ಮಾಹಿತಿ ಹಕ್ಕು ಅರ್ಜಿ ಹಾಕಿ ಮಾಹಿತಿ ಕೇಳಿದ್ದಕ್ಕೆ ಪತ್ರಕರ್ತನ ಮೇಲೆ ಹಲ್ಲೆ

WhatsApp Group Join Now

ಚಾಮರಾಜನಗರ: ಮೆಡಿಕಲ್ ಕಾಲೇಜು ಮತ್ತು ಭೋದನಾ ಆಸ್ಪತ್ರೆಗೆ ಸಂಬಂಧಿಸಿದಂತೆ ಹಲವಾರು ಮಾಹಿತಿಗಳನ್ನು ಮಾಹಿತಿ ಹಕ್ಕಿನಡಿ ಮಾಹಿತಿ ಕೋರಿದ್ದ ಪತ್ರಕರ್ತರೊಬ್ಬರ ಮೇಲೆ ಹಲ್ಲೆ ಹಾಗೂ ಕೊಲೆ ಬೆದರಿಕೆ ಹಾಕಿದ್ದಲ್ಲದೆ,
ಪತ್ರಕರ್ತನ ಮೇಲೆಯೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾಮರಾಜನಗರ
ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮೆಡಿಕಲ್‌ ಕಾಲೇಜು ಡೀನ್ ಸಹಿತ ಎಂಟು ಮಂದಿ ನೌಕರರ ಮೇಲೆ ಎಫ್ ಐ ಆರ್
ದಾಖಲಾಗಿದೆ.
ಚಾಮರಾಜನಗರ ಯಡಪುರ ಬಳಿ ಇರುವ ಮೆಡಿಕಲ್‌ ಕಾಲೇಜು ಮತ್ತು ಭೋದನಾ ಆಸ್ಪತ್ರೆಗೆ ಸಂಬಂಧಿಸಿದಂತೆ ಪತ್ರಕರ್ತ ಗೂಳೀಪುರದ ಮಣಿಕಂಠರವರು ಮಾಹಿತಿ
ಹಕ್ಕಿನಡಿ ಮಾಹಿತಿ ಕೋರಿದ್ದರು. ಮಾಹಿತಿ ನೀಡುವ ನೆಪದಲ್ಲಿ ಕಛೇರಿಗೆ ಕರೆಯಿಸಿಕೊಂಡ ಮೆಡಿಕಲ್ ಕಾಲೇಜಿನ ಡೀನ್ ಮಂಜುನಾಥ್‌ ಮತ್ತು ನೌಕರರು ಪತ್ರಕರ್ತ ಮಣಿಕಂಠನ
ಮೇಲೆ ಹಲ್ಲೆ ಮಾಡಿದ್ದಲ್ಲದೆ, ಮಾನಸಿಕ ಹಿಂಸೆ ನೀಡಿ ಕೊಲೆ ಬೆದರಿಕೆ ಹಾಕಿದ್ದರು. ಇದನ್ನು ಪ್ರಶ್ನೆ ಮಾಡಿದ್ದಕ್ಕೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮಹಿಳಾ ನೌಕರರಿಂದ ಕಂಪ್ಲೇಟ್
ಕೊಡಿಸಿ ಪ್ರಕರಣ ದಾಖಲಿಸಿದ್ದರು. ಇದರ ಬಗ್ಗೆ ಪತ್ರಕರ್ತ ಮಣಿಕಂಠ ಎಸ್ ಸಿ ಎಸ್ ಟಿ ದೌರ್ಜನ್ಯ ತಡೆ ಸಮಿತಿಯಲ್ಲಿ ಜಿಲ್ಲಾ ಪೊಲೀಸ್
ವರಿಷ್ಠಾಧಿಕಾರಿಗಳ ಮುಂದೆ ವಿವರಣೆ ನೀಡಿದಾಗ ಮತ್ತೊಮ್ಮೆ ದೂರು ನೀಡುವಂತೆ ಪತ್ರಕರ್ತ ಮಣಿಕಂಠರವರಿಗೆ ಸೂಚಿಸಲಾಗಿತ್ತು. ಅದರಂತೆ ಪತ್ರಕರ್ತ ಮಣಿಕಂಠ ದೂರು
ದಾಖಲು ಮಾಡಿದ ಹಿನ್ನಲೆಯಲ್ಲಿ ಹಿರಿಯ ಅಧಿಕಾರಿಗಳ ಕಛೇರಿಯಿಂದ ಬ೦ದ ದೂರಿನನ್ವಯ ಮೆಡಿಕಲ್ ಕಾಲೇಜು
ಡೀನ್ ಮಂಜುನಾಥ್‌ ಹೆಚ್.ಡಿ, ಆಡಳಿತ ಸಹಾಯಅಧಿಕಾರಿ ಶೈಲಜಾ, ಸಿಮ್ಸ್‌ ನ ನೌಕರರಾದ ಮಹೇಶ, ಶಿವರಾಜು,ಕಿರಣ್,
ಪ್ರಶಾಂತ, ಮಧು, ಅಜಯ್ ರವರ ಮೇಲೆ ಭಾರತೀಯ do o 143,341,323,342,504, 506, 148 ಕಲಂ ನಡಿ ಆಗಸ್ಟ್ 28 ರಂದು ಎಫ್ ಐ ಆರ್ ದಾಖಲಾಗಿ
ನ್ಯಾಯಾಲಯಕ್ಕೆ ಪ್ರಥಮ ಮಾಹಿತಿಯ ಪ್ರತಿಯನ್ನು ಕಳುಹಿಸಲಾಗಿದೆ.

.

About The Author