12 August 2026
Advertisement
ರಾಜ್ಯ

ರಾಮದುರ್ಗ ಗ್ರಾಮ ಆಡಳಿತ ಅಧಿಕಾರಿಗಳ ಅನಿರ್ದಿಷ್ಟಾವಧಿ ಮುಷ್ಕರ

WhatsApp Group Join Now

ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಗ್ರಾಮ ಆಡಳಿತ ಅಧಿಕಾರಿಗಳು ನಾನಾ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಗುರುವಾರದಿಂದ ಅನಿರ್ದಿಷ್ಟಾವಧಿ ಮುಷ್ಕರ ಕೈಗೊಂಡಿದ್ದು, ಗ್ರಾಮ ಪಂಚಾಯಿತಿ ಸೇವೆಗಳಲ್ಲಿ ವ್ಯತ್ಯಯವಾಗಲಿದೆ.
ಬೆಳೆ ಸಮೀಕ್ಷೆ, ಕೃಷಿ ಗಣತಿ, ನೀರಾವರಿ ಗಣತಿ, ದಿಶಾಂಕ್, ವೋಟರ್ ಹೆಲ್ತ್‌ಲೈನ್, ಪೌತಿ ಆಂದೋಲನ ಆ್ಯಪ್, ಸಿ-ವಿಜಿಲ್ ಆ್ಯಪ್, ಇ-ಆಫೀಸ್, ಹಕ್ಕುಪತ್ರ, ಆಧಾರ್ ಸೀಡ್, ಸಂಯೋಜನೆ, ಲ್ಯಾಂಡ್ ಬಿಟ್ , ನಮೂನೆ 1-5ರ ವೆಬ್ ಅಪ್ಲಿಕೇಶನ್, ಸಂರಕ್ಷಣೆ, ನವೋದಯ, ಗರುಡ ಆಪ್, ಭೂಮಿ, ಬೆಳೆ ಸಮೀಕ್ಷೆಯ ಅನುಮೋದನೆ ವೆಬ್ ಆಪ್,
ಪಿ. ಎಂ. ಕಿಸಾನ ವೆಬ್ಆಪ್, ಸೇರಿದಂತೆ ಇನ್ನಿತರೆ ಸೇವೆಗಳನ್ನು ಸ್ಥಗಿತಗೊಳಿಸಿ ರಾಜ್ಯದ ಎಲ್ಲ ತಾಲೂಕು ಕಚೇರಿಗಳ ಮುಂದೆ ಇಂದಿನಿಂದ ಮುಷ್ಕರ ನಡೆದಿದ್ದು.
”ಕಂದಾಯ ಇಲಾಖೆಯನ್ನು ಸಂಪೂರ್ಣ
ಡಿಜಿಟಲೀಕರಣಗೊಳಿಸುತ್ತಿದ್ದು, ಕಾರ್ಯದೊತ್ತಡ ಹೆಚ್ಚಾಗಿದೆ.
ತಾಂತ್ರಿಕ ಅರ್ಹತೆ ಇಲ್ಲದ ಗ್ರಾಮ ಆಡಳಿತ ಅಧಿಕಾರಿಗಳ ಮೂಲಕ ತಾಂತ್ರಿಕ ಕೆಲಸ ಕಾರ್ಯಗಳನ್ನು ನಿರ್ವಹಿಸಲಾಗುತ್ತಿದೆ.
ವೇತನ ಹೆಚ್ಚಳ ಸೇರಿದಂತೆ ಇನ್ನಿತರೆ ಬೇಡಿಕೆಗಳ ಈಡೇರಿಕೆಗೆ ಹಲವು ಸಲ ಮನವಿ ಸಲ್ಲಿಸಿದ್ದರೂ ಸರಕಾರ ಸ್ಪಂದಿಸುತ್ತಿಲ್ಲ.
ಹೀಗಾಗಿ, ಎಲ್ಲ ಸೇವೆಗಳನ್ನು ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಂಡಿದ್ದು.
ಬೇಡಿಕೆಗಳು ಈಡೇರುವವರೆಗೆ ಮುಷ್ಕರ ಕೈಬಿಡುವುದಿಲ್ಲ.” ಎಂದು ರಾಮದುರ್ಗ ಗ್ರಾಮ ಆಡಳಿತ ಸಂಘದ ಅಧ್ಯಕ್ಷ ಶಿವು ಗೊರವನಕೊಳ್ಳ ಹೇಳಿದರು.

ಅಧಿಕಾರಿಗಳ ಬೇಡಿಕೆಗಳೇನು?
ತಾಂತ್ರಿಕ ಹುದ್ದೆಗಳಿಗೆ ನೀಡುವ ವೇತನ ಶ್ರೇಣಿ ನೀಡಬೇಕು.
ಕಚೇರಿ, ಗುಣಮಟ್ಟದ ಮೊಬೈಲ್, ಡೇಟಾ, ಸಿಮ್ ನೀಡಬೇಕು.
ಪ್ರಿಂಟರ್ ಹಾಗೂ ಸ್ಕ್ಯಾನರ್, ಲ್ಯಾಪ್‌ಟಾಪ್, ಗೂಗಲ್ ಕ್ರೋಮ್ ಬುಕ್ ಒದಗಿಸಬೇಕು.
ಸರಕಾರಿ ರಜಾ ದಿನಗಳಂದು ಮೆಮೊ ಕೊಡುವ ಅಧಿಕಾರಿಗಳ ವಿರುದ್ಧ ಕ್ರಮ.
ಅಂತರ ಜಿಲ್ಲಾ ವರ್ಗಾವಣೆ ನಿಯಮ 16 (ಎ) ಉಪಖಂಡ (2) ಮರುಸೇರ್ಪಡೆ.
ಪತಿ-ಪತ್ನಿ ವರ್ಗಾವಣೆ ಪ್ರಕರಣವನ್ನು ಪರಿಗಣಿಸಬೇಕು.
ಗ್ರಾಮ ಆಡಳಿತ ಅಧಿಕಾರಿ ಹುದ್ದೆಯನ್ನು ಆಹಾರ ನಿರೀಕ್ಷಕ ಹುದ್ದೆಗೆ ಪದೋನ್ನತಿ.
ಕೆಲಸದ ಅವಧಿ ಮುಗಿದ ಬಳಿಕ ಇಲಾಖೆಯ ವರ್ಚುಯಲ್ ಸಭೆಗಳನ್ನು ನಡೆಸಬಾರದು.
ಪ್ರಯಾಣ ಭತ್ಯೆಯನ್ನು 500 ರೂ.ಗಳಿಂದ 3000 ರೂ.ಗಳಿಗೆ ಹೆಚ್ಚಳ.
ಕರ್ತವ್ಯ ನಿರತದಲ್ಲಿ ಸಾವನ್ನಪ್ಪಿದ್ದರೆ ಅವರ ಕುಟುಂಬಸ್ಥರಿಗೆ 25 ಲಕ್ಷ ರೂ. ಪರಿಹಾರ ನೀಡಬೇಕು

ಮುಷ್ಕರ ವೇಳೆ ಗೌರವ ಅಧ್ಯಕ್ಷರಾದ ರಂಗನಾಥ್ ದಾಸರ, ಉಪಾಧ್ಯರಾದ ಲೋಕೇಶ್ ಚವಾಣ್, ಖಜಾಂಚಿ ಶ್ರೀ ಪ್ರವೀಣ್ ಖಾನಾಪುರ, ಪ್ರಧಾನ ಕಾರ್ಯದರ್ಶಿ ಶ್ರೀ ಮಹೇಶ್ ತೆಂಗಿನಕಾಯಿ ನಾರಾಯಣ ಗುಂಜೇರಿ, ಸಂತೋಷ್ ಬಿಳಗಿಕರ, ಸಂಜು ಹಿರೇಮಠ,ನಿಂಗನಗೌಡ ಚಿಗಡಮ್ಮನವರ,ಲಕ್ಷ್ಮಣ ಉಪ್ಪಾರ್, ಸುನಿಲ್ ನರಗುಂದ್, ಕಿರಣ ಮುಗನೂರ, ಮಹಾಂತೇಶ್ ಕೂಡಳ್ಳಿ, ಶಿವಲೀಲಾ ಬಾಗೇವಾಡಿ, ರೇಖಾ ಹುಲ್ಲಣ್ಣವರ, ಫಾತಿಮಾ ಅತ್ತಾರ, ಸುನಂದಾ ತಿಮ್ಮಾಪುರ ಅಶ್ವಿನಿ ಹವೇಲಿ, ರೂಬಿನ ಬುರ್ಲಕಟ್ಟಿ ಹಾಗೂ ಪಧಾಧಿಕಾರಿಗಳು ಇದ್ದರು

About The Author