ಧಾರವಾಡ ನಗರ ಕೇಂದ್ರ ಗ್ರಂಥಾಲಯವಿಜ್ಞಾನ ತರಬೇತಿ ಉದ್ಘಾಟನಾ ಸಮಾರಂಭ

WhatsApp Group Join Now

ಧಾರವಾಡ ನಗರ ಕೇಂದ್ರ ಗ್ರಂಥಾಲಯ ಸಭಾಗಂಣದಲ್ಲಿ 19 ನೇ ತಂಡದ ಗ್ರಂಥಾಲಯ ವಿಜ್ಞಾನ ತರಬೇತಿ ಕಾರ್ಯಕ್ರಮವನ್ನು ಮಹಾಪೌರ ರಾಮಪ್ಪ ಬಡಿಗೇರ ಅವರು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ತಮ್ಮ ಬಾಲ್ಯದಲ್ಲಿ ಗ್ರಂಥಾಲಯದ ಜೊತೆ ಹೆಚ್ಚು ಒಡನಾಟ ಹೊಂದ್ದಿದ್ದು, ಹಲವಾರು ಬಾರಿ ಗ್ರಂಥಾಲಯಕ್ಕೆ ಬೇಟಿ ನೀಡಿದ್ದೇನೆ, ಗ್ರಂಥಾಲಯಕ್ಕೆ ಎಲ್ಲಾ ಮೂಲಭೂತ ಸೌಲಭ್ಯ ಒಳಗೊಂಡ ಮಾದರಿಯ ಗ್ರಂಥಾಲಯವಾಗಿದ್ದು, ಪ್ರತಿ ಒಬ್ಬರು ಗ್ರಂಥಾಲಯದ ಸದುಪಯೋಗವನ್ನು ಪಡೆಯಬೇಕು. ಹಾಗೂ ಈ ಆಧುನಿಕ ಯುಗದಲ್ಲಿ ಗ್ರಂಥಾಲಯ ಶಿಕ್ಷಣ ಅವಶ್ಯಕ, ತರಬೇತಿಗೆ ಆಯ್ಕೆಯಾದ ಎಲ್ಲಾ ವಿದ್ಯಾರ್ಥಿಗಳು, ಉಪನ್ಯಾಸಕರು ಹೇಳುವ ಪಾಠವನ್ನು ಗಮನದಲ್ಲಿಟ್ಟುಕೊಂಡು ಗ್ರಂಥಾಲಯ ವಿಜ್ಞಾನ ಕುರಿತು ಜ್ಞಾನಾರ್ಜನೆ ಮಾಡಿಕೊಳ್ಳಬೇಕೆಂದು ಅವರು ಹೇಳಿದರು.

ಈ ಒಂದು ಸಂದರ್ಭದಲ್ಲಿ ನಗರ ಕೇಂದ್ರ ಗ್ರಂಥಾಲಯ ಉಪ ನಿರ್ದೇಶಕರಾದ ರಾಮಯ್ಯ, ತರಬೇತಿ ಕೇಂದ್ರ ಉಪನ್ಯಾಸಕ ಪ್ರೊ. ಎಸ್.ಎಲ್.ಸಂಗಮ, ಎಚ್.ಎಸ್.ಗಡ್ಡಿ, ಎಸ್.ವಿ.ಹಿರೇಮಠ, ಮಲ್ಲಿಕಾರ್ಜುನ ಮೂಲಿಮನಿ, ವೀಣಾ ಕುಲಕರ್ಣಿ, ನಗರ ಕೇಂದ್ರ ಗ್ರಂಥಾಲಯ ಸಿಬ್ಬಂದಿಗಳು ಹಾಗೂ ತರಬೇತಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

About The Author