
ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಶಿವಪೇಠ ಗ್ರಾಮವನ್ನು ದತ್ತು ಪಡೆದು ಮೂಲಭೂತ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ಶಿವಪೇಠ ಗ್ರಾಮದ ಸಾರ್ವಜನಿಕರು ಸಂಸದ ಹಾಗೂ ಮಾಜಿ ಸಿಎಂ ಜಗದೀಶ ಶೆಟ್ಟರ ಅವರಿಗೆ ಮನವಿ ಸಲ್ಲಿಸಿದರು.
ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ ಸಂದರ್ಭದಲ್ಲಿ ಸಂಸದರನ್ನು ಭೇಟಿ ಮಾಡಿದ ಶಿವಪೇಠ ಗ್ರಾಮಸ್ಥರು ಅವರನ್ನು ಸನ್ಮಾನಿಸಿ ಅವರಿಗೆ ಮನವಿ ಸಲ್ಲಿಸುವ ಮೂಲಕ ಚರಂಡಿ ಹಾಗೂ ರಸ್ತೆ ನಿರ್ಮಾಣ ಸೇರಿದಂತೆ ಮೂಲ ಸೌಕರ್ಯ ಕಲ್ಪಿಸುವಂತೆ ವಿನಂತಿಸಿದರು.
ಶಿವಪೇಠ ಗ್ರಾಮವು ಕಳೆದ ೫೫ ವಷÀðಗಳಿಂದ ಗ್ರಾಮ ಸ್ಥಳಾಂತರ ಗೊಂಡಾಗಿನಿAದ ಇದುವರೆಗೂ ಚರಂಡಿ ನಿರ್ಮಾಣವಾಗಿಲ್ಲ. ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳ ಮಧ್ಯದಲ್ಲಿ ಗ್ರಾಮದ ಚರಂಡಿಯ ನೀರು ನಿಂತು ಒಂದು ಕೆರೆಯಂತೆ ಮಾರ್ಪಾಡಾಗಿ ಅಲ್ಲಿಯೇ ನಿಂತ ನೀರಿನಿಂದ ಗಬ್ಬೆದ್ದು ವಾಸನೆ ಬರುತ್ತಿದ್ದು, ಇದರಿಂದ ಶಾಲಾ ಮಕ್ಕಳಿಗೆ ಹಾಗೂ ಆಸ್ಪತ್ರೆಗೆ ಬಂದು ಹೋಗುವ ಸಾರ್ವಜನಿಕರು ಸಂಕಷ್ಟ ಅನುಭವಿಸುತ್ತಿದ್ದಾರೆ. ಅಲ್ಲದೇ ದುರ್ವಾಸನೆಯಿಂದ ಸೊಳ್ಳೆಗಳು ನಿರ್ಮಾಣವಾಗಿ ಅದರಿಂದ ವಿವಿಧ ಕಾಯಿಲೆಗಳು ಹರಡುತ್ತಿವೆ ಅದ್ದರಿಂದ ತಾವು ಕಾಳಜಿ ವಹಿಸಿ ಮೂಲಕ ಸೌಕರ್ಯಗಳನ್ನು ಒದಗಿಸಬೇಕು. ಅಲ್ಲದೇ ಕಂದಾಯ ಗ್ರಾಮವಾಗಿ ಮಾರ್ಪಟ್ಟ ಶಿವಪೇಠ ಗ್ರಾಮಕ್ಕೆ ಹಕ್ಕು ಪತ್ರ ವಿತರಿಸುವಂತೆ ಇದೇ ವೇಳೆ ಮನವಿ ಮಾಡಲಾಯಿತು.
ಸಾರ್ವಜನಿಕರ ಮನವಿಗೆ ಸ್ಪಂದಿಸಿದ ಸಂಸದರು ರಾಮದುರ್ಗ ತಹಶಿಲ್ದಾರರನ್ನು ಕರೆಯಿಸಿ ಬೇಗನೆ ಹಕ್ಕುಪತ್ರವನ್ನು ವಿತರಿಸುವಂತೆ ಸೂಚಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ರಾಜೇಶ ಬಿಳಗಿ, ಧನಲಕ್ಷ್ಮಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಲ್ಲಣ್ಣ ಯಾದವಾಡ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಮಾರುತಿ ಕೊಪ್ಪದ, ನ್ಯಾಯವಾದಿ ದಡೇದ, ಗ್ರಾಮದ ಮುಖಂಡ ಎಸ್.ಆರ್. ಗುರುಬಸಣ್ಣವರ, ಅವರಾದಿ ಗ್ರಾ.ಪಂ ಸದಸ್ಯ ನಾಗಪ್ಪ ಗಣಮುಖಿ, ಎಂ.ಎಸ್. ಇಟಗಿ, ಸುರೇಶ ಗಣಮುಖಿ, ಬಸಪ್ಪ ಬೇವಿನಮರದ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


