
ಧಾರವಾಡ ನಗರದ ಮಿನಿವಿಧಾನಸೌಧ ಬಳಿ ಇರುವ ಇಂದಿರಾ ಕ್ಯಾಂಟೀನ್‍ದಲ್ಲಿ ಇಂದಿರಾ ಕ್ಯಾಂಟೀನ್ ಹೊಸ ದರ ಪಟ್ಟಿ ಮತ್ತು ವಿವಿಧ ಆಹಾರಗಳ ಪೂರೈಕೆಗೆ ಕಾರ್ಮಿಕ ಇಲಾಖೆ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಚಾಲನೆ ನೀಡಿ, ಮಾತನಾಡಿದರು.
ಕರ್ನಾಟಕ ರಾಜ್ಯ ಸರಕಾರವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಾಯಕತ್ವದಲ್ಲಿ ಬಡವರಿಗೆ, ಕಾರ್ಮಿಕರಿಗೆ, ಹಿಂದುಳಿದವರಿಗೆ ಹಾಗೂ ಎಲ್ಲ ಸಾರ್ವಜನಿಕರಿಗೆ ಇಂದಿರಾ ಕ್ಯಾಂಟೀನ್ ಮೂಲಕ ಕೇವಲ ಐದು ರೂಪಾಯಿಗೆ ಊಟ, ಉಪಹಾರ ನೀಡುತ್ತಿರುವುದು ರಾಷ್ಟ್ರಕ್ಕೆ ಮಾದರಿಯಾಗಿದೆ
ಇಂದಿರಾ ಕ್ಯಾಂಟೀನ್ ಅನ್ನುವುದು, ರಾಜ್ಯ ಸರಕಾರದ ಮಹತ್ವದ ಕೊಡುಗೆಯಾಗಿದೆ. ಜಿಲ್ಲೆಯ ಅವಳಿ ನಗರದಲ್ಲಿ 9 ಇಂದಿರಾ ಕ್ಯಾಂಟೀನ್‍ಗಳು ಕಾರ್ಯನಿರ್ವಹಿಸುತ್ತಿವೆ. ಪ್ರತಿ ಇಂದಿರಾ ಕ್ಯಾಂಟೀನ್‍ದಿಂದ ಪ್ರತಿದಿನ 500 ಜನರಿಗೆ ಊಟ ಪೂರೈಸುವ ಗುತ್ತಿಗೆ ನೀಡಲಾಗಿದೆ. ಅದರಂತೆ ಇಂದಿರಾ ಕ್ಯಾಂಟೀನ್‍ಗಳು ಕಾರ್ಯ ನಿರ್ವಹಿಸುತ್ತಿವೆ ಎಂದು ಅವರು ಹೇಳಿದರು.

ಇಂದಿರಾ ಕ್ಯಾಂಟೀನ್ ರುಚಿ ಸವಿದ ಸಚಿವ, ಡಿಸಿ: ಸಚಿವ ಸಂತೋಷ ಲಾಡ್ ಅವರು ಇಂದು ಧಾರವಾಡ ನಗರದಲ್ಲಿ ಇಂದಿರಾ ಕ್ಯಾಂಟೀನ್‍ದಲ್ಲಿ ಹೊಸ ದರದ ಪಟ್ಟಿ ಬಿಡುಗಡೆ ಮಾಡಿ, ವಿವಿಧ ಪ್ರಕಾರದ ಉಪಹಾರ ಸೆವಿಸಿದರು.
ಕ್ಯಾಂಟೀನ್‍ದಲ್ಲಿ ಸಚಿವ ಸಂತೋಷ ಲಾಡ್ ಹಾಗೂ ಡಿಸಿ ದಿವ್ಯ ಪ್ರಭು ಅವರು ಐದು ರೂ. ಹಣ ಕೊಟ್ಟು ಟೋಕನ್ ಖರೀದಿಸಿದರು. ನಂತರ ಸಚಿವರು ಜೋಳದ ರೊಟ್ಟಿ ಊಟ ಸವಿದರು. ಡಿಸಿ ದಿವ್ಯ ಪ್ರಭು ಅವರು ಇಡ್ಲಿ, ಅವಲಕ್ಕಿ ಮತ್ತು ಶ್ಯಾವಿಗೆ ಸಿಹಿ ಸವಿದರು.
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ 9 ಇಂದಿರಾ ಕ್ಯಾಂಟೀನ್‍ಗಳಿಗೆ ಎರಡು ಪ್ಯಾಕೇಜ್‍ಗಳ ಮೂಲಕ ಆಹಾರ ಸರಬರಾಜು ಮಾಡಲಾಗುತ್ತದೆ.
ಪ್ಯಾಕೇಜ್ 1 ರಲ್ಲಿ ಹುಬ್ಬಳ್ಳಿಯ ಕಿಮ್ಸ್ ಆವರಣ, ಹೊಸ ಬಸ್ ನಿಲ್ದಾಣ, ಎಸ್.ಎಮ್.ಕೃಷ್ಣ ನಗರ, ನ್ಯೂ ಇಂಗ್ಲೀಷ ಶಾಲೆ, ಸೋನಿಯಾ ಗಾಂಧಿ ನಗರದಲ್ಲಿ ಇಂದಿರಾ ಕ್ಯಾಂಟೀನ್‍ಗಳಿಗೆ ಪ್ರತಿದಿನ ಪ್ರತಿ ಕ್ಯಾಂಟೀನ್‍ದಲ್ಲಿ ಬೆಳಗಿನ ಉಪಹಾರ 500, ಮಧ್ಯಾಹ್ನದ ಊಟ 500, ರಾತ್ರಿ ಊಟ 500 ಸೇರಿ ಒಟ್ಟು 1500 ಜನರಿಗೆ ಊಟ, ಉಪಹಾರ ಪೂರೈಸಲಾಗುತ್ತಿದೆ.
ಒಟ್ಟಾರೆ ಒಂದು ವರ್ಷಕ್ಕೆ ಬೆಳಗಿನ ಉಪಹಾರ-912500, ಮಧ್ಯಾಹ್ನದ ಊಟ-912500, ರಾತ್ರಿ ಊಟ-912500, ಒಟ್ಟು 2737500 ಜನರಿಗೆ ಆಹಾರ ಪೂರೈಸಲಾಗುತ್ತಿದೆ.
ಪ್ರತಿ ಒಬ್ಬ ಫಲಾನುಭವಿಗಳಿಗೆ ಬೆಳಿಗಿನ ಉಪಹಾರಕ್ಕೆ ನೀಡುವ ರೂ 5, ಮಧ್ಯಾಹ್ನ ಊಟ ರೂ 10, ರಾತ್ರಿ ಊಟ ರೂ.10 ಒಟ್ಟು 25 ಆಗುತ್ತದೆ.
ಪ್ಯಾಕೇಜ್ 2 ರಲ್ಲಿ ಧಾರವಾಡದ ಹೊಸ ಬಸ್ ನಿಲ್ದಾಣ, ಮಿನಿ ವಿಧಾನಸೌಧ, ಹುಬ್ಬಳ್ಳಿಯ ಉಣಕಲ್, ಬೆಂಗೇರಿ ಸಂತೆ ಮೈದಾನದಲ್ಲಿ ಇಂದಿರಾ ಕ್ಯಾಂಟೀನ್‍ಗಳಿಗೆ ಪ್ರತಿದಿನ ಬೆಳಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ನೀಡಲಾಗುತ್ತಿದೆ.
ಪ್ರತಿ ಒಬ್ಬ ಫಲಾನುಭವಿಗಳಿಗೆ ಬೆಳಿಗಿನ ಉಪಹಾರಕ್ಕೆ ನೀಡುವ ರೂ 5, ಮಧ್ಯಾಹ್ನ ಊಟ ರೂ 10, ರಾತ್ರಿ ಊಟ ರೂ.10 ಒಟ್ಟು 25 ಆಗುತ್ತದೆ. ಅಂದಾಜು ದರ ಪಟ್ಟಿಯ ಪ್ರಕಾರ ಉಪಹಾರಕ್ಕೆ ನೀಡುವ ರೂ 12.4, ಮಧ್ಯಾಹ್ನ ಊಟ ರೂ 24.8, ರಾತ್ರಿ ಊಟ ರೂ. 24.8 ಒಟ್ಟು ರೂ.62 ಆಗುತ್ತದೆ.
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ 9 ಇಂದಿರಾ ಕ್ಯಾಂಟೀನ್‍ನಲ್ಲಿ ವಾರದ ಏಳು ದಿನಗಳಲ್ಲಿ ಬೆಳಗಿನ ಉಪಹಾರವು ಬೆಳಿಗ್ಗೆ 7.30 ರಿಂದ 10 ಗಂಟೆಯವರಿಗೆ, ಮಧ್ಯಾಹ್ನ ಊಟ ಮಧ್ಯಾಹ್ನ 12.30 ರಿಂದ 3 ಗಂಟೆಯವರೆಗೆ ಹಾಗೂ ರಾತ್ರಿ ಊಟ ಸಂಜೆ 6 ರಿಂದ 8 ರವರೆಗೆ ಆಹಾರದ ಒದಗಿಸಲಾಗುತ್ತದೆ.
ಈ ಸಂದರ್ಭದಲ್ಲಿ ನವಲಗುಂದ ಶಾಸಕ ಎನ್.ಎಚ್.ಕೋನರಡ್ಡಿ, ಧಾರವಾಡ ಜಿಲ್ಲಾಧಿಕಾರಿ ದಿವ್ಯ ಪ್ರಭು,ಮಹಾನಗರ ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ, ಜಿಲ್ಲಾ ನಗರ ಅಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಅಜೀಜ ದೇಸಾಯಿ,ಪಾಲಿಕೆ ಸದಸ್ಯ ಮಯೂರ ಮೋರೆ, ಸೇರಿದಂತೆ ಅನೇಕ ಅಧಿಕಾರಿಗಳು ಪಾಲ್ಗೊಂಡಿದ್ದರು


