ವಿರಾಟ ವಿಶ್ವಕರ್ಮರ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು.

WhatsApp Group Join Now

ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಪುರಸಭೆಯ ಸಾಂಸ್ಕೃತಿಕ ಸಭಾ ಭವನದಲ್ಲಿ ಹಮ್ಮಿಕೊಂಡ ವಿರಾಟ ವಿಶ್ವಕರ್ಮರ ಜಯಂತ್ಯೋತ್ಸವ ಕಾರ್ಯಕ್ರಮದ ಸಾನಿಧ್ಯವನ್ನು ತೊಂಡಿಕಟ್ಟಿ ಅವಧೂತ ಗಾಳೇಶ್ವರ ಮಠದ ಅಭಿನವ ವೆಂಕಟೇಶ್ವರ ಮಹಾರಾಜರು ವಹಿಸಿ ಮಾತನಾಡಿದ ಅವರು, ವಿಶ್ವಕರ್ಮರು ಗ್ರಾಮ ದೇವಿಯ ಆರಾಧಕರು. ಆದ್ದರಿಂದ ತಾವುಗಳು ಎಲ್ಲರೂ ಒಳ್ಳೆಯ ಮಾರ್ಗದಿಂದ ಸಾಗಬೇಕು. ಅಂದಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ ಎಂದರು.
ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ ಮಾತನಾಡಿ, ಸಮಾಜದ ಜನರು ಒಗ್ಗಟ್ಟಾಗಿ ಸಾಗಬೇಕು. ವಿಶ್ವಕರ್ಮರೆ ಮೊದಲ ಇಂಜೀನಿಯರ್. ಇವರು ಸಮಾಜಕ್ಕೆ ಅಪಾರವಾದ ಕೊಡುಗೆ ನೀಡುವದರ ಜೊತೆಗೆ ಹಲವಾರು ರಂಗಗಳಲ್ಲಿ ತಮ್ಮದೆ ಆದ ಕೊಡುಗೆಗಳನ್ನು ನೀಡಿದ್ದಾರೆ. ದೇವ ಶಿಲ್ಪಿ ವಿಶ್ವಕರ್ಮರ ತತ್ವಾ ಆದರ್ಶಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಅವರಂತೆ ಎಲ್ಲರೂ ನಿವಾಗಬೇಕು ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಎಇಇ ಶ್ರೀನಿವಾಸ ವಿಶ್ವಕರ್ಮ ಮಾತನಾಡಿ, ವಿಶ್ವಕರ್ಮ ಜನಾಂಗದವರು ಪಂಚ ಕಸಬುಗಳನ್ನು ನಿತ್ಯ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸ್ವಾವಲಂಬಿ ಜೀವನ ಸಾಗಿಸುತ್ತಿರುವರು. ವಿಶ್ವಕರ್ಮ ಜನಾಂಗದವರು ಅಧುನಿಕತೆ ಬದಲಾದಂತೆ ನಾವೆಲ್ಲರೂ ಬದಲಾಗಿ ಪಂಚ ಕಸಬುಗಳ ನಮ್ಮ ಮೂಲ ವೃತ್ತಿಗಳನ್ನು ಬೆಳಸಬೇಕು. ಹಿರಿಯರು ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಿ ಅವರನ್ನು ಮುಖ್ಯ ವಾಹಿನಿಗೆ ತಗರಬೇಕು ಎಂದು ಹೇಳಿದರು.
ಡಾ. ಭಾರತಿ ಲೋಹಾರ ಉಪನ್ಯಾಸ ನೀಡಿದರು. ಮಳೆರಾಜ ಮಠದ ಶ್ರೀ ವೈಭವ ಮಹಾಸ್ವಾಮಿಗಳು, ಮುರನಾಳ ಮಠದ ಗುರುನಾಥ ಸ್ವಾಮಿಗಳು, ಗುರುನಾಥ ಶಾಸ್ತಿçಗಳು ಎಲ್ಲರೂ ಒಳ್ಳೆಯ ಮಾರ್ಗದಲ್ಲಿ ಸಾಗಬೇಕು. ಸಮಾಜವನ್ನು ಬೆಳಸಬೇಕು ಎಂದು ಆರ್ಶಿವಚನ ನೀಡಿದರು.
ಈ ಸಂದರ್ಭದಲ್ಲಿ ಡಿವೈಎಸ್‌ಪಿ ಚಿದಂಬರ ಮಡಿವಾಳರ, ಪುರಸಭೆಯ ಸದಸ್ಯ ಪ್ರಲ್ಲಾದ ಬಡಿಗೇರ, ಸಮಾಜದ ಅಧ್ಯಕ್ಷ ರಮೇಶ ಕಂಬಾರ, ವಿ.ಡಿ ಕಂಬಾರ, ಗೀತಾ ಪತ್ತಾರ, ಮೌನೇಶ ಕಂಬಾರ, ರಾಜು ಬಡಿಗೇರ, ಶ್ರೀಧರ ಪತ್ತಾರ, ಸಂತೋಷ ಬಡಿಗೇರ, ಹನಮಂತ ಬಡಿಗೇರ, ಉಮೇಶ ಪತ್ತಾರ, ಕೃಷ್ಣಾ ಬಡಿಗೇರ, ಮೌನೇಶ ಬಡಿಗೇರ, ಮಾರುತಿ ಬಡಿಗೇರ, ಮುತ್ತು ಕಮ್ಮಾರ ಸೇರಿದಂತೆ ಸಮಾಜದ ಮುಖಂಡರು ಉಪಸ್ಥಿತರಿದ್ದರು.

About The Author