ಗೃಹ ಲಕ್ಷ್ಮಿ ಹಣ ಸಮರ್ಪಕವಾಗಿ ಮಂಜೂರು ಮಾಡುವಂತೆ ಆಗ್ರಹಿಸಿ- ಸರ್ಕಾರಕ್ಕೆ ಪತ್ರ ಅಭಿಯಾನ

WhatsApp Group Join Now

ವಿಜಯನಗರ ಜಿಲ್ಲೆ: ಕೊಟ್ಟೂರು ತಾಲೂಕು ಹಾಗೂ ಹಗರಿಬೊಮ್ಮನಹಳ್ಳಿ ತಾಲೂಕು ವ್ಯಾಪ್ತಿಯ, ವಿವಿದ ಗ್ರಾಮಗಳ ಉಧ್ಯೋಗ ಖಾತರಿ ಯೋಜನೆ ಫಲಾನುಭವಿಗಳು. ಕೆಲ ಗ್ರಾಮಗಳ ಬಡ ಕೂಲಿ ಕಾರ್ಮಿಕ ಮಹಿಳೆಯರು, ಹಾಗೂ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳು. ಗೃಹ ಲಕ್ಷ್ಮಿ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರಬೇಕೆಂದು ಒತ್ತಾಹಿಸಿ, ಸಚಿವರಿಗೆ ಮುಖ್ಯ ಮಂತ್ರಿಗಳಿಗೆ ಪತ್ರ ಬರೆದು ರಿಜಿಸ್ಟರ್ ಪೋಸ್ಟ್ ಮಾಡಿ ಅಭಿಯಾನ ನಡೆಸಿದ್ದಾರೆ. ಅವರು ಪತ್ರಕರ್ತರೊಂದಿಗೆ ತಮ್ಮ ಅಳಲು ತೋಡಿಕೊಂಡಿದ್ದಾರೆ, ಕಳೆದ ಮೂರ್ನಾಲ್ಕು ತಿಂಗಳುಗಳಿಂದ ತಮ್ಮ ಖಾತೆಗೆ ಯೋಜನೆಯ ಹಣ ಮಂಜೂರಾಗಿಲ್ಲ. ಕಾರಣ ಬಾಕಿ ಕಂತುಗಳ ಹಣವನ್ನು ಸಂಪೂರ್ಣವಾಗಿ ಮಂಜೂರು ಮಾಡಬೇಕು, ಸಾವಿರಾರು ಅರ್ಹ ಫಲಾನುಭವಿಗಳಿಗೆ ಯೋಜನೆಯ ಒಂದು ಕಂತಿನ ಹಣವೂ ಬಂದಿಲ್ಲ. ಬಹುತೇಕ ಅರ್ಹ ಅರ್ಜಿದಾರರ ಅರ್ಜಿಯ ಸ್ಥಿತಿ ಗತಿ ಮಾಹಿತಿ ತಿಳಿಯುತ್ತಿಲ್ಲ. ಕಾರಣ ಸರ್ಕಾರ ಗೃಹ ಲಕ್ಷ್ಮೀ ಯೋಜನೆಯನ್ನು, ಸಮರ್ಪಕವಾಗಿ ಅನುಷ್ಟಾನಕ್ಕೆ ತರಬೇಕಿದೆ. ಗೃಹ ಲಕ್ಷ್ಮಿ ಯೋಜನೆಯ ಯಾವುದೇ ಕಂತು, ಬಾಕಿ ಉಳಿಸದೇ ಅರ್ಹ ಫಲಾನುಭವಿಗಳ ಖಾತೆಗೆ. ಸಂಪೂರ್ಣ ಹಣ ಪಾವತಿ ಮಾಡಬೇಕೆಂದು ಒತ್ತಾಯಿಸಿ, ಗ್ರಾಕೂಸ್ ನೇತೃತ್ವದಲ್ಲಿ ಗ್ರಾಮಗಳ ಮಹಿಳೆಯರು ಫಲಾನುಭವಿ ಗಳು ಒತ್ತಾಯಿಸಿದ್ದಾರೆ. ಪೋಸ್ಟ್ ಮೂಲಕ ರಾಜ್ಯ ಸರ್ಕಾರಕ್ಕೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ರವರಿಗೆ, ಪತ್ರ ಬರೆದು ಕ್ರಮಕ್ಕ‍ಾಗಿ ತಾವು ಒತ್ತಾಯಿಸಿರುವುದಾಗಿ ತಿಳಿಸಿದ್ದಾರೆ. ಸಂಬಂಧಿಸಿದಂತೆ ಅವರು ಹೇಳಿಕೆ ನೀಡಿದ್ದು ಗೃಹ ಲಕ್ಷ್ಮಿ ಯೋಜನೆ ಮಾತ್ರವಲ್ಲ, ಆಹಾರ ಇಲಾಖೆಯಲ್ಲಿ ಹಲವು ಸೌಲಭ್ಯಗಳು ಸಮರ್ಪಕವಾಗಿ ದೊರಕುತ್ತಿಲ್ಲ ಎಂದು ಅವರು ದೂರಿದ್ದಾರೆ. ಆಹಾರ ಇಲಾಖೆಯಿಂದ ಪಡಿತರ ಚೀಟಿ ಮಂಜೂರಾತಿಗೆ ಹೊಸ ಅರ್ಜಿ ಸ್ವೀಕರಿಸುತ್ತಿಲ್ಲ. ಹಾಲಿ ಇರುವ ಕಾರ್ಡಗಳಲ್ಲಿನ ದೋಷ ಸರಿಪಡಿಸಲು, ಅಗತ್ಯ ಕಾಲಾವಕಾಶ ನೀಡುತ್ತಿಲ್ಲ. ಬಹುತೇಕ ಗ್ರಾಮ ಒನ್ ಗಳಲ್ಲಿ ಸರ್ವರ್ ನೆಟರ್ವಕ್ ಸರಿ ಇಲ್ಲವೆಂದು, ತಿಂಗಳು ಗಟ್ಟಲೆ ಅಲೆದಾಡಿಸುವ ದುಸ್ಥಿತಿ ನಿರ್ಮಾಣವಾಗಿದೆ. ಇದನ್ನೆಲ್ಲ‍ಾ ಶೀಘ್ರವೇ ಸರಿ ಪಡಿಸಬೇಕಿದೆ, ಸಂಬಂಧಿಸಿದ ಇಲಾಖೆಯ ಸಚಿವರು ಅಗತ್ಯ ಕ್ರಮಗಳನ್ನು ಶೀಗ್ರವೇ ಜಾರಿ ತರಬೇಕೆಂದು ಅವರು ಈ ಮೂಲಕ ಒತ್ತಾಯಿಸಿದ್ದಾರೆ. ಗ್ರಾಮೀಣ ರಾಷ್ಟ್ರೀಯ ಉಧ್ಯೋಗ ಖಾತರಿ ಯೋಜನೆ ಕಾರ್ಮಿಕರು, ಗ್ರಾಕೂಸ್ ಸಂಸ್ಥೆಯ ನೇತೃತ್ವದಲ್ಲಿ. ಕೊಟ್ಟೂರು ಭಾಗದಲ್ಲಿ ಗ್ರಾಕೂಸ್ ಸಂಸ್ಥೆಯ ನೇತ್ರಾವತಿ ಮತ್ತು ಹಗರಿಬೊಮ್ಮನಹಳ್ಳಿ ವ್ಯಾಪ್ತಿಯಲ್ಲಿ ಎಮ್.ಬಿ.ಕೊಟ್ರಮ್ಮ ರವರ ನೇತೃತ್ವದಲ್ಲಿ. ಸಂಬಂಧಿಸಿದ ಇಲಾಖೆಯ ಸಚಿವರಿಗೆ, ಹಾಗೂ ಮುಖ್ಯಮಂತ್ರಿಗಳಿಗೆ ಒತ್ರಾಯಿಸಿ. ರಿಜಿಸ್ಟರ್ ಪೋಸ್ಟ್ ಮಾಡೋ ಮೂಲಕ, ರಿಜಿಸ್ಟಾರ್ ಪತ್ರ ಅಭಿಯಾನ ಹಮ್ಮಿಕೊಂಡಿದ್ದಾರೆ. ಅಭಿಯಾನದಲ್ಲಿ ಹಗರಿಬೊಮ್ಮನಹಳ್ಳಿ ಹಾಗೂ ಕೊಟ್ಟೂರು ತಾಲೂಕುಗಳ, ಹತ್ತು ಹಲವು ಗ್ರಾಮಗಳ ನೂರಾರು ಕಾರ್ಮಿಕರು. ಮತ್ತು ನರೇಗ ಕಾರ್ಮಿಕರು ಗೃಹಲಕ್ಷ್ಮಿ ಯೋಜನೆಯ, ಅರ್ಜಿ ಸಲ್ಲಿಸಿರುವ ಅರ್ಹ ಫಲಾನುಭವಿಗಳು ಭಾಗಿಯಾಗಿದ್ದರು.

About The Author