ಮುಖ್ಯಮಂತ್ರಿಗಳಿಗೆ ಪ್ರಾಶಿಕ್ಯೂಶನ್ ಗೆ ಅನುಮತಿ ನೀಡಿದ ರಾಜ್ಯಪಾಲ ಕ್ರಮವನ್ನು ಖಂಡಿಸಿ ವಿವಿದ ಸಂಘಟನೆಗಳ ವೇದಿಕೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರ ಮೂಲಕ ರಾಷ್ಟçಪತಿಯವರಿಗೆ ಮನವಿ ಸಲ್ಲಿಸಲಾಯಿತು.

WhatsApp Group Join Now

ಬೆಳಗಾವಿ ಜಿಲ್ಲೆ ರಾಮದುರ್ಗ ಆರ್.ಟಿ.ಅಯ್. ಕಾರ್ಯಕರ್ತನ ಮನವಿ ಮೇರೆಗೆ ಅದನ್ನು ತನಿಖೆ ನಡೆಸದೆ ಮುಖ್ಯಮಂತ್ರಿಗಳಿಗೆ ದಿಢೀರಗಾಗಿ ಶೋಕಾಸ್ ನೋಟಿಸ್ ಕೊಟ್ಟ, ಪ್ರಾಶಿಕ್ಯೂಶನ್ ಗೆ ಅನುಮತಿ ನೀಡಿದ ರಾಜ್ಯಪಾಲ ಥಾವರಚಂದ ಗೆಹೆಲೊಟ ಇವರ ನೀತಿಯನ್ನು ಖಂಡಿಸಿ ವಿವಿದ ಸಂಘಟನೆಗಳ ವೇದಿಕೆ ನೇತೃತ್ವದಲ್ಲಿ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಪ್ರತಿಭಟನೆ ನಡೆಸಿ ತಹಶೀಲ್ದಾರ ಮೂಲಕ ರಾಷ್ಟçಪತಿಯವರಿಗೆ ಮನವಿ ಅರ್ಪಿಸಲಾಯಿತು.
ಸಿ.ಪಿ.ಎಂ. ಪಕ್ಷದ ಮುಖಂಡ ಜಿ.ಎಒ. ಜೈನೆಖಾನ್ ಮಾತನಾಡಿ, ಒಂದು ಚುನಾಯಿತ ಸರ್ಕಾರವನ್ನು ಮೂಡಾ ಹಗರಣವನ್ನು ಮುಂದಿಟ್ಟುಕೊAಡು ಅಸ್ತಿರಗೊಳಿಸುವುದು ಸಂವಿಧಾನ ಪ್ರಜಾಪ್ರಬುತ್ವ ವಿರೋಧಿ ಕೆಲಸವಾಗಿದೆ. ಈಗಾಗಲೇ ಹೈಕೋರ್ಟನಲ್ಲಿ ಈ ಕುರಿತು ತನಿಖೆ ನಡೆದಿದೆ. ಹಾಗೂ ಮುಖ್ಯಮಂತ್ರಿಗಳು, ಸರಕಾರದ ಕಾರ್ಯದರ್ಶಿಗಳು ಮೂಡಾ ಕುರಿತು ವಿವರವಾದ ದಾಖಲೆ ಸಮೇತ ಬೇಟಿಯಾಗಿ ಮಾತನಾಡಿದ್ದರೂ ರಾಜ್ಯಪಾಲರು ಪ್ರಾಶಿಕ್ಯೂಶನ್‌ಗೆ ಅನುಮತಿ ಕೊಟ್ಟಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ ಎಂದು ಜೈನೆಖಾನ್ ಆಕ್ರೋಶ ವ್ಯಕ್ತಪಡಿಸಿದರು.
ಬಿ.ಜೆ.ಪಿ. ಸರ್ಕಾರ ಯಾವ ಯಾವ ರಾಜ್ಯಗಳಲ್ಲಿ ಇಲ್ಲವೋ ಅಂತಹ ರಾಜ್ಯಗಳಲ್ಲಿ ರಾಜ್ಯಪಾಲರ ಸಹಾಯದಿಂದ ಅಲ್ಲಿಯ ಸರ್ಕಾರಗಳನ್ನು ಅತಂತ್ರ ಮಾಡುವ ದುಷ್ಟ ಕೆಲಸ ಕೇಂದ್ರದ ಬಿ.ಜೆ.ಪಿ. ಸರ್ಕಾರ ಮಾಡುತ್ತಿದೆ. ಉದಾ: ಜಾರ್ಖಂಡ, ಪಶ್ಚಿಮ ಬಂಗಾಲ, ತಮಿಳುನಾಡು ಮತ್ತು ಕೇರಳದಲ್ಲಿ ಸರಕಾರಗಳನ್ನು ಅತಂತ್ರ ಮಾಡುವ ಕೆಲಸಗಳು ಮುಂದುವರೆಸಿದ್ದಾರೆ. ಆದರೆ ಅದು ಕರ್ನಾಟಕದಲ್ಲಿ ನಡೆಯುವದಿಲ್ಲ ಎಂದು ಜನಪರ ಟ್ರಸ್ಟನ ಅಧ್ಯಕ್ಷ ಸುಭಾಸ ಘೋಡಕೆ ಹಾಗೂ ಕಾರ್ಮಿಕ ಸಂಘಟನೆಯ ಮುಖಂಡ ನಾಗಪ್ಪ ಸಂಗೊಳ್ಳಿ ಹೇಳಿದರು.
ಕರ್ನಾಟಕದ ರಾಜ್ಯಾಪಾಲರ ಕಛೇರಿ ಬಿ.ಜೆ.ಪಿ. ಕಛೇರಿಯಾಗಿ ಕೆಲಸ ನಿರ್ವಹಿಸುತ್ತಿದೆ. ಇದು ನಾಚಿಗೇಡಿನ ವಿಷಯ ಕೂಡಲೇ ರಾಷ್ಟçಪತಿಗಳು ಕರ್ನಾಟಕ ರಾಜ್ಯಪಾಲರನ್ನು ಹಿಂದಕ್ಕೆ ಕರೆಯಿಸಿಕೊಳ್ಳಬೇಕು ಎಂದು ಅಶೋಕ ಮೆಟಗುಡ್ಡ, ಪಡಿಯಪ್ಪ ಕ್ವಾರಿ, ಬಾಬು ಹುದ್ದಾರ, ಮಳಿಯಪ್ಪ ಮಾದರ, ಮೆಹಬೂಬ ಯಾದವಾಡ ಮತ್ತು ಪಾರುಖ ಶೇಖ ಮಾತನಾಡಿದರು.
ಸಿದ್ದಪ್ಪ ಮಾಕನ್ನವರ ಸ್ವಾಗತಿಸಿ, ವಂದಿಸಿದರು. ಆಶಿಫ್ ಖಲೀಪ್, ಕೆಂಪಣ್ಣ ಕ್ವಾರಿ, ನಾಗೇಶ ಚಂದರಗಿ, ಬಾಬುಗೌಡ ಪಾಟೀಲ, ಹನಮಂತಗೌಡ ಪಾಟೀಲ ಉಪಸ್ಥಿತರಿದ್ದರು.
ಕರ್ನಾಟಕ ರಾಜ್ಯ ಕುರುಬರ ಸಂಘ, ಕಾರ್ಮಿಕರ ಸಂಘಟನೆ, ಅಂಜುಮನ್ ಎ ಇಸ್ಲಾಂ ಕಮಿಟಿ, ಮಾದಿಗ ಹೋರಾಟ ಸಮಿತಿ, ದಲಿತ ಸಂಘರ್ಷ ಸಮಿತಿ ಮತ್ತು ಎ.ಪಿ.ಜೆ. ಅಬ್ದುಲ್ ಕಲಾಂ ಅಸೋಶಿಯೇಶನ್ ದಂತಹ ಮುಂತಾದ ಸಂಘಟನೆಗಳು ಹೋರಾಟದಲ್ಲಿ ಭಾಗವಹಿಸಿದ್ದರು.

About The Author