
ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಲಯನ್ಸ್ ಸಂಸ್ಥೆಯ ಹಾಗೂ ಹುಬ್ಬಳ್ಳಿಯ ಡಾ| ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆ, ಸಾರ್ವಜನಿಕ ಆಸ್ಪತ್ರೆ ಮತ್ತು ಬೆಳಗಾವಿ ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ ಇವುಗಳ ಸಹಯೋಗದಲ್ಲಿ ಉಚಿತ ನೇತ್ರ ತಪಾಸಣೆ ಮತ್ತು ಶಸ್ತ್ರಚಿಕಿತ್ಸೆ ಶಿಬಿರ ಪಟ್ಟಣದ ಪಿ.ಎಂ. ಪಾಲರೇಶಾ ಲಯನ್ಸ್ ಕಣ್ಣಿನ ಆಸ್ಪತ್ರೆಯಲ್ಲಿ ಜರುಗಿತು.
ಡಾ| ಎಂ.ಎಂ. ಜೋಶಿ ಆಸ್ಪತ್ರೆಯ ಶಿಬಿರ ಸಂಯೋಜಕ ವಾದಿರಾಜ ಕಟ್ಟಿ ಅವರು ಮಾತನಾಡಿ, ಲಯನ್ಸ್ ಸಂಸ್ಥೆಯ ಸೇವಾ ಕಾರ್ಯಗಳು ಬಡವರಿಗೆ ಬಹಳ ಸಹಾಯಕಾರಿ ಯಾಗಿದ್ದು ಎಲ್ಲರೂ ಅದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕರೆ ಕೊಟ್ಟರು.
ಡಾ| ಎಂ.ಎಂ. ಜೋಶಿ ಆಸ್ಪತ್ರೆಯ ನೇತ್ರ ತಜ್ಞೆ ಡಾ| ದಾನೇಶ್ವರಿ ಅವರು ಶಿಬಿರ ಉದ್ಘಾಟಿಸಿ ಕಣ್ಣಿನ ಸಂರಕ್ಷಣೆಯ ಬಗ್ಗೆ ಮಾಹಿತಿ ನೀಡಿದರು. ಟ್ರಸ್ಟ್ ಅಧ್ಯಕ್ಷ ಬಾಬಣ್ಣ ಪತ್ತೆಪೂರ ಮಾತನಾಡಿದರು.
ಕಾರ್ಯದರ್ಶಿ ಸುನಿಲ್ ಹೊಂಗಲ, ಖಜಾಂಚಿ ಬಿ.ಪಿ. ಅರಳಿಮಟ್ಟಿ, ಸರಕಾರಿ ಆಸ್ಪತ್ರೆಯ ಶಂಕರ ಲಕಾಟ್ಟಿ, ಯಶೋಧ ತೋರಣಗಟ್ಟಿ, ಡಾ| ಸಿ.ಜಿ. ಅಗಡಿ, ಅಪ್ಪು ದಿಂಡವಾರ, ಎಂ.ಎಸ್. ಕೊಟ್ರನ್ನವರ, ಬಿ.ಎಲ್. ಸಂಕನಗೌಡರ, ಬಿ.ಎಸ್. ಗದಗ, ಗಂಗಾಧರ್ ಕಂಬಾರ, ವೈ.ಬಿ.ಕಕರಡ್ಡಿ, ವಿ.ವಿ. ಕೊಂಡಾ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ಲಯನ್ಸ್ ಅಧ್ಯಕ್ಷ ಪಿ.ವಿ. ಕಂಬಾರ ಸ್ವಾಗತಿಸಿ, ವಂದಿಸಿದರು.
ಒಟ್ಟು 135 ಜನರ ಕಣ್ಣು, ರಕ್ತದ ಒತ್ತಡ ಮತ್ತು ಸಕ್ಕರೆ ರೋಗವನ್ನು ಉಚಿತವಾಗಿ ಪರೀಕ್ಷಿಸಲಾಯಿತು. ಪೊರೆ ಇದ್ದ 46 ಜನರನ್ನು ಶಸ್ತ್ರಚಿಕಿತ್ಸೆಗೆ ಅಯ್ಕೆಮಾಡಿ ಹುಬ್ಬಳ್ಳಿಯ ಡಾ| ಎಂ. ಎಂ. ಜೋಶಿ ಆಸ್ಪತ್ರೆಗೆ ಕಳಿಸಲು ವ್ಯವಸ್ಥೆ ಮಾಡಲಾಯಿತು.


