ಶಿವಶರಣ ಶ್ರೀ ನುಲಿಯ ಚಂದಯ್ಯ ಜಯಂತಿಯ ಪ್ರಯುಕ್ತ ಶಿವ ಶರಣ ಶ್ರೀ ನುಲಿಯ ಚಂದಯ್ಯ ಅವರ ಭಾವಚಿತ್ರಕ್ಕೆ ಅಪರ ಜಿಲ್ಲಾಧಿಕಾರಿ ಗೀತಾ ಸಿಡಿ ಪುಷ್ಪಾಚನೆ ಸಲ್ಲಿಸಿದರು.

WhatsApp Group Join Now

ಧಾರವಾಡ ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ ಸಾಂಸ್ಕøತಿಕ ಭವನದಲ್ಲಿ ಆಯೋಜಿಸಲಾದ ಶಿವಶರಣ ಶ್ರೀ ನುಲಿಯ ಚಂದಯ್ಯ ಜಯಂತಿಯ ಪ್ರಯುಕ್ತ ಶಿವ ಶರಣ ಶ್ರೀ ನುಲಿಯ ಚಂದಯ್ಯ ಅವರ ಭಾವಚಿತ್ರಕ್ಕೆ ಅಪರ ಜಿಲ್ಲಾಧಿಕಾರಿ ಗೀತಾ ಸಿಡಿ ಪುಷ್ಪಾಚನೆ ಸಲ್ಲಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನುಲಿಯ ಚಂದಯ್ಯನವರು, ಕಾಯಕ ಶರಣರಾದ ಬಸವಣ್ಣನವರ ಜೊತೆ ಸೇರಿ ಸಮಜದಲ್ಲಿರುವಂತಹವರನ್ನು ತಮ್ಮ ತಮ್ಮ ಕಸುಬುಗಳ ಮೂಲಕ ಎಲ್ಲರಂತೆ ದುಡಿದು ಜೀವನ ನಡೆಸಿಕೊಂಡು ಬದುಕುವಂತೆ ಸಮಾಜಕ್ಕೆ ಪ್ರೇರಣೆ ನೀಡಿದರು.

ಚಂದ್ಯಯನವರು ಮನೆಯಲ್ಲಿ ಕೆರೆಯ ದಂಡೆಯ ಹತ್ತಿರ ಬೆಳೆದ ನಾರು, ಹುಲ್ಲು ತೆಗೆದುಕೊಂಡು
ಬಂದು ಹಗ್ಗವನ್ನು ನುಲುತ್ತಿದ್ದರು. ಸಮಾಜಕ್ಕೆ ಅನೇಕ ರೀತಿಯಲ್ಲಿ ಸೇವೆಯನ್ನು ಸಲ್ಲಿಸಿದ್ದಾರೆ. ಇವರು ಬಹಳಷ್ಟು ವಚನಗಳನ್ನು ಬರೆಯುವ ಮೂಲಕ ಸಮಾಜಕ್ಕೆ ಮೌಲ್ಯಯುತ ಸಂದೇಶವನ್ನು ನೀಡಿದ್ದಾರೆ ಎಂದು ಅವರು ಹೇಳಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹುಬ್ಬಳ್ಳಿ – ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರ ರಾಮಪ್ಪ ಕೃಷ್ಣಪ್ಪ ಬಡಿಗೇರ ಅವರು ಮಾತನಾಡಿ, ನುಲಿಯ ಚಂದಯ್ಯನವರು ಈ ಒಂದೇ ಸಮಾಜಕ್ಕೆ ಸೀಮಿತವಾಗಿಲ್ಲ ಅವರು ನಾಡಿನ ಎಲ್ಲಾ ಧರ್ಮದವರಿಗೂ ಅನ್ವಯಿಸುತ್ತಾರೆ. ಎಲ್ಲ ಸಮಾಜದವರಿಗೆ ನೂಲುವ ಕಾಯಕದ ಕೊಡುಗೆ ನೀಡಿದಂತಹ ಚಂದಯ್ಯನವರು 12 ಶತಮಾನದ ಬಸವಣ್ಣನವರ ಪ್ರರಣೆ. ಬಸವಣ್ಣವರ ಆಡಳಿತ ಕಾರ್ಯವೈಖರಿಗೆ ಅನೇಕ ಸಮಾಜದ ಮುಖಂಡರು ಜಗತ್ತಲ್ಲಿ ಪ್ರಭಾವ ಬೀರಿದರು. ಇವರು 1160 ನೇ ಇಸವಿಯಲ್ಲಿ ಬಿಜಾಪುರ ಜಿಲ್ಲೆಯ ಶಿವನಿಗೆಯಲ್ಲಿ ಜನಿಸಿದರು. ತಾವು ಮಾಡುತ್ತಿದಂತ ಕಾಯಕದಿಂದ ಬಂದಂತಹ ಹಣದಿಂದ ಸಮಾಜದಲ್ಲಿನ ಜನರಿಗೆ ದಾಸೋಹ ಮಾಡುತ್ತಿದ್ದರು ಅವರು ಹೇಳಿದರು.

ಕಾರ್ಯಕ್ರಮದ ಸಾನಿಧ್ಯವಹಿಸಿದ್ದ ಧಾರವಾಡದ ಮುಳಮುತ್ತಲದ ಯಾದವಾಡ ಗ್ರಾಮದ ಆನಂದ ಧಾಮ ಸಿದ್ದಾರೂಡಮಠದ ಪರಮ ಪೂಜ್ಯ ಡಾ.ಆನಂದ ಮಹಾ ಸ್ವಾಮಿಗಳು ಮಾತನಾಡಿ, ಪ್ರತಿಯೊಬ್ಬರು ತಮ್ಮ ಶಕ್ತಿಯನ್ನು ಉಪಯೋಗಿಸದಿದ್ದರೆ ಮನುಷ್ಯ ಬಲಹೀನನಾಗುತ್ತಾನೆ. ನುಲಿಯ ಚಂದಯ್ಯ ಅವರಂತೆ ಕಾಯಕವನ್ನು ಬದುಕಿಗಾಗಿ ಮಾಡಿಕೊಳ್ಳಬೇಕು. ಮಕ್ಕಳಿಗೆ ಇವರ ಕೃತಿ, ವಚನ, ಸೇವೆಗಳ ಬಗ್ಗೆ ತಿಳಿಸಬೇಕು, ಇಲ್ಲದಿದ್ದರೆ ಮಕ್ಕಳು ಬೇರೊಂದು ವಿಷಯಗಳಲ್ಲಿ ಗಮನ ಹರಿಸುತ್ತಾರೆ ಎಂದು ಅವರು ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸದ್ದ ಸಮಾಜದ ಹನುಮಂತಪ್ಪ ಫ ಕೊರವರ ಅವರು ಮಾತನಾಡಿ, ಸಮಾಜದ ಪ್ರತಿಯೊಬ್ಬರು ತಮ್ಮ ಜೀವನಕ್ಕೆ ಆಧಾರವಾದ ನೂಲುವ ಕಾಯಕವನ್ನು ನಿಷ್ಠೆಯಿಂದ ಮಾಡೋಣ, ನಮ್ಮ ಬದುಕಿಗೆ ದಾರಿ ಮಾಡಿಕೊಟ್ಟ ಚಂದಯ್ಯ ಅವರ ತತ್ವಗಳನ್ನು ಪಾಲಿಸೋಣ ಎಂದು ಅವರು ಹೇಳಿದರು.

ಹುಬ್ಬಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಪ್ರಾದ್ಯಪಕಿ ಡಾ. ಉಮಾದೇವಿ ಪಿ. ಜಡರಾಮಕುಂಟಿ ಅವರು ನುಲಿಯ ಚಂದಯ್ಯ ಅವರ ಜೀವನ ಚರಿತ್ರೆ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ನೀಡಿದರು.

ಕಾರ್ಯಕ್ರಮದಲ್ಲಿ ಹುಬ್ಬಳ್ಳಿ – ಧಾರವಾಡ ಮಹಾನಗರ ಪಾಲಿಕೆಯ ಉಪಮೇಯರ್ ದುರ್ಗಮ್ಮ ಬೀಜವಾಡ, ಸಮಾಜ ಮುಖಂಡರಾದ ನಾರಾಯಣ ಭಜಂತ್ರಿ, ಮುತ್ತುರಾಜ ಜಿ.ಮಾಕಡವಾಲೆ, ರಾಮಣ್ಣ ನಾ. ಹಂಚಿನಮನಿ ಇದ್ದರು. ಗೌರಿ.ಆರ್. ಡಿ ಅವರು ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಡಾ.ಮೃತ್ಯುಂಜಯ ಎಚ್.ಅಗಡಿ ಅವರ ತಂಡದಿಂದಂದ ಸಂಗೀತ ಕಾರ್ಯಕ್ರಮ ಜರುಗಿತು.

ಕಾರ್ಯಕ್ರಮದಲ್ಲಿ ಸಮಾಜದ ಗಣ್ಯರು ಹಾಗೂ ಹಿರಿಯ ಮುಖಂಡರು, ಸಮಾಜ ಬಾಂಧವರು ಉಪಸ್ಥಿತರಿದ್ದರು.

About The Author