ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಮಜ್ಡೂರ್ ಸಂಘದ ಜಾತ ವಾಹನವನ್ನು ರಾಜ್ಯ ಸಂಘಟನಾ ಕಾರ್ಯದರ್ಶಿ ಪ್ರಶಾಂತ ಕಲಾದಗಿ ಆದ್ದೋರಿಂದ ಸ್ವಾಗತಿಸಿದರು

WhatsApp Group Join Now

ರಾಮದುರ್ಗ ಪಟ್ಟಣದಲ್ಲಿ ಶನಿವಾರ ರಂದು ಬೆಳಗಾವಿ ಜಿಲ್ಲಾ ಭಾರತೀಯ ಮಜೂರ್ ಸಂಘದ ವತಿಯಿಂದ ರಾಮದುರ್ಗದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಮಜ್ಡೂರ್ ಸಂಘದ ಜಾತ ವಾಹನವನ್ನು ರಾಜ್ಯ ಸಂಘಟನಾ ಕಾರ್ಯದರ್ಶಿ ಪ್ರಶಾಂತ ಕಲಾದಗಿ ಅವರ ನೇತೃತ್ವದಲ್ಲಿ ಆದ್ದೋರಿಂದ ಸ್ವಾಗತಿಸಿ ಅವರು ಮಾತನಾಡಿದರು.

ಕರ್ನಾಟಕ, ರಾಜ್ಯ ರಸ್ತೆ ಸಾರಿಗೆ ಮದ್ದೂರ್ ಸಂಘ ಕಾರ್ಮಿಕರ ಹಿತಕ್ಕಾಗಿ ಶ್ರಮವಹಿಸುತ್ತಿದೆ, ಮತ್ತು ನಿಮ್ಮ ಸೇವೆಗೆ ಸದಾ ಸಿದ್ಧರಿದ್ದೇವೆ. ಈ ಪರಿಸ್ಥಿತಿಯಲ್ಲಿ ತಮ್ಮ ಮುಂದೆ ಮದ್ದೂರ್ ಸಂಘಟನೆ ಬರುವುದಕ್ಕೆ ಬಹಳಷ್ಟು
ಕಾರಣಗಳು ಸಮಸ್ಯೆಗಳು ಇವೆ.’ಆಡಳಿತ ವರ್ಗದವರು ರಸ್ತೆ ಸಾರಿಗೆಯಲ್ಲಿ ದೈನಂದಿನ ಕಾರ್ಯಾಚರಣೆಗೋಸ್ಕರ ನೌಕರರ ಮೇಲೆ ಕಾರ್ಮಿಕ ಕಾನೂನು ಉಲ್ಲಂಘಿಸಿ ಒತ್ತಡದಿಂದ ಕರ್ತವ್ಯವನ್ನು ಮಾಡಿಸುತ್ತಿದ್ದಾರೆ. ಕಾರ್ಮಿಕರು ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ. ಸಂಸ್ಥೆಯಲ್ಲಿ
ಭ್ರಷ್ಟಾಚಾರ ತಾಂಡವವಾಡುತ್ತಿದ್ದೆ. ದುಡುಮೆಗೆ ತಕ್ಕ ಪ್ರತಿಫಲ ನೀಡುತ್ತಿಲ್ಲ, ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಕಾರ್ಮಿಕರನ್ನು ಗುಲಾಮರ ರೀತಿ
ನೋಡುತ್ತಿದ್ದಾರೆ. ಬೈಯ್ಯುವುದು, ಏಕವಚನದಲ್ಲಿ ಮಾತನಾಡಿಸುತ್ತಿದ್ದಾರೆ. ಇವೆಲ್ಲವನ್ನು ಬಗೆಹರಿಸಿಕೊಳ್ಳಲು ಕಾರ್ಮಿಕರು ನಮ್ಮ ಮದ್ದೂ‌ರ ಸಂಘಟನೆಗೆ ಕೈಜೋಡಿಸಬೇಕೆಂದು ಸಂಘ ಬಯಸುತ್ತದೆ, ನೀವುಗಳು ಸಹಕಾರ ನೀಡಿ ಸಂಘವು ನಿಮ್ಮ ಸೇವೆಗೆ ಸದಾ ಸಿದ್ಧವಿರುತ್ತದೆ.
ನೌಕರರಿಗೆ ನೂರಾರು ತೊಂದರೆಗಳಿದ್ದರೂ ಸಹ ಸದ್ಯದ ಪರಿಸ್ಥಿತಿಯಲ್ಲಿ ಅತಿ ಮುಖ್ಯವಾದ ತೊಂದರೆಗಳನ್ನು ಈ ಕೆಳಕಂಡಂತೆ ಪಟ್ಟಿ
ಮಾಡಲಾಗಿದೆ. ನಿಮ್ಮ ತೊಂದರೆಗಳನ್ನು ಬಗೆಹರಿಸುವಲ್ಲಿ ಸಂಘಟನೆ ಬಹಳವಾಗಿ ಶ್ರಮಿಸುತ್ತಾ ಬಂದಿದೆ, ಹಾಗೂ ಬಗೆ ಹರಿಸಿಕೊಟ್ಟಿರುತ್ತದೆ.
ಈ ಮೊದಲು 2004, 2008ರ ಇನ್ನೂ ಅನೇಕ ವೇತನ ಪರಿಷ್ಕರಣೆ ಸಮಯದಲ್ಲಿ 5% ಮತ್ತು 6% ಏಕ ಪಕ್ಷೀಯವಾಗಿ ಜಾರಿ ಮಾಡಿರುತ್ತಾರೆ.
ಸದರಿ ವಿಷಯ ಅಂದಿನ ಕಾರ್ಮಿಕ ನಾಯಕರು ಗೌಪ್ಯವಾಗಿ ಒಪ್ಪಿಕೊಂಡಿರುತ್ತಾರೆ. ನೌಕರರಿಂದ ಒಪ್ಪಿಗೆ ಪತ್ರವನ್ನು ಸಂಸ್ಥೆ ಪಡೆದುಕೊಂಡಾಗ
ನೀವು ಸಹಿ ಮಾಡಿಕೊಡಬೇಡಿ ಎಂದು ಏಕೆ ಉಳಿದ ನಾಯಕರು ಕಾರ್ಮಿಕರಿಗೆ ಹೇಳಿರುವುದಿಲ್ಲ ? ಅದು ಸರಿಯಾದ ವೇತನ
ಪರಿಷ್ಕರಣೆಯಾಗಿದ್ದರೆ ನಾವು ಸರ್ಕಾರಿ ನೌಕರರಿಗಿಂತ ಹೆಚ್ಚಿನ ವೇತನ ಪಡೆಯುತ್ತಿದ್ದೆವು ಅಲ್ಲವೆ.
2016ರಲ್ಲಿ ವೇತನ ಪರಿಷ್ಕರಣೆ ಸಂದರ್ಭದಲ್ಲಿ ಕಾರ್ಮಿಕ ಸಂಘಟನೆಯ ಇನ್ನುಳಿದ ಕಾರ್ಮಿಕ ನಾಯಕರುಗಳು ಒಟ್ಟು ವೇತನಕ್ಕೆ 12.5%
ಒಪ್ಪಿರುತ್ತಾರೆ ಎಂದು ಮಾನ್ಯ ಮುಖ್ಯಮಂತ್ರಿಯವರ ಮನೆಯಲ್ಲಿ ಕೆ.ಎಸ್‌.ಆರ್.ಟಿ.ಸಿ, ಅಂದಿನ ಎಂ.ಡಿ. ಕಠಾರಿಯವರು ತಿಳಿಸಿದ್ದರು,
ಮದ್ದೂರ್ ಸಂಘ ಬಲವಾಗಿ ಇದು ಮೋಸವೆಂದು ದರಣಿಯನ್ನು ಮುಖ್ಯಮಂತ್ರಿ ಮನೆಯಲ್ಲಿ ಕುಳಿತುಕೊಂಡಾಗ, CITU ಸಂಘ ಆಗ ನಮಗೆ ಸಹಕಾರ ನೀಡಿರುತ್ತಾರೆ, ಇದರಿಂದ ಮುಖ್ಯಮಂತ್ರಿಯವರು ಪುನಃ ಕರೆದು ಮೂಲವೇತನಕ್ಕೆ 12.5% ವೇತನ ಹೆಚ್ಚಳ ಮಾಡಿರುತ್ತಾರೆ, ಇದು ನಮ್ಮ ಸಂಘಟನೆಯ ಪ್ರತಿಫಲ.ನಂತರ 2020ರ ವೇತನ ಪರಿಷ್ಕರಣೆ ಕೂಟದ ನಾಯಕರುಗಳು ನಿಮಗೆ ಹೊಸ ಆಸೆ ತೋರಿಸಿ ನಿಮ್ಮನ್ನು ಸರ್ಕಾರಿ ನೌಕರರನ್ನಾಗಿ
ಮಾಡಿಸುತ್ತೇವೆ ಎಂಬ ಅಂಶವನ್ನು ನೀಡಿ ಒಟ್ಟು 2020, ಡಿಸೆಂಬರ್ ಮತ್ತು ಏಪ್ರಿಲ್ 2021ರಲ್ಲಿ ಒಟ್ಟು ಸುಮಾರು 20 ದಿವಸಗಳ ಮುಷ್ಕರ
ಮಾಡಿದಾಗ ಎಲ್ಲಾ ಸಂಘನೆಗಳ ಮಾರ್ಗದರ್ಶನ ಪಡೆಯದೆ ಏಕಪಕ್ಷೀಯವಾಗಿ ಮುಷ್ಕರಕ್ಕೆ ಕರೆ ನೀಡಿದಾಗ ಎಲ್ಲಾ ಸಂಘಟನೆಗಳು ತಟಸ್ಥವಾಗಿದ್ದಾರೆ. ಸದರಿ ಮುಷ್ಕರದಿಂದ ಒಂದು ಪೈಸೆ ಸಹ ಅನುಕೂಲ ಪಡೆಯಲಿಲ್ಲ. ಆದರೆ ಅದರಿಂದ ಸಾವಿರಾರು ಕಾರ್ಮಿಕರು ವರ್ಗಾವಣೆ ಮತ್ತು ಸಂಬಳ ಇತರೆ ಸೌಲಭ್ಯಗಳನ್ನು ಹಾಗೂ ಅಮಾನತ್ತು ಹಾಗೂ ಬಿ.ಎಂ.ಟಿ.ಸಿ. ಯಲ್ಲಿ 2800 ಕಾರ್ಮಿಕರ ವಜಾ
ಮಾಡಿರುತ್ತಾರೆ. ಇವರ ಅನೈತಿಕ ಮುಷ್ಕರದಿಂದ ಕಾರ್ಮಿಕರು ಶಿಕ್ಷೆಗೆ ಒಳಪಟ್ಟಿರುತ್ತಾರೆ, ಹಾಗೂ ಅನೇಕ ಕಾರ್ಮಿಕರು ಬೀದಿ ಪಾಲಾಗಿರುತ್ತಾರೆ
ಹಾಗೂ ಬೋಂಡ ಬಜ್ಜಿಯನ್ನು ರಸ್ತೆಯಲ್ಲಿ ಮಾರಿಸಿರುತ್ತಾರೆ, ಮನೆಯ ಹೆಣ್ಣು ಮಕ್ಕಳನ್ನು ಬೀದಿಗೆ ತಂದು ಭಿಕ್ಷೆ ಬೇಡಿಸಿರುತ್ತಾರೆ, ಕಾರ್ಮಿಕ
ನಾಯಕರಾದವರು ಕಾರ್ಮಿಕ ಹಿತ ಕಾಪಾಡಬೇಕು ಆದರೆ ಕೂಟದ ನಾಯಕರು ಕಾರ್ಮಿಕರನ್ನು ಬೀದಿಗೆ ತಂದು ನಡು ನೀರಿನಲ್ಲಿ
ಕೈಬಿಟ್ಟಿರುತ್ತಾರೆ. ನಾಲ್ಕು ನಿಗಮಗಳಲ್ಲಿಯೂ ಸಹ ಈ ಮೇಲಿನ ಸಮಸ್ಯೆಗಳು ಇರುತ್ತವೆ. ಈ ಎಲ್ಲಾ ವಿಷಯ ತಮಗೆ ತಿಳಿದಿರುತ್ತದೆ.
ಇಂತಹ ಕಷ್ಟದ ಸಮಯದಲ್ಲಿ ರಸ್ತೆ ಸಾರಿಗೆ ಮದ್ದೂರ್ ಸಂಘ ಕಾರ್ಮಿಕರ ಪರವಾಗಿ ಕಂಕಣ ಬದ್ದವಾಗಿ ನಿಂತು ಎಲ್ಲರ ಸಮಸ್ಯೆಗಳನ್ನು ಬಗೆಹರಿಸುವುದಕ್ಕೆ ಹೆಚ್ಚಿನ ಶ್ರಮವಹಿಸಿ ನೊಂದ ಎಲ್ಲಾ ಕಾರ್ಮಿಕರಿಗೆ ಅಂದಿನ ಸಾರಿಗೆ ಸಚಿವರಾದ ಶ್ರೀರಾಮುಲು ರವರಿಗೆ ವಿಷಯವನ್ನು
ತಿಳಿಸಿ, ಕಾರ್ಮಿಕ ಕಷ್ಟಗಳನ್ನು ವಿವರಿಸಿ, ಒಪ್ಪಿಸಿ ಎಲ್ಲಾ ನೌಕರರ ವರ್ಗಾವಣೆ ಆದೇಶ ಅಮಾನತ್ತು, ವಜಾ ಆದೇಶಗಳನ್ನು ರದ್ದುಪಡಿಸಿ ಸಣ್ಣ ಶಿಕ್ಷೆಯೊಂದಿಗೆ ಕಾರ್ಮಿಕರು ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸಲು ಸಂಘಟನೆಯು ಉತ್ತಮ ಕೆಲಸ ಮಾಡಿರುತ್ತದೆ.
ಮುಷ್ಕರ ಮಾಡಿಸಿದ ಸಂಘಟನೆ ನೌಕರರ ಹಿತ ಕಾಪಾಡುವಲ್ಲಿ ವಿಫಲವಾಗಿದೆ ಅದೇ ರೀತಿ ಇತರೆ ಸಂಘಟನೆಗಳು ಸಹ ಕೈ ಚೆಲ್ಲಿರುತ್ತಾರೆ,
ಆದರೆ ಮದ್ದೂರ್ ಸಂಘಟನೆ ಕಾರ್ಮಿಕರ ಹಿತವನ್ನು ಯಶಸ್ವಿಯಾಗಿ ಕಾಪಾಡಿರುತ್ತದೆ.

ಈ ಒಂದು ಕಾರ್ಯಕ್ರಮದಲ್ಲಿ ಬೆಳಗಾವಿ ಜಿಲ್ಲಾ ಕಾರ್ಯಕರ್ತರು ಹಾಗೂ ಕಾರ್ಮಿಕರು ಪಾಲ್ಗೊಂಡಿದ್ದರು

About The Author