ಸವದತ್ತಿ ತಾಲೂಕಿನ ಲಿಂಗಾಯತ ಪಂಚಮಶಾಲಿ ವಕೀಲರು ಷರಿಷತ್ತಿನ ಪೂರ್ವಭಾವಿ ಸಭೆ

WhatsApp Group Join Now

ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ
ಲಿಂಗಾಯತ ಪಂಚಮಶಾಲಿ ವಕೀಲರು ಷರಿಷತ್ತಿನ ಅಧ್ಯಕ್ಷರಾದ ಎಮ್ ಬಿ ದ್ಯಾಮನಗೌಡರ ಇವರ ನಿವಾಸದಲ್ಲಿ ದಿನಾಂಕ : 22-09-2024 ರಂದು ಭಾನುವಾರ ಬೆಳ್ಳಗ್ಗೆ ಬೆಳಗಾವಿ ಗಾಂಧಿಭವನದಲ್ಲಿ ಪಂಚಮಶಾಲಿ ಮಲೆಗೌಡ ಅಂಗಾಯತ ಗೌಡ ದಿಕ್ಷಾ ಅಂಗಾಯತರ ಮಕ್ಕಳ ಶಿಕ್ಷಣ ಹಾಗೂ ವಿದ್ಯಾರ್ಥಿಗಳ ಉದ್ಯೋಗಕ್ಕಾಗಿ 2ಎ ಮೀಸಲಾತಿ ಸೇರುವ ಹಾಗೂ
ಲಿಂಗಾಯತ ಉಪಸಮಾಜಗಳಿಗೆ ಓ.ಬಿ.ಸಿ ಮೀಸಲಾತಿಗಾಗಿ ಹಕ್ಕೊತ್ತಾಯಿಸಿ
ಆರಂಭಗೊಂಡಿರುವ 7 ನೇ ಹಂತದ ಭಾಗ 2 ರ ಸರ್ಕಾರದ ನಿರ್ಲಕ್ಷ್ಯ ಖಂಡಿಸಿ ಹಾಗೂ
ಕಾನೂನಾತ್ಮಕವಾಗಿ ಹೋರಾಡಲು ಪೂರ್ವ ಭಾವಿ ಸಭೆಯನ್ನು ನಡೆಸಲಾಯಿತು.
ಈ ಪೂರ್ವಭಾವಿ ಸಭೆಯ ದಿವ್ಯಸಾನಿಧ್ಯವನ್ನು ಲಿಂಗಾಯತ ಪಂಚಮಶಾಲಿಯ ಪ್ರಥಮ
ಜಗದ್ಗುರುಗಳಾದ ಶ್ರೀ ಬಸವಜಯಮೃತ್ಯುಂಜಯ ಸ್ವಾಮೀಜಿ ವಹಿಸಿದ್ದರು. ಅಧ್ಯಕ್ಷತೆಯನ್ನು
ಹಿರಿಯ ನ್ಯಾಯಾವಾದಿಗಳಾದ ಬಿ ವಿ ಮಲಗೌಡರ ವಹಿಸಿದ್ದರು. ಮುಖ್ಯ ಅಥಿತಿಗಳಾಗಿ ಸವದತ್ತಿ ಯಲ್ಲಮ್ಮ ಪುರಸಭೆಯ ನೂತನ ಅಧ್ಯಕ್ಷರಾದ ಶ್ರೀಮತಿ ಚಿನ್ನಮ್ಮ ಹುಚ್ಚನ್ನವರ ವಹಿಸಿದ್ದರು ಅಥಿತಿಗಳಾಗಿ ಪಂಚಮಶಾಲಿ ಮುಖಂಡರಾದ ಬಸವರಾಜ ಕಾರದಗಿ ಮತ್ತು ಬಸವರಾಜ ಮುಟ್ಟಿ ಲಿಂಗಾಯತ ಪಂಚಮಶಾಲಿಯ ವಕೀಲರ ಪರಿಷತ್ತಿನ ಅಧ್ಯಕ್ಷರಾದ ಎಮ್
ಬಿ ದ್ಯಾಮನಗೌಡರ ವಹಿಸಿದ್ದರು. ಹಾಗೂ ಕಾರ್ಯಕ್ರಮಕ್ಕೆ ಸವದತ್ತಿ ತಾಲೂಕಿನ ಲಿಂಗಾಯತ ಪಂಚಮಶಾಲಿ ವಕೀಲರು ಷರಿಷತ್ತಿನ ಸದ್ಯಸರು ಆಗಮಿಸಿದ್ದರು.
ದಿವ್ಯಸಾನಿಧ್ಯವನ್ನು ವಹಿಸಿದ ಪ್ರಥಮ ಜಗದ್ಗುರುಗಳಾದ ಶ್ರೀ ಬಸವಜಯಮೃತ್ಯುಂಜಯ
ಸ್ವಾಮೀಜಿ ಮಾತನಾಡಿ ಕೊಡಲಸಂಗಮ ಪೀಠ ಸ್ಥಾಪನೆಯಾದಾಗಿನಿಂದ ಇಲ್ಲಿಯವರಿಗೂ
ಸಮಾಜದವರಿಗೆ 2ಎ ಮೀಸಲಾತಿ ಹಾಗೂ ಓ.ಬಿ.ಸಿ ಮೀಸಲಾತಿ ಪಡೆಯುವ ಸಲುವಾಗಿ
ನಿರಂತರ ಹೋರಾಟವನ್ನು ಸರಕಾರದ ವಿರುದ್ಧ ಮಾಡುತ್ತಾ ಬಂದಿರುದ್ಧ ಎಂದು ಹೇಳಿದರು
ಕೊನೆಯ ಹಂತವಾಗಿ ಸರಕಾರ ನಿರ್ಲಕ್ಷ್ಯ ಖಂಡಿತ್ತು ಕಾನೂನಾತ್ಮಕವಾಗಿ ನಮ್ಮ ಹಕ್ಕನ್ನು
ಪಡೆಯುವುದಕ್ಕಾಗಿ ರಾಜ್ಯ ಅಂಗಾಯತ ಪಂಚಮಶಾಲಿ ವಕೀಲರ ಮಹಾ ಪರಿಷತ್ತನ್ನು
ಸ್ಥಾಪಿಸಿ ಬೆಳಗಾವಿಯ ಗಾಂಧಿ ಭವನದಲ್ಲಿ ಸೆಪ್ಟೆಂಬರ 22 ರಂದು ಹೋರಾಟ ಮಾಡುವ
ಕುರಿತು ಎಂದು ಹೇಳಿದರು.
ಸವದತ್ತಿ ಯಲ್ಲಮ್ಮ ಪುರಸಭೆಯ ನೂತನ ಅಧ್ಯಕ್ಷರಾದ ಪಂಚಮಶಾಲಿ ಸಮಾಜದ ಶ್ರೀಮತಿ ಚಿನ್ನಮ್ಮ ಹುಚ್ಚನ್ನವರ ಇವರನ್ನು ಜಗದ್ಗುರುಗಳಾದ ಶ್ರೀ ಬಸವಜಯಮೃತ್ಯುಂಜಯ
ಸ್ವಾಮೀಜಿ ಮತ್ತು ವಕೀಲರು ಭಾಗವಹಿಸಿ ಸನ್ಮಾನಿಸಿದರು.. ಹಾಗೂ ಸವದತ್ತಿ ತಾಲೂಕಿನ ಲಿಂಗಾಯತ ಪಂಚಮಶಾಲಿ ವಕೀಲರು ಷರಿಷತ್ತಿನ ಅಧ್ಯಕ್ಷರಾದ ಎಮ್ ಬಿ ದ್ಯಾಮನಗೌಡರ ಇವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮ ನಿರೂಪಣೆಯನ್ನು ಬಿ ಕೆ ಕಡಕೋಳ ವಕೀಲರು ನಿರೂಪಿಸಿದರು.
ವಂದನಾರ್ಪನೆಯನ್ನು ಎಮ್ ಬಿ ದ್ಯಾಮನಗೌಡರ ವಕೀಲರು ಸಲ್ಲಿಸಿದರು.

About The Author