12 August 2026
Advertisement
ರಾಜ್ಯ

50 ಲಕ್ಷ ರೂ.ಹಣಕ್ಕೆ ಬ್ಲಾಕ್ ಮೇಲ್ : ಬೆಸ್ಕಾಂ ಲೈನ್‌ಮೆನ್ ಸೇರಿ ಮೂವರ ವಿರುದ್ಧ ಎಫ್‌ಐಆರ್

WhatsApp Group Join Now

ನೆಲಮಂಗಲ ಬೆಂಗಳೂರು ಹೊರವಲಯ ನೆಲಮಂಗಲ ಬೆಸ್ಕಾಂ ಉಪವಿಭಾಗ ವ್ಯಾಪ್ತಿಯ ಸೊಂಡೆಕೊಪ್ಪ ಶಾಖೆಯ ಲೈನ್ ಮೆನ್
ಒಬ್ಬಖಾಸಗಿ ಯೂಟ್ಯೂಬರ್ ಜೊತೆ ಸೇರಿ ತನ್ನ ಹಿರಿಯ ಅಧಿಕಾರಿ ಸಹಾಯಕ ಇಂಜಿನಿಯರ್ ಬಳಿ 50 ಲಕ್ಷ ರೂ.ಹಣಕ್ಕೆ ಬ್ಲಾಕ್ ಮೇಲ್
ಮಾಡಿರುವ ಆರೋಪ ಕೇಳಿಬಂದಿದೆ.
ಬ್ಲಾಕ್ ಮೇಲ್‌ಗೆ ನೊಂದ ಸೊಂಡೆಕೊಪ್ಪ ಬೆಸ್ಕಾಂ ಶಾಖೆಯ ಸಹಾಯಕ ಇಂಜಿನಿಯ‌ ನಾಗರಾಜ್ ನೆಲಮಂಗಲ ಪೊಲೀಸ್
ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಬೆಸ್ಕಾಂನಲ್ಲಿ ನಾಗರಾಜ್ ಅವ್ಯವಹಾರ ಮಾಡುತಿದ್ದಾರೆ ಎಂದು ಸುಖಾ ಸುಮ್ಮನೆ ಅರ್ಜಿಗಳನ್ನು ಹಾಕಿ ಹೆದರಿಸಲು ಪ್ರಯತ್ನಿಸಿದ ಅಲ್ಲಿನ ಲೈನ್ ಮೆನ್ ಹರೀಶ್ ಸೇರಿದಂತೆ ಇಬ್ಬರು ಸ್ಥಳೀಯ ಯೂಟ್ಯೂಬರ್‌ಗಳು 50 ಲಕ್ಷ ಹಣ ನೀಡುವಂತೆ ಬ್ಲಾಕ್ ಮೇಲ್ ಮಾಡಿ ಹಣ ಕೊಡದೆ ಇದ್ದಾಗ ಮಾರ್ಫಿಂಗ್ ಫೋಟೋ ಬಳಸಿ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು
ವಿಡಿಯೋ ಹರಿಬಿಟ್ಟು ತೇಜೋವಧೆಗೆ ಪ್ರಯತ್ನ ಮಾಡಿ ಬೆದರಿಕೆ ಹಾಕಿರುವ ಆರೋಪ ಕೇಳಿ ಬಂದಿದೆ.
ಬೆಸ್ಕಾಂ ಲೈನ್ ಮೆನ್ ಹರೀಶ್, ಯೂಟ್ಯೂಬರ್‌ಗಳಾದ
ಬಾಲಕೃಷ್ಣ, ನಾಗರಾಜ್ ಎಂಬುವವರ ವಿರುದ್ಧ ನೆಲಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಬಗ್ಗೆ ತನಿಖೆ
ನೆಡೆಸುತ್ತಿರುವ ನೆಲಮಂಗಲ ನಗರ ಪೊಲೀಸ್ ಠಾಣೆ ಅಧಿಕಾರಿಗಳು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

About The Author