ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಅಧಿವೇಶನದ ಅಧ್ಯಕ್ಷತೆ ವಹಿಸಿ 100 ವರ್ಷ ತುಂಬಿದ ಕಾರಣ ಗಾಂಧಿ ನಡಿಗೆ ಕಾರ್ಯಕ್ರಮದಲ್ಲಿ ಪ್ರತಿಜ್ಞಾ ವಿಧಿ ಸ್ವಿಕರಿಸಲಾಯಿತು.

WhatsApp Group Join Now

ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ತೇರಬಜಾರದಲ್ಲಿರುವ ಗಾಂಧಿ ಪುತ್ತಳಿಗೆ ಪುಷ್ಪನಮನ ಸಲ್ಲಿಸಿ ಪಾದಯಾತ್ರೆ ಮುಖಾಂತರ ತಾಲೂಕಾ ಪಂಚಾಯತ ಶಾಸಕರ ಕಚೇರಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ಬಿ. ರಂಗನಗೌಡರ ಅವರು ಪ್ರತಿಜ್ಞೆ ವಿಧಿ ಸಲ್ಲಿಸಿ ಮಾತನಾಡಿದರು

ಮಹಾತ್ಮ ಗಾಂಧೀಜಿಯವರು ಬೆಳಗಾವಿಯಲ್ಲಿ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಅಧಿವೇಶನದ ಅಧ್ಯಕ್ಷತೆ ವಹಿಸಿ 100 ವರ್ಷ ತುಂಬಿದ ಕಾರಣ ವಿಜೃಂಭನೆಯಿಂದ ಗಾಂಧಿ ಜಯಂತಿಯನ್ನು ಆಚರಣೆ ಮಾಡಲಾಗುತ್ತಿದೆ.
ಮಹಾತ್ಮ ಗಾಂಧೀಜಿಯವರು ಸ್ವಾತಂತ್ರ್ಯ ಕಲ್ಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿ ನಮಗೆ ಸ್ವಾತಂತ್ರ್ಯ ದೊರಕಿಸಿಕೊಟ್ಟ ಮಹಾನ್ ನಾಯಕರು, ಸಮ ಸಮಾಜದ ಕನಸು ಕಂಡವವರು ಇವರ ಮಾರ್ಗದಲ್ಲಿ ನಾವೆಲ್ಲರೂ ಸಾಗಬೇಕಿದೆ ಎಂದರು ಹೇಳಿದರು.
ಕಾಂಗ್ರೆಸ್ ಮುಖಂಡ ಪ್ರದೀಪ ಪಟ್ಟಣ ಮಾತನಾಡಿ, ಗಾಂಧೀಜಿಯವರು ವಿಶ್ವನಾಯಕ, ಅಹಿಂಸೆ, ಸಮಾನತೆ ಸಮಾರಸ್ಯ, ಸ್ವಾವಲಂಬನೆ ಮತ್ತು ಸ್ವಚ್ಚ ಗ್ರಾಮ ಸ್ವರಾಜ್ಯದ ಕನಸು ಹೊಂದಿದ ಅವರು ಎಲ್ಲರೂ ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸಬೇಕಿದೆ ಎಂದು ಕರೆ ನೀಡಿದರು.

ಈ ವೇಳೆ ಕೆ.ಪಿ.ಸಿ.ಸಿ ಸದಸ್ಯ ಸುರೇಶ ಪತ್ತೇಪೂರ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೋಮಶೇಖರ ಸಿದ್ದಲಿಂಗಪ್ಪನವರ, ಮಹಿಳಾಧ್ಯಕ್ಷರಾದ ರಾಜೇಶ್ವರಿ ಮೆಟಗುಡ್ಡ, ಗಾಯತ್ರಿ ದೇವಾಂಗಮಠ, ಪುರಸಭೆಯ ಸದಸ್ಯರಾದ ಸಂಗೀತಾ ರಾಯಬಾಗ, ಇಮಾಮ ಕಲಾದಗಿ, ಮಹೆಬೂಬ ತೊರಗಲ್, ಮುಖಂಡರಾದ ರಾಜು ಮಾನೆ, ಪ್ರಕಾಶ ತಳವಾರ, ಶಿವಾನಂದ ಚಿಕ್ಕೋಡಿ, ಜಹೂರ ಹಾಜಿ, ವಿಜಯಕುಮಾರ ರಾಠೋಡ, ಚಿದಾನಂದ ದೊಡಮನಿ, ಕೃಷ್ಣಾ ಪಾಟೀಲ ಸೇರಿದಂತೆ ಅನೇಕರು ಭಾಗವಹಿಸಿದ್ದರು

About The Author