12 August 2026
Advertisement
ರಾಜ್ಯ

ಬೆಟಗೇರಿ:ಕ್ರೀಡಾ ಸಮವಸ್ತ್ರ ವಿತರಣೆ ಕಾರ್ಯಕ್ರಮ ನಡೆಯಿತು.

WhatsApp Group Join Now

ಬೆಟಗೇರಿ:ಪ್ರತಿಯೊಬ್ಬ ಶಾಲಾ ಮಗು ಕಲಿಕಾ ಜೀವನವನ್ನು ಸಾರ್ಥಕ ಮಾಡಿಕೊಳ್ಳಬೇಕು. ವಿದ್ಯಾರ್ಥಿ ವೇತನ ಪಡೆದ ಹಣವನ್ನು ವಿದ್ಯಾರ್ಥಿಗಳು ತಮ್ಮ ಶಿಕ್ಷಣಕ್ಕಾಗಿ ಸದುಪಯೋಗ ಮಾಡಿಕೊಳ್ಳಬೇಕು ಎಂದು ಬೆಟಗೇರಿ ಕೆನರಾ ಬ್ಯಾಂಕ್ ಶಾಖೆಯ ಮ್ಯಾನೇಜರ್ ಜಗದೀಶ ಜಾಧವ ಹೇಳಿದರು.
ಗೋಕಾಕ ತಾಲೂಕಿನ ಬೆಟಗೇರಿ ಕೆನರಾ ಬ್ಯಾಂಕ್ ಶಾಖೆಯ ವತಿಯಿಂದ ಸಿಎಸ್‌ಆರ್ ಯೋಜನೆಯಡಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಕೆನರಾ ವಿದ್ಯಾ ಜ್ಯೋತಿ ವಿದ್ಯಾರ್ಥಿ ವೇತನ ಮತ್ತು ಕ್ರೀಡಾ ಸಮವಸ್ತçವನ್ನು ಗೋಕಾಕ ತಾಲೂಕಿನ ಗೋಸಬಾಳ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ಮತ್ತು ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ಇತ್ತೀಚೆಗೆ ನೀಡಿದ ಬಳಿಕ ಮಾತನಾಡಿ, ವಿದ್ಯಾರ್ಥಿ ಬದುಕು ಅಮೂಲ್ಯವಾಗಿದೆ. ಇಂದು ಪ್ರತಿಯೊಬ್ಬರೂ ತಮ್ಮಲ್ಲಿ ದೇಶಾಭಿಮಾನ ಬೆಳಸಿಕೊಳ್ಳಬೇಕು ಎಂದರು.
ಶಾಲೆಯ ಮುಖ್ಯಗುರುಗಳಾದ ಸಿದ್ರಾಮ ಲೋಕನ್ನವರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬೆಟಗೇರಿ ಕೆನರಾ ಬ್ಯಾಂಕ್ ಶಾಖೆಯ ವತಿಯಿಂದ ಸಿಎಸ್‌ಆರ್ ಯೋಜನೆಯಡಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಕೆನರಾ ವಿದ್ಯಾಜ್ಯೋತಿ ಒಟ್ಟು ೨೪ ಸಾವಿರ ರೂ.ಗಳ ವಿದ್ಯಾರ್ಥಿ ವೇತನವನ್ನು ಒಟ್ಟು ೬ ಜನ ಎಸ್‌ಸಿ ಮತ್ತು ಎಸ್‌ಟಿ ಉಭಯ ಶಾಲೆಯ ವಿದ್ಯಾರ್ಥಿನಿಯರಿಗೆ ಮತ್ತು ಸುಮಾರು ೨೦ ಸಾವಿರ ರೂಪಾಯಿಗಳ ಮೌಲ್ಯದ ಕ್ರೀಡಾ ಸಮವಸ್ತçವನ್ನು ನೀಡಿದ ಬಳಿಕ ಸಿಹಿ ವಿತರಿಸಲಾಯಿತು.
ಪೀಲ್ಡ್ ಆಫೀಸರ್ ಮಲ್ಲಿಕಾರ್ಜುನ ನಿಂಬರಗಿ, ಸೋನಾಲಿ ನಾಯ್ಕ, ಪೃಥ್ವಿ ರಡ್ಡಿ, ರಮೇಶ ಪಾಟೀಲ, ಮಹೇಶ ಪತ್ತಾರ, ಬೆಟಗೇರಿ ಕೆನರಾ ಬ್ಯಾಂಕ್ ಶಾಖೆಯ ಸಿಬ್ಬಂದಿ, ಸ್ಥಳೀಯ ಉಭಯ ಶಾಲೆಯ ಶಿಕ್ಷಕರು, ಶಿಕ್ಷಕಿಯರು, ಸಿಬ್ಬಂದಿವರ್ಗ, ವಿದ್ಯಾರ್ಥಿಗಳು, ಇತರರು ಇದ್ದರು.

About The Author