
ಜಿಲ್ಲೆಯಲ್ಲಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಮಾನವ ಸರಪಳಿ ಕಾರ್ಯಕ್ರಮವು ಸೆ.15ರಂದು ಅಚ್ಚುಕಟ್ಟಾಗಿ ನಡೆಯಬೇಕು. ಯಾವುದೇ ಲೋಪಕ್ಕೆ ಅವಕಾಶವಾಗದಂತೆ ಅಧಿಕಾರಿಗಳು ಜಾಗೃತೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿಗಳಾದ ಮೊಹಮ್ಮದ್ ರೋಷನ್ ಅವರು ಹೇಳಿದರು.
ಪಟ್ಟಣದಲ್ಲಿ ಪೂರ್ವ ಸಿದ್ಧತೆ ಮಾರ್ಗ ಪರಿಶೀಲನೆ ನಡೆಸಿದರು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಮಾನವ ಸರಪಳಿ ಮಾರ್ಗ ಪರಿಶೀಲಿಸಿದ ಐಎಎಸ್ ಅಧಿಕಾರಿ ದಿನೇಶಕುಮಾರ ಮೀನಾ ಮಾತನಾಡಿ ಬೆಳಗಾವಿ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಸೆ.15ರಂದು ಬೆಳಿಗ್ಗೆ 9.30ರಿಂದ 10.30ರವರೆಗೆ 135 ಕಿ.ಮೀ ಉದ್ದದ ಮಾನವ ಸರಪಳಿ ನಿರ್ಮಿಸಲಾಗುವುದು.
ಜಿಲ್ಲೆಯ ರಾಮದುರ್ಗ ತಾಲೂಕಿನ ಸಾಲಹಳ್ಳಿ ಗ್ರಾಮದಿಂದ ಚೆನ್ನಮ್ಮನ ಕಿತ್ತೂರು ವರೆಗೆ ಅಂದಾಜು 1.25 ಲಕ್ಷ ಜನ ಇದರಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಜಿಲ್ಲೆಯ ಜನ ಕಾರ್ಯಕ್ರಮ ಯಶಸ್ವಿಗೊಳಿಸಲು ಕೈ ಜೋಡಿಸಬೇಕು’ ಎಂದು ಐಎಎಸ್ ಅಧಿಕಾರಿ ತಿಳಿಸಿದರು.
ಕಾರ್ಯಕ್ರಮಕ್ಕೆ ಆಗಮಿಸುವ ಮಕ್ಕಳಿಗಾಗಿ 100 ಮೀಟರ್ ಗೆ ನೀರಿನ ವ್ಯವಸ್ಥೆ, ಹಾಲು ಉಪಹಾರದ ವ್ಯವಸ್ಥೆ ಮಾಡಲಾಗಿದೆ ವಿದ್ಯಾರ್ಥಿಗಳನ್ನು ಕರೆತರಲು ವಾಹನಗಳನ್ನು ಕಲ್ಪಿಸಲಾಗಿದೆ ಕಾರ್ಯಕ್ರಮ ಯಶಸ್ವಿಗೆ ಸಾರ್ವಜನಿಕರು ಜನಪ್ರತಿನಿಧಿಗಳು ಸಹಕರಿಸಬೇಕು ಎಂದು ಹೇಳಿದರು.
ಈ ವೇಳೆ ಬೆಳಗಾವಿ ಎಸ್ಪಿ ಡಾ. ಭೀಮಾಶಂಕರ ಗುಳೆದ, ಜಿಲ್ಲಾ ಪಂಚಾಯತ್ ಸಿಇಒ ರಾಹುಲ್ ಶಿಂಧೆ, ಸವದತ್ತಿ ತಹಶೀಲ್ದಾರ ಮಲ್ಲಿಕಾರ್ಜುನ ಹೆಗಣ್ಣವರ, ಯರಗಟ್ಟಿ ತಹಶೀಲ್ದಾರ ಎಮ್. ಎನ್. ಮಠದ, ಸಿಪಿಐ ಆಯ್. ಎಂ. ಮಠಪತಿ, ತಾ. ಪಂ. ಇಓ ಆನಂದ ಬಡಕುಂದ್ರಿ, ಬಿಇಓ ಮೋಹನ ದಂಡಿನ, ಸಿಡಿಪಿಓ ಶ್ರೀಮತಿ ಸುನೀತಾ ಪಾಟೀಲ, ಡಿಎಸ್ಪಿ ಚಿದಂಬರ ವಿ. ಎಂ., ಅಬಕಾರಿ ಸಿಪಿಐ ಶ್ರೀಶೈಲ ಅಕ್ಕಿ, ಪ. ಪಂ. ಮುಖ್ಯಾಧಿಕಾರಿ ಡಿ. ಎನ್. ತಹಶೀಲ್ದಾರ, ಸಮಾಜ ಕಲ್ಯಾಣ ಅಧಿಕಾರಿ ಆರ್. ಆರ್. ಕುಲಕರ್ಣಿ, ಪಶುವೈದ್ಯಾಧಿಕಾರಿ ಎಮ್. ವಿ. ಪಾಟೀಲ ಸೇರಿದಂತೆ ತಾಲೂಕಾ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.


