ಅಕಮ ಗಾಂಜಾ ಮಾರಾಟ ಮಾಡುತ್ತಿದ್ದಇಬ್ಬರ ಬಂಧನ

WhatsApp Group Join Now

ಬಳ್ಳಾರಿ ಅಕ್ರಮವಾಗಿ ಗಾಂಜಾ
ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಹಾಗೂ 2 ಲಕ್ಷಮೌಲ್ಯದ ಗಾಂಜಾ ಸಹಿತ ನಗರದ ಕೌಲ್ ಬಜಾರ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಕೌಲ್ ಬಜಾರ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ನಲ್ಲ ಚೇರುವು ಪ್ರದೇಶದ ಭಟ್ಟಿ ಏರಿಯಾದ ಆಂಜನೇಯ
ಸ್ವಾಮಿ ದೇವಾಲಯ ರಸ್ತೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಒಡಿಶಾ ಮೂಲದ ಜಿಕಾರಿಯ ಮಾಜಿ ಮತ್ತು ಜಾನ್ ಅವರನ್ನು ವಶಕ್ಕೆ ಪಡೆದು ಅವರಿಂದ ರೂ 850 ಮತ್ತು 4310 ಗ್ರಾಂ ಅಂದಾಜು ಮೌಲ್ಯ 2 ಲಕ್ಷ ರೂಗಳ ಗಾಂಜಾವನ್ನು ವಶಪಡಿಸಿಕೊಂಡು ಕಾನೂನು ಕ್ರಮ ಕೈಗೊಂಡಿದ್ದಾರೆ.
ಬಳ್ಳಾರಿ ನಗರದ ಉಪ ವಿಭಾಗದ ಡಿ ಎಸ್ ಪಿ
ಚಂದ್ರಕಾಂತ್ ಅವರ ನೇತೃತ್ವದಲ್ಲಿ ನಡೆದ ದಾಳಿಯ ತಂಡದಲ್ಲಿ ಕೌಲ್ ಬಜಾರ್ ಪೊಲೀಸ್ ಠಾಣೆಯ ಎಕ್ಸ್ಪೆಕ್ಟರ್ ಟಿ ಸುಭಾಷ್
ಚಂದ್ರ , ಪಿಎಸ್‌ಐ ಲಾರೆನ್ಸ್ , ಎ ಎಸ್ ಐ ಕೆ ಮಂಜುನಾಥ್,ಸಿಬ್ಬಂದಿಗಳಾದ ನಾಗರಾಜ್ , ಕೆ.ಸೋಮಪ್ಪ ,ಸರ್ದಾರ್,ಸಂತೋಷ್ ಕುಮಾರ್, ಮತ್ತಿತರರು ಇದ್ದರು.

About The Author