ಬನಶಂಕರಿದೇವಿ ಸಮುದಾಯ ಭವನದ ನೂತನ ಕಟ್ಟಡವನ್ನು ಕಾಂಗ್ರೆಸ್ ಮುಖಂಡ ಪ್ರದೀಪ ಪಟ್ಟಣ ಉದ್ಘಾಟಿಸಿದರು.

WhatsApp Group Join Now

ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಬಣಕಾರ ಪೇಟೆಯಲ್ಲಿ ಶನಿವಾರದಂದು ಶ್ರೀ ಬನಶಂಕರಿದೇವಿ ಸಮುದಾಯ ಭವನದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭÀವನ್ನು ಕಾಂಗ್ರೆಸ್ ಮುಖಂಡ ಪ್ರದೀಪ ಪಟ್ಟಣ ಉದ್ಘಾಟಿಸಿ ಮಾತನಾಡಿದರು. ನಮ್ಮ ತಂದೆ ತಾಯಿ ಶಾಸಕರಿದ್ದ ಕಾಲದಿಂದಲೂ ನೇಕಾರರು ನಮಗೆ ಬೆಂಬಲಿಸಿದ್ದಾರೆ. ನಿಮ್ಮ ಋಣ ತೀರಿಸಲು ನಾವು ಸದಾಸಿದ್ದ ಎಂದು ಹೇಳಿದರು.

ಈ ವೇಳೆ ಹಂಪಿ ಹೇಮಕೂಟ ಮಹಾಸಂಸ್ಥಾನ ಶ್ರೀಗಾಯತ್ರಿ ಪೀಠದ ಪೀಠಾಧಿಪತಿ ಶ್ರೀ ದಯಾನಂದಪುರಿ ಸ್ವಾಮೀಜಿ ಮಾತನಾಡಿ ನೇಕಾರರು ಕೇವಲ ಬಟ್ಟೆ ನೇಯ್ಗೆ ಕಾಯಕ ಮಾಡುವುದು ಅಷ್ಟೇ ಅಲ್ಲದೇ ರಂಗ ಕಲಾವಿದರಾಗಿ, ಪುರೋಹಿತ, ಜೋತಿಷಿ ಹೀಗೆ ಹಲವು ಕ್ಷೇತ್ರದಲ್ಲಿ ಹೆಸರುವಾಸಿಯಾಗಿದ್ದಾರೆ ಎಂದು ಹೇಳಿದರು.

ದೇವಾಂಗ ಸಮಾಜ ಸಂಘಟಿತವಾದಲ್ಲಿ ಮಾತ್ರ ಅವರ ಬಲ ಹೆಚ್ಚಳವಾಗಲಿದೆ. ಆ ನಿಟ್ಟಿನಲ್ಲಿ ರಾಮದುರ್ಗದ ಸಮಾಜವು ಉತ್ತಮ ನಾಯಕತ್ವ ಗುಣಗಳಿಂದ ಕೂಡಿದ್ದು, ಉತ್ತಮ ಸಮುದಾಯ ಭವನ ನಿರ್ಮಿಸಿ ಸಂಘಟನಾತ್ಮಕ ಶಕ್ತಿ ತೋರಿಸಿದ್ದಾರೆ ಎಂದು ಹೇಳಿದರು.
ಮಾಜಿ ಶಾಸಕ ಮಹಾದೇವಪ್ಪ ಯಾದವಾಡ ಅವರು ಮಾತನಾಡಿ, ನೇಕಾರರು ಸಂಕಷ್ಟದ ಸಂದರ್ಭದಲ್ಲಿ ನಾವು ಶಾಸಕರಿದ್ದ ವೇಳೆ ಸದನದ ಬಾವಿಗೆ ಇಳಿದು ಹೋರಾಟ ಮಾಡಿದ್ದರ ಫಲವಾಗಿ ನೇಕಾರ ಮಗ್ಗಗಳಿಗೆ ೧೦ ಎಚ್‌ಪಿ ವರೆಗೆ ರಿಯಾಯಿತಿ ದರದಲ್ಲಿ ವಿದ್ಯುತ್ ದೊರೆಯಿತು. ೨೦೧೯ರ ಮಲಪ್ರಭಾ ನದಿಗೆ ಪ್ರವಾಹ ಬಂದ ಸಂದರ್ಭದಲ್ಲಿಯೂ ಮನೆ ಕಳೆದುಕೊಂಡ ನೇಕಾರರಿಗೆ ೫ ಲಕ್ಷ ಪರಿಹಾರ ಹಾಗೂ ಹಾನಿಯಾದ ಮಗ್ಗಗಳಿಗೆ ಪರಿಹಾರ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಿರುವುದಾಗಿ ಹೇಳಿದರು.

ಈ ಸಂದರ್ಭದಲ್ಲಿ ರಾಜ್ಯ ದೇವಾಂಗ ಸಂಘದ ಅಧ್ಯಕ್ಷ ರವೀಂದ್ರ ಕಲಬುರ್ಗಿ, ಕಾರ್ಯದರ್ಶಿ ಟಿ. ರಾಜೇಶ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಜಿಲ್ಲಾ ನಿರ್ದೇಶಕ ಎಚ್.ಆರ್. ಲವಕುಮಾರ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಏಕನಾಥ ಕೊಣ್ಣೂರ, ಮುರಳಿ ಸೂಳಿಭಾವಿ, ರವೀಂದ್ರ ಹರವಿ, ಚಂದ್ರು ಕಲ್ಲೂರ, ಅರ್ಚಕ ನಿರಂಜನಸ್ವಾಮಿ ದೇವಾಂಗಮಠ, ಆನಂದಸ್ವಾಮಿ ದೇವಾಂಗಮಠ ಸಾನಿಧ್ಯ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಧನಲಕ್ಷಿö್ಮÃ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಲ್ಲಣ್ಣ ಯಾದವಾಡ, ಗಜಾನನ ಗುಂಜೇರಿ, ಶಂಕ್ರಣ್ಣ ಮುರುಡಿ, ನಾರಾಯಣಪ್ಪ ಬೆನ್ನೂರ, ಈರಪ್ಪಜ್ಜ ಕೊಣ್ಣೂರ, ಈಶ್ವರ ಸುಳ್ಳದ, ನಾಗಪ್ಪ ಸೋರಿ, ಶಿವಪ್ರಕಾಶ ರೊಟ್ಟಿ, ಈರಣ್ಣ ರಾಮದುರ್ಗ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

About The Author