
ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ನೌಕರರ ಸಭಾ ಭವನದಲ್ಲಿ ನೌಕರರ ಸಂಘದ ನೌಕರರು ಆಯೋಜಿಸಿದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ 2024-25 ನೇ ಸಾಲಿನಲ್ಲಿ ಎಸ್‌ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ನಡೆದ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಕಾಂಗ್ರೆಸ್ ಮುಖಂಡ ಪ್ರದೀಪ ಅವರು ಉದ್ಘಾಟಿಸಿದರು.
ವಿದ್ಯಾರ್ಥಿಗಳು ಕೇವಲ ಅಂಕಗಳಿಗೆ ಮಾತ್ರ ಮಹತ್ವ ನೀಡದೇ, ತಮ್ಮ ವ್ಯಾಸಂಗಕ್ಕೆ ಮಾರ್ಗದರ್ಶನ ನೀಡಿದ ಶಿಕ್ಷಕರು, ಪಾಲಕರನ್ನು ದೇವರಂತೆ ಕಾಣಬೇಕು. ಅಂದಾಗ ಎಲ್ಲರೂ ನೆಮ್ಮದಿಯ ಜೀವನ ಸಾಗಿಸಲು ಸೂಚಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಟಿ. ಬಳಿಗಾರ ಮಾತನಾಡಿ, ಸರಕಾರಿ ನೌಕರರ ಸಂಘದ ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹಿಸುತ್ತಿರುವ ಕಾರ್ಯ ಶ್ಲಾಘನೀಯ. ಸತ್ಕಾರದಿಂದ ಮತ್ತಷ್ಟು ಪ್ರೇರಣೆಯಾಗಲಿದೆ ಎಂದು ಹೇಳಿದರು.
ತಹಶೀಲ್ದಾರ ಸಿದ್ಧಾರೂಢ ಬನ್ನಿಕೊಪ್ಪ ಮಾತನಾಡಿ, ವಿದ್ಯಾರ್ಥಿಗಳು ಕಷ್ಟಪಟ್ಟು ವ್ಯಾಸಂಗ ಮಾಡಿದ ನಂತರ ಜೀವನ ರೂಪಿಸಿಕೊಳ್ಳಲು. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಈಗಿನಿಂದಲೇ ತಯಾರಿ ಮಾಡಿಕೊಂಡರು ನಿಗಧಿತ ವ್ಯಾಸಂಗದ ನಂತರ ಗುರಿ ಸಾಧನೆ ಮಾಡಿದರು.
ಅಧ್ಯಕ್ಷತೆ ವಹಿಸಿದ್ದ ನೌಕರರ ಸಂಘದ ತಾಲೂಕಾಧ್ಯಕ್ಷ ಐ.ವೈ. ಪವಾಡಿಗೌಡ್ರ ಮಾತನಾಡಿ, ವಿದ್ಯಾರ್ಥಿಗಳು ವ್ಯಾಸಂಗದ ಜೊತೆಗೆ ವಿದ್ಯಾರ್ಥಿ ದಿಶೆಯಲ್ಲಿಯೇ ಉನ್ನತ ಹುದ್ದೆಯನ್ನು ಪಡೆಯುವ ಹಂಬಲ ಹೊಂದಿದಲ್ಲಿ ಸಾಧನೆ. ಉನ್ನತ ಮಾಡುವ ಮಕ್ಕಳಿಗೆ ನೌಕರರ ಸಂಘ ಸದಾ ಪ್ರೋತ್ಸಾಹ ನೀಡಲಿದೆ.
ಇದೇ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಅಧಿಕ ಅಂಕಗಳನ್ನು ಪಡೆದು ಸಾಧನೆ ಮಾಡಿದ ಸುಮಾರು 90 ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು.
ಈ ವೇಳೆ ಸಂಘದ ಪದಾಧಿಕಾರಿಗಳಾದ ಮಂಜುನಾಥ ಬೇಕಟ್ಟಿ, ಬಿ.ಬಿ. ಹರನಟ್ಟಿ, ಎಂ.ಎಸ್. ಜಂಗವಾಡ, ಸಿದ್ದಪ್ಪ ಕಟ್ಟೆಕಾರ ಶೋಭಾ ಚಚಡಿ, ಶಿವು ಯರಗುದರಿ, ಅಶೋಕ ಪಾಟೀಲ, ಅಶೋಕ ಹಕಾಟಿ, ಶಿವು ಗೊರವನಕೊಳ್ಳ ಸೇರಿದಂತೆ ಇತರರು ಇದ್ದರು.


