
WhatsApp Group
Join Now
ರಾಮದುರ್ಗ ಭಾರತೀಯ ಕಿಸಾನ ಸಂಘ ಕರ್ನಾಟಕ ಪ್ರದೇಶ ಉತ್ತರ ಪ್ರಾಂತದ ತಾಲೂಕು ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಜರುಗಿತು.
ನೂತನ ಅಧ್ಯಕ್ಷರಾಗಿ ಹಲಗತ್ತಿ ಗ್ರಾಮದ ಸುರೇಶ ನಂದೆಪ್ಪನವರ, ಉಪಾಧ್ಯಕ್ಷರಾಗಿ ರಮೇಶ ಉಳ್ಳಾಗಡ್ಡಿ ಮತ್ತು ಶಿವನಗೌಡ ಕುಲಕರ್ಣಿ, ಕಾರ್ಯದರ್ಶಿ ಈರಣ್ಣ ನಿಜಗುಲಿ, ಸಹ ಕಾರ್ಯದರ್ಶಿಯಾಗಿ ಪವನಕುಮಾರ ಅಂಗಡಿ ಮತ್ತು ಶಿವಾನಂದ ಚಿಕ್ಕನಗೌಡ್ರ, ಯುವ ಪ್ರಮುಖ ಸಿದ್ದು ಹಂಪಿಹೋಳಿ, ಸದಸ್ಯರಾಗಿ ಬಸವರಾಜ ಹದ್ಲಿ, ಆನಂದ ಪೂಜಾರ, ನಿಂಗಪ್ಪ ಗುದಗಿ, ಬಸಪ್ಪ ಕಿತ್ತೂರ, ವೀರಭದ್ರ ಗಾಣಗಿ, ಶಿವನಗೌಡ ಲಕ್ಕನಗೌಡ್ರ, ಬಸವಂತ ಜಗಾಪೂರ ಆಯ್ಕೆಯಾಗಿದ್ದಾರೆ.
ಭಾರತೀಯ ಕಿಸಾನ ಸಂಘದ ಜಿಲ್ಲಾಧ್ಯಕ್ಷ ಶಿವಾನಂದ ಸರದಾರ ಅವರು ನೂತನ ಪದಾಧಿಕಾರಿಗಳ ಹೆಸರನ್ನು ಘೋಶಿಸಿದರು. ಈ ವೇಳೆ ರಾಜ್ಯ ಸಂಘಟನಾ ಕಾರ್ಯದರ್ಶಿ ಪುಟ್ಟಸ್ವಾಮೀಜಿ, ಜಿಲ್ಲಾ ಕಾರ್ಯದರ್ಶಿ ಶಿವಕುಮಾರ ಗಾಣಗಿ, ಸಂಘದ ತಾಲೂಕು ಘಟಕದ ನಿಕಟಪೂರ್ವ ಅಧ್ಯಕ್ಷ ಬಸವರಾಜ ಕೋಣನ್ನವರ ಹಾಗೂ ಗ್ರಾಮದ ಘಟಕದ ಸದಸ್ಯರು ಉಪಸ್ಥಿತರಿದ್ದರು.


