
WhatsApp Group
Join Now
ಧಾರವಾಡ ಜಿಲ್ಲೆಯ ಅಟಲ್ ಜೀ ಜನಸ್ನೇಹಿ ಕೇಂದ್ರ ಯೋಜನೆಯಡಿ ಕಾರ್ಯ ನಿರ್ವಹಿಸುತ್ತಿರುವ ನಾಡಕಚೇರಿಗಳಿಗೆ ಹೊರಗುತ್ತಿಗೆ ಆಧಾರದ ಮೇಲೆ ಡಾಟಾ ಎಂಟ್ರಿ ಆಪರೇಟರಗಳನ್ನು ಒಂದು ವರ್ಷದ ಅವಧಿಗೆ ಪೂರೈಸುವ ಕುರಿತು ನೋಂದಾಯಿತ ಮಾನವ ಸಂಪನ್ಮೂಲ ಏಜೆನ್ಸಿಗಳಿಂದ ಇ-ಪ್ರೋಕ್ಯೂರ್‍ಮೆಂಟ್ ಪೋರ್ಟಲ್ ಮೂಲಕ ಟೆಂಡರ್ ಅರ್ಜಿ ಆಹ್ವಾನಿಸಲಾಗಿದೆ.
ಅಟಲ್ ಜೀ ಜನಸ್ನೇಹಿ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುವ ಡಾಟಾ ಎಂಟ್ರಿ ಆಪರೇಟರ ಹುದ್ದೆಗಳಿಗಾಗಿ ಮಾನವ ಸಂಪನ್ಮೂಲ ಏಜೆನ್ಸಿ ಮೂಲಕ ಪೂರೈಸುವ ಅಭ್ಯರ್ಥಿಗಳು ಕಂಪ್ಯೂಟರ ನಿರ್ವಹಣೆ ಬಗ್ಗೆ ತಾಂತ್ರಿಕ ಜ್ಞಾನ ಮತ್ತು ಕನ್ನಡ, ಇಂಗ್ಲೀಷನಲ್ಲಿ ಟೈಪ್ ಮಾಡುವ ಹಾಗೂ ಕಂಪ್ಯೂಟರ ಸಂಬಂಧಿತ ಜ್ಞಾನವನ್ನು ಹೊಂದಿರಬೇಕು ಮತ್ತು 1 ವರ್ಷದ ಡಾಟಾ ಎಂಟ್ರಿ ಆಪರೇಟರ ಅನುಭವ ಹೊಂದಿರಬೇಕು.
ಆಸಕ್ತ ನೋಂದಾಯಿತ ಮಾನವ ಸಂಪನ್ಮೂಲ ಏಜೆನ್ಸಿಯವರು https://kppp.karnataka.gov.in ನಲ್ಲಿ ಹಾಗೂ ಜಿಲ್ಲಾಧಿಕಾರಿಗಳ ಕಚೇರಿಯ ಅಟಲ್‍ಜೀ ಜನಸ್ನೇಹಿ ಕೇಂದ್ರದ ಶಾಖೆಯಲ್ಲಿ ಮಾಹಿತಿ ಪಡೆಯಬಹುದು ಎಂದು ಅಪರ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

