ಅಕ್ರಮವಾಗಿ ಸಂಗ್ರಹಿಸಿಟ್ಟ 88.576 ರೂ ಕಿಮ್ಮತ್ತಿನ ಪಡಿತರ ಅಕ್ಕಿ ಗೋಡಾಮಿನ ಮೇಲೆ ಅಧಿಕಾರಿಗಳ ದಿಡೀರ ದಾಳಿ

WhatsApp Group Join Now

ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿಯ ಶ್ರೀ ರಾಘವೇಂದ್ರ ದೇವಸ್ಥಾನ ಹತ್ತಿರ ಇರುವ ರಾಘವೇಂದ್ರ ಗಂಗಪ್ಪ ತೇಲಿ ಅವರ ಮನೆಯ ಮೇಲೆ ಆಹಾರ ಇಲಾಖೆ ಹಾಗೂ ಪೊಲೀಸ್ ಇಲಾಖೆ
ಅಧಿಕಾರಿಗಳು. ದಿಡೀರನೆ ದಾಳಿ ನಡೆಸಿ ಅಕ್ರಮವಾಗಿ ಕೂಡಿಟ್ಟ 88.576/-ರೂ ಕಿಮ್ಮತ್ತಿನ 2560 ಕೆ. ಜಿಯ 52 ಪ್ಲಾಸ್ಟಿಕ್ ಚೀಲ ತುಂಬಿರುವ ಪಡಿತರ ಅಕ್ಕಿಯನ್ನು ವಶಪಡಿಸಿಕೊಂಡು ನಾಲ್ಕು ಜನರ ಮೇಲೆ ಎಫ್ ಐ ಆರ್ ದಾಖಲಿಸಿಕೊಂಡಿದ್ದಾರೆ.
ಎ 1)ರಾಘವೇಂದ್ರ ಗಂಗಪ್ಪ ತೇಲಿ
ಎ 2)ಮನ್ಸೂರ ಅಲ್ಲವುದಿನ ಸೈಯದ್.
ಎ 3)ಮಲ್ಲಪ್ಪ ವೆಂಕಪ್ಪ ಅಥಣಿ.
ಎ 4)ಸವಿತಾ ಗಂಡ ರಾಘವೇಂದ್ರ ತೇಲಿ.
ಆರೋಪಿಗಳಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.

ಸುಮಾರು ವರ್ಷಗಳಿಂದ ಇದು ನಡಿತಾನೆ ಬಂದರು ಕೂಡ ಇಲ್ಲಿ ಅಧಿಕಾರಿಗಳು ಮಾತ್ರ ಮೂಕ ಪ್ರೇಕ್ಷಕರಂತೆ ಇದ್ದಾರೆ
ಇಲ್ಲಿ ಇನ್ನೂ ಸುಮಾರು ಜನರು ಇದನ್ನೇ ಕಸುಬು ಮಾಡಿಕೊಂಡು ಇನ್ನೂ ಕೆಲವೊಂದಿಷ್ಟು ದೊಡ್ಡ್ ದೊಡ್ದ್ ಕುಳಗಳು ಇದರಲ್ಲಿ ಇದ್ದಾರೆ

ಈ ಎ 1 ಆರೋಪಿಯಾದ ರಾಘವೇಂದ್ರ ಗಂಗಪ್ಪ ತೇಲಿ ಈತನ ಮೇಲೆ ಈ ರೀತಿ ಸಾಕಷ್ಟು ಕೇಸ್ ದಾಖಲಾಗಿರುವುದು ಕಂಡು ಬಂದಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.

About The Author