ಖಾನಪೇಠ ಧನಲಕ್ಷ್ಮಿ ಸಹಕಾರಿ ಸಕ್ಕರೆಕಾರ್ಖಾನೆಯ ಆವರಣದಲ್ಲಿ ನಡೆದ ವಾರ್ಷಿಕ ಸರ್ವ ಸಾಧಾರಣ ಸಭೆಯನ್ನು ಆಡಳಿತ ಮಂಡಳಿಯ ಅಧ್ಯಕ್ಷ ಮಲ್ಲಣ್ಣ ಯಾದವಾಡ ಉದ್ಘಾಟಿಸಿದರು.

WhatsApp Group Join Now

ಕಳೆದ 15 ವರ್ಷಗಳಿಂದ ಕಾರ್ಖಾನೆಯ ಆಗು ಹೋಗುಗಳನ್ನು ಅತ್ಯಂತ ಅಚ್ಚುಕಟ್ಟಾಗಿ ನಿಭಾಯಿಸಿ ಪ್ರಗತಿಯತ್ತ ಕೊಂಡೈದು ರೈತಪರವಾಗಿ ಶ್ರಮಿಸಲಾಗಿದೆ ಎಂದು ಮಾಜಿ ಶಾಸಕ ಮಹಾದೇವಪ್ಪ ಯಾದವಾಡ ಹೇಳಿದರು.

ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಖಾನಪೇಠದ ಧನಲಕ್ಷ್ಮಿ ಸಹಕಾರಿ ಸಕ್ಕರೆ ಕಾರ್ಖಾನೆಯ ಆವರಣದಲ್ಲಿ ಮಂಗಳವಾರ ಜರುಗಿದ ವಾರ್ಷಿಕ ಸರ್ವ ಸಾಧಾರಣ ಸಭೆಯನ್ನು ಆಡಳಿತ ಮಂಡಳಿಯ ಅಧ್ಯಕ್ಷ ಮಲ್ಲಣ್ಣ ಯಾದವಾಡ ಉದ್ಘಾಟಿಸಿ ಮಾತನಾಡಿದ ಅವರು, ಶೇರು ಸದಸ್ಯರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ 12 ವರ್ಷಗಳಿಂದ ರಿಯಾಯತಿ ದರದಲ್ಲಿ ಸಕ್ಕರೆ ವಿತರಣೆ ಮಾಡುತ್ತಿದ್ದೇವೆ. ಆಡಳಿತ ಮಂಡಳಿ ಲೀಜ್ ಪಡೆದ ಕಂಪನಿಯ ಪರವಾಗಿ ಇಲ್ಲ. ಸದಾ ರೈತರ ಪರವಾಗಿದ್ದು, ರೈತರ ಸಮಸ್ಯೆಗಳ ಪರಿಹಾರಕ್ಕೆ ಬದ್ಧವಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ವಾರ್ಷಿಕ ವರದಿ ವಾಚಿಸಿ ಮಾತನಾಡಿದ ಆಡಳಿತ ಮಂಡಳಿಯ ಅಧ್ಯಕ್ಷ ಮಲ್ಲಣ್ಣ ಯಾದವಾಡ ಅವರು, ರೈತರ, ಶೇರುದಾರರ ಪರವಾಗಿ ಆಡಳಿತ ಮಂಡಳಿ ಕೆಲಸ ಮಾಡುತ್ತಿದೆ. ಕಾರ್ಖಾನೆಯ ಪ್ರಗತಿಗೆ ಸಹಕಾರ ನೀಡಿದ ಸರ್ವರಿಗೂ ಆಡಳಿತ ಮಂಡಳಿ ಚಿರಋಣಿಯಾಗಿರುತ್ತದೆ. ಮುಂದೆಯೂ ಶೇರುದಾರರ ಹಾಗೂ ರೈತರ ಸಹಾಯ ಸಹಕಾರ ಅಗತ್ಯವಿದೆ ಎಂದು ಮನವಿ ಮಾಡಿದರು.
ಸಾನಿಧ್ಯ ವಹಿಸಿದ್ದ ಕಿಲ್ಲಾತೊರಗಲ್ ಗಚ್ಚಿನ ಹಿರೇಮಠದ ಶ್ರೀ ಚನ್ನಮಲ್ಲ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಬೇರೆ ಕಾರ್ಖಾನೆಗಳಿಗೆ ಹೋಲಿಕೆ ಮಾಡಿದಾಗ ಸ್ಥಳೀಯ ಲೀಜ್ ಪಡೆದ ಇಐಡಿ ಪ್ಯಾರಿ ಕಂಪನಿಯವರು ರೈತರಿಗೆ ಕಡಿಮೆ ಬಿಲ್ ನೀಡುತ್ತಿದ್ದಾರೆ. ಆಡಳಿತ ಮಂಡಳಿಯ ಅಧಿಕಾರಿಗಳು ಧರ್ಪದಿಂದ ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ. ಆದ್ದರಿಂದ ಇದರ ನಿಗಾವಹಿಸಬೇಕು ಎಂದು ಹೇಳಿದರು.

ಈ ವೇಳೆ ಕಾರ್ಖಾನೆಯ ಉಪಾಧ್ಯಕ್ಷ ಬಸನಗೌಡ ದ್ಯಾಮನಗೌಡ್ರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರವಿ ಹರವಿ ನಿರೂಪಿಸಿ, ವಂದಿಸಿದರು. ಆಡಳಿತ ಮಂಡಳಿಯ ನಿರ್ದೇಶಕರಾದ ಅಡಿವೆಪ್ಪ ಸುರಗ, ಬಿ.ಎಂ.ತುಪ್ಪದ, ಐ.ಎಸ್. ಹರನಟ್ಟಿ, ಬಾಳಪ್ಪ ಹಂಜಿ, ಎಂ.ಎಂ. ಆತಾರ, ಎಸ್.ಜಿ. ಪಾಟೀಲ, ಪಿ.ಬಿ. ಪಾಟೀಲ, ಡಿ.ಎನ್. ದೇವರಡ್ಡಿ, ಎಸ್.ಎಲ್. ಡುಳ್ಳೋಳ್ಳಿ, ಶಿವಪ್ಪ ಮೇಟಿ, ಸಿ.ಎಸ್. ರಜಪೂತ, ವೈ.ಐ. ಚಿಪ್ಪಲಕಟ್ಟಿ, ಬಿ.ವ್ಹಿ.ಪಾಟೀಲ, ಎನ್.ಎಸ್. ಚಾಕಲಬ್ಬಿ, ಶಶಿಕಲಾ ಸೋಮಗೊಂಡ, ಶ್ರೀನಿವಾಸ್ ಕರದಿನ, ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕಿ ಶಾಹಿನ್ ಅಖ್ತರ ಭಾಗವಹಿಸಿದ್ದರು

About The Author