ಮಳೆಯಿಂದ ಮನೆ ಕುಸಿದು ಗಂಭೀರ ಗಾಯ ಸ್ಥಳಕ್ಕೆ ತಹಶೀಲ್ದಾರ ಮಲ್ಲಿಕಾರ್ಜುನ ಹೆಗ್ಗನ್ನವರ್ ಭೇಟಿ ನೀಡಿದರು

WhatsApp Group Join Now

ಬೆಳಗಾವಿ ಜಿಲ್ಲೆ ಸವದತ್ತಿ ಪಟ್ಟಣದ ವಾರ್ಡ್ ನಂಬರ್ 22 ರ ರಾಮಪೂರಸೈಟದ ವ್ಯಾಪ್ತಿಯ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಮಂಗಳವಾರ ಮಧ್ಯರಾತ್ರಿ ಮನೆ ಕುಸಿದಿರುವ ಘಟನೆ ನಡೆದಿದೆ.
ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ
ಮನೆಯಲ್ಲಿದ್ದ ಯಲ್ಲವ್ವ ನಾಗಪ್ಪ ಯಮನೂರ,( 60 ) ಅವರನ್ನು ತಾಲೂಕಾ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿ ನಂತರ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.
ಘಟನಾ ಸ್ಥಳಕ್ಕೆ ತಹಶೀಲ್ದಾರ ಮಲ್ಲಿಕಾರ್ಜುನ ಹೆಗ್ಗಣ್ಣವರ್ ಭೇಟಿ ನೀಡಿ ಸರ್ಕಾರದಿಂದ ಹಾನಿಗೊಳಗಾದ ಮನೆಗೆ ಶೀಘ್ರ ಪರಿಹಾರ ನೀಡುವಂತೆ ತಿಳಿಸಿದರು .
ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಸಂಗನಬಸಯ್ಯ ಗದಗಿಮಠ, ಅಭಿಯಂತರು ದಂಡಿನ, ಶಿವಾಜಿ ಕುದರಿ,ಕಂದಾಯ ನಿರೀಕ್ಷಕರು ಎಸ್,ಎಂ,ಮುದಗಲ್,ಗ್ರಾಮ ಆಡಳಿತಾಧಿಕಾರಿ
ರಾಜೇಶ್ವರಿ ಹಡಪದಪ್ರಸಾದ ಅಂಬಿಗೇರ,ಪ್ರವೀಣ ಮುನವಳ್ಳಿ ಪ್ರವೀಣ ಪಟ್ಟಣಶೆಟ್ಟಿ,ಪಕ್ಕೀರಪ್ಪ ಸುತಗಟ್ಟಿ, ಇದ್ದರು.

About The Author