದಷ್ಟು ಬೇಗ ತೆರವುಗೊಳಿಸಬೇಕು ಇಲ್ಲದಿದ್ದರೆ ಮುಂದಿನ ದಿನಮಾನಗಳಲ್ಲಿ ನಮ್ಮ ಹೋರಾಟ ಟವರ್ ಗಳನ್ನು ಏರಿ ನಾವೇ ಟವರ್ ಗಳಿಂದ ಜಿಗಿಯುತ್ತೇವೆ ನಮ್ಮ ಸಾವಿಗೆ ಜಿಯೋ ಹಾಗೂ ಏರ್ಟೆಲ್ ಬಿಲ್ಡಿಂಗ್ ಮಾಲೀಕರು ಕಾರಣರಾಗುತ್ತಾರೆ ಎಂದು ಜನಪರ ಟ್ರಸ್ಟ್ ಅಧ್ಯಕ್ಷರಾದ ಸುಭಾಷ ಘೋಡಕೆ ಅವರು ಎಚ್ಚರಿಸಿದರು .

ಈ ಒಂದು ಸಂದರ್ಭದಲ್ಲಿ ಓಣಿಯ ಗಣ್ಯ ವ್ಯಕ್ತಿಗಳಾದ ಸುರೇಶ್ ಪತ್ತೆಪೂರ್ ,ಈರಪ್ಪ ಕೊಳಚಿ, ಮಲ್ಲಪ್ಪ ಅಸುಂಡಿ, ಪ್ರವೀಣ್ ಡಬಲಾಪೂರ, ನಾಗಪ್ಪ ಜಿರಂಕಳಿ, ಚಂಬಣ್ಣ ಬೈಲವಾಡ, ವೆಂಕಟೇಶ್ ಖೋoಡಾ, ಇನ್ನು ಅನೇಕರು ಇದ್ದರು

About The Author